ಕಟಕ್: ವೇಗಿ ನವ್ದೀಪ್ ಸೈನಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಪ್ರಮುಖ ಎರಡು ವಿಕೆಟ್ ಪಡೆದು ವೃತ್ತಿ ಜೀವನದ ಆರಂಭವನ್ನು ಸ್ಮರಣೀಯವನ್ನಾಗಿಸಿಕೊಂಡಿದ್ದಾರೆ.
ಆಗಸ್ಟ್ 3 ರಂದು ಭಾರತದ ಟಿ20 ತಂಡದ ಪರ ಪದಾರ್ಪಣೆ ಮಾಡಿದ್ದ ನವ್ದೀಪ್ ಸೈನಿ ಇಂದು ನಡೆದ ವಿಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ ಭಾರತದ 229 ಆಟಗಾರನಾಗಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಕಾಲಿಟ್ಟರು. ನಾಯಕ ವಿರಾಟ್ ಕೊಹ್ಲಿ ಕ್ಯಾಪ್ ನೀಡುವ ಮೂಲಕ ಏಕದಿನ ತಂಡಕ್ಕೆ ಯುವ ವೇಗಿಯನ್ನು ಬರ ಮಾಡಿಕೊಂಡರು.
-
Will Saini have a debut to remember?#INDvWI #TeamIndia @paytm pic.twitter.com/dyq4tuG6MK
— BCCI (@BCCI) December 22, 2019 " class="align-text-top noRightClick twitterSection" data="
">Will Saini have a debut to remember?#INDvWI #TeamIndia @paytm pic.twitter.com/dyq4tuG6MK
— BCCI (@BCCI) December 22, 2019Will Saini have a debut to remember?#INDvWI #TeamIndia @paytm pic.twitter.com/dyq4tuG6MK
— BCCI (@BCCI) December 22, 2019
ಕಾಲಿಟ್ಟ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಟಗಾರ ಶಿಮ್ರಾನ್ ಹೆಟ್ಮೈರ್ ವಿಕೆ ಪಡೆದ ಸೈನಿ, ತಮ್ಮ ನಂತರದ ಓವರ್ನಲ್ಲಿ 38 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ರಾಸ್ಟನ್ ಚೇಸ್ರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ.
ವಿಂಡೀಸ್ ವಿರುದ್ಧವೇ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಮೂರು ವಿಕೆಟ್ ಪಡೆದು ಮಿಂಚಿದ್ದ ಸೈನಿ ಏಕದಿನ ಪಂದ್ಯದಲ್ಲೂ ವಿಂಡೀಸ್ಗೆ ಕಂಟಕಪ್ರಾಯರಾಗಿದ್ದಾರೆ.