ETV Bharat / sports

ಭಾರತ-ವೆಸ್ಟ್‌ ಇಂಡೀಸ್‌ ಟಿ-ಟ್ವೆಂಟಿ ಸರಣಿ: ಎರಡು ಪಂದ್ಯಗಳಿಂದ ರಸೆಲ್‌​ ಔಟ್​ - ಇಂಡಿಯಾ ವರ್ಸಸ್​ ವೆಸ್ಟ್​ ಇಂಡೀಸ್​​​

ಟೀಂ ಇಂಡಿಯಾ ವಿರುದ್ಧದ ಟಿ-20 ಸರಣಿ ಆರಂಭಕ್ಕೂ ಮುನ್ನವೇ ವೆಸ್ಟ್ ಇಂಡೀಸ್ ತಂಡಕ್ಕೆ ಆಘಾತವಾಗಿದ್ದು, ಆಲ್​ರೌಂಡರ್​ ಆಂಡ್ರೆ ರಸೆಲ್​ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಆಂಡ್ರೆ ರಸ್ಸೆಲ್
author img

By

Published : Aug 2, 2019, 10:24 PM IST

ಫ್ಲೋರಿಡಾ(ಯುನೈಟೆಡ್​​ ಸ್ಟೇಟ್): ನಾಳೆಯಿಂದ ಚುಟುಕು ಕ್ರಿಕೆಟ್​ ದೈತ್ಯ ಹಾಗೂ ಟೀಂ ಇಂಡಿಯಾ ನಡುವೆ ಟಿ-20 ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದೆ. ಇದರ ಮಧ್ಯೆ ಕೆರಿಬಿಯನ್​ ತಂಡಕ್ಕೆ ಆಘಾತವಾಗಿದೆ.

ತಂಡದ ಸ್ಪೋಟಕ ಬ್ಯಾಟ್ಸ್​​ಮನ್​​​​ ಆಂಡ್ರೆ ರಸೆಲ್‌ ಮೊದಲೆರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ. ನಿರಂತರ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿರುವ ಅವರು ತಂಡದಿಂದ ಹೊರ ಬೀಳುತ್ತಿದ್ದಂತೆ ಟೀಂ ಇಂಡಿಯಾ ತಂಡಕ್ಕೆ ಸ್ವಲ್ಪ ಮಟ್ಟಿನ ರಿಲೀಫ್​ ಸಿಕ್ಕಿದೆ. ಈ ಹಿಂದೆ ಐಪಿಎಲ್​​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರಸೆಲ್​ ಟಿ-20 ಕ್ರಿಕೆಟ್​ ಸರಣಿ ಆರಂಭಕ್ಕೂ ಮುನ್ನವೇ ಹೊರಬಿದ್ದಿರುವುದು ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಸೆಲ್​​​ ಬದಲಿಗೆ ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ ಜೇಸನ್‌ ಮೊಹಮ್ಮದ್​ಗೆ ಚಾನ್ಸ್​​ ನೀಡಿದೆ. 32 ವರ್ಷದ ಮೊಹಮ್ಮದ್‌ ಈಗಾಗಲೇ ವೆಸ್ಟ್‌ ಇಂಡೀಸ್‌ ಪರ 9 ಅಂತಾರಾಷ್ಟ್ರೀಯ ಟಿ20 ಪಂದ್ಯ ಸೇರಿದಂತೆ ಅನೇಕ ಏಕದಿನ ಪಂದ್ಯಗಳಲ್ಲೂ ಆಡಿರುವ ಅನುಭವಿ ಆಟಗಾರ.

ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್​​ ಟಿ20 ಸರಣಿಯಲ್ಲಿ ಭಾಗಿಯಾಗಿದ್ದ ರಸೆಲ್‌​ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಇನ್ನು ವಿಶ್ವಕಪ್​ ಟೂರ್ನಿಯ ವೇಳೆ ಅರ್ಧಕ್ಕೆ ಆಟ ನಿಲ್ಲಿಸಿದ ಅವರು ತವರಿಗೆ ವಾಪಸ್ಸಾಗಿದ್ದರು.

Intro:Body:

ಟಿ-20 ಕ್ರಿಕೆಟ್​ ಸರಣಿ ಆರಂಭಕ್ಕೂ ಮುನ್ನವೇ ಆಘಾತ: ಎರಡು ಪಂದ್ಯಗಳಿಂದ ಆಂಡ್ರೆ ರಸ್ಸೆಲ್​ ಔಟ್​! 

ಯುನೈಟೆಡ್​​ ಸ್ಟೇಟ್​​(ಅಮೆರಿಕ): ನಾಳೆಯಿಂದ ಕ್ರಿಕೆಟ್​ ದೈತ್ಯ ಹಾಗೂ ಟೀಂ ಇಂಡಿಯಾ ನಡುವೆ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದ್ದು, ಮೊದಲ ಟಿ20 ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿಲಿವೆ. ಇದರ ಮಧ್ಯೆ ಕೆರಿಬಿಯನ್​ ತಂಡಕ್ಕೆ ಬಿಗ್​ ಶಾಕ್​ ಎದುರಾಗಿದೆ. 

ತಂಡದ ಸ್ಪೋಟಕ ಬ್ಯಾಟ್ಸ್​​ಮನ್​​​​ ಆಂಡ್ರೆ ರಸ್ಸೆಲ್​​ ಮೊದಲೆರಡು ಟಿ-20 ಪಂದ್ಯಗಳಿಂದ ಹೊರಬಿದ್ದಿದ್ದಾರೆ. ನಿರಂತರ ಮೊಣಕಾಲು ಸಮಸ್ಯೆಯಿಂದ ಬಳಲುತ್ತಿರುವ ಆಲ್​ರೌಂಡರ್​ ಇದೀಗ ಮೊದಲೆರಡು ಪಂದ್ಯಗಳಿಗೆ ಅಲಭ್ಯವೆಂದು ಹೇಳಿದ್ದಾರೆ. 

ಅವರ ಬದಲಿಗೆ ವೆಸ್ಟ್​ ಇಂಡೀಸ್​ ಕ್ರಿಕೆಟ್​ ಮಂಡಳಿ ಬದಲಿ ಆಟಗಾರನಿಗೆ ಮಣೆ ಹಾಕಿದ್ದು, ಜೇಸನ್‌ ಮೊಹಮ್ಮದ್​ಗೆ ಚಾನ್ಸ್​​ ನೀಡಿದ್ದಾರೆ. 32 ವರ್ಷದ ಮೊಹಮ್ಮದ್‌ ಈಗಾಗಲೇ ವೆಸ್ಟ್‌ ಇಂಡೀಸ್‌ ಪರ 9 ಅಂತಾರಾಷ್ಟ್ರೀಯ ಟಿ20 ಪಂದ್ಯ  ಸೇರಿದಂತೆ ಅನೇಕ ಏಕದಿನ ಪಂದ್ಯಗಳಲ್ಲೂ ಆಡಿರುವ ಅನುಭವ ಹೊಂದಿದ್ದಾರೆ. 

ಸದ್ಯ ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್​​ ಟಿ20 ಸರಣಿಯಲ್ಲಿ ಭಾಗಿಯಾಗಿದ್ದ ರಸ್ಸೆಲ್​ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಇನ್ನು ವಿಶ್ವಕಪ್​ ಟೂರ್ನಿಯಲ್ಲಿ ಆಲ್​ರೌಂಡರ್​ ರಸ್ಸೆಲ್​ ಅರ್ಧಕ್ಕೆ ತವರಿಗೆ ವಾಪಸ್​ ಆಗಿದ್ದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.