ಆ್ಯಂಟಿಗುವಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆರಿಬಿಯನ್ ತಂಡದ ವಿರುದ್ಧ ಕೊಹ್ಲಿ ಪಡೆ 318 ರನ್ಗಳ ಭರ್ಜರಿ ಜಯ ಸಾಧಿಸಿದೆ.
-
An incredible day of Test cricket.
— ICC (@ICC) August 25, 2019 " class="align-text-top noRightClick twitterSection" data="
West Indies are bowled out for 100 and India win the Test by 318 runs!#WIvIND pic.twitter.com/S7AZyd5nHb
">An incredible day of Test cricket.
— ICC (@ICC) August 25, 2019
West Indies are bowled out for 100 and India win the Test by 318 runs!#WIvIND pic.twitter.com/S7AZyd5nHbAn incredible day of Test cricket.
— ICC (@ICC) August 25, 2019
West Indies are bowled out for 100 and India win the Test by 318 runs!#WIvIND pic.twitter.com/S7AZyd5nHb
ಟೀಂ ಇಂಡಿಯಾ ನೀಡಿದ್ದ 419ರನ್ಗಳ ಗುರಿ ಬೆನ್ನತ್ತಿದ ವಿಂಡೀಸ್ ಆಟಗಾರರು, ಟೀಂ ಇಂಡಿಯಾ ವೇಗಿಗಳ ದಾಳಿಗೆ ತರಗೆಲೆಗಳಂತೆ ಉದುರಿಹೋದರು. ಕೆಮರ್ ರೋಚ್ 38, ಮಿಗುಯೆಲ್ ಕಮ್ಮಿನ್ಸ್ 19, ರೋಸ್ಟನ್ ಚೇಸ್ 12 ರನ್ ಗಳಿಸಿದ್ದು ಬಿಟ್ಟರೆ ಯಾವೊಬ್ಬ ಆಟಗಾರರು ಎರಡಂಕಿ ದಾಟಲಿಲ್ಲ. 100 ರನ್ ಗಳಿಸುವಷ್ಟರಲ್ಲೇ ವೆಸ್ಟ್ ಇಂಡೀಸ್ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.
-
Wow.
— ICC (@ICC) August 25, 2019 " class="align-text-top noRightClick twitterSection" data="
Jasprit Bumrah has figures of 8-4-7-5 😱
West Indies are in serious trouble.#WIvIND Live 🔽 https://t.co/egvDo7fncD pic.twitter.com/8lW4POFVHi
">Wow.
— ICC (@ICC) August 25, 2019
Jasprit Bumrah has figures of 8-4-7-5 😱
West Indies are in serious trouble.#WIvIND Live 🔽 https://t.co/egvDo7fncD pic.twitter.com/8lW4POFVHiWow.
— ICC (@ICC) August 25, 2019
Jasprit Bumrah has figures of 8-4-7-5 😱
West Indies are in serious trouble.#WIvIND Live 🔽 https://t.co/egvDo7fncD pic.twitter.com/8lW4POFVHi
ಕರಾರುವಕ್ಕು ಬೌಲಿಂಗ್ ನಡೆಸಿದ ಬುಮ್ರಾ 8 ಓವರ್ ಬೌಲಿಂಗ್ ಮಾಡಿ ಕೇವಲ 7 ರನ್ ಬಿಟ್ಟು ಕೊಟ್ಟು ಪ್ರಮುಖ 5 ವಿಕೆಟ್ ಪಡೆದು ಭಾರತದ ಗೆಲುವಿಗೆ ಕಾರಣರಾದರು. ಅಲ್ಲದೆ ಇಶಾಂತ್ ಶರ್ಮಾ 3, ಶಮಿ 2 ವಿಕೆಟ್ ಕಬಳಿಸಿದರು.
ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 297ರನ್ ಗಳಿಸಿದ್ರೆ, ವಿಂಡೀಸ್ 222 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ 343 ಗಳಿಸಿತ್ತು.