ಹೈದರಾಬಾದ್: ಭಾರತ ಮತ್ತು ವಿಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 6 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
-
India win!
— ICC (@ICC) December 6, 2019 " class="align-text-top noRightClick twitterSection" data="
Another wonderfully paced run-chase led by Virat Kohli, who also had some fun during his innings 📝
The Indian captain hit 94*, his highest score In T20Is 💪 #INDvWI pic.twitter.com/v3bQcRjbMC
">India win!
— ICC (@ICC) December 6, 2019
Another wonderfully paced run-chase led by Virat Kohli, who also had some fun during his innings 📝
The Indian captain hit 94*, his highest score In T20Is 💪 #INDvWI pic.twitter.com/v3bQcRjbMCIndia win!
— ICC (@ICC) December 6, 2019
Another wonderfully paced run-chase led by Virat Kohli, who also had some fun during his innings 📝
The Indian captain hit 94*, his highest score In T20Is 💪 #INDvWI pic.twitter.com/v3bQcRjbMC
208 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಟೀ ಇಂಡಿಯಾ 30 ರನ್ ಗಳಿಸುವಷ್ಟರಲ್ಲಿ ಸ್ಫೋಟಕ ಆಟಗಾರ ರೋಹಿತ್ ಶರ್ಮಾ 8 ರನ್ ಗಳಿಸಿ ನಿರ್ಗಮಿಸಿದ್ರು.
ಈ ವೇಳೆ ತಂಡಕ್ಕೆ ಆಸರೆಯಾದ ನಾಯಕ ವಿರಾಟ್ ಮತ್ತು ಕೆ.ಎಲ್.ರಾಹುಲ್ 100 ರನ್ಗಳ ಉತ್ತಮ ಜೊತೆಯಾಟ ನೀಡಿದ್ರು. ಬಿರುಸಿನ ಬ್ಯಾಟಿಂಗ್ ನಡೆಸಿದ ರಾಹುಲ್ ಉಪಯುಕ್ತ ಅರ್ಧ ಶತಕ ಸಿಡಿಸಿದ್ರು. ಇದೇ ವೇಳೆ ಅಂತರಾಷ್ಟ್ರೀಯ ಟಿ-20ಯಲ್ಲಿ ಅವರು ಒಂದು ಸಾವಿರ ರನ್ ಪೂರೈಸಿದ್ರು. 4 ಸಿಕ್ಸರ್, 5 ಬೌಂಡರಿಗಳ ನೆರವಿನಿಂದ 62 ರನ್ ಸಿಡಿಸಿದ ರಾಹುಲ್, ಖ್ಯಾರಿ ಪೀರೆಗೆ ವಿಕೆಟ್ ಒಪ್ಪಿಸಿದ್ರು.
-
Well played KL Rahul 👏 pic.twitter.com/tL9P1DtKeo
— ICC (@ICC) December 6, 2019 " class="align-text-top noRightClick twitterSection" data="
">Well played KL Rahul 👏 pic.twitter.com/tL9P1DtKeo
— ICC (@ICC) December 6, 2019Well played KL Rahul 👏 pic.twitter.com/tL9P1DtKeo
— ICC (@ICC) December 6, 2019
ಭರ್ಜರಿ ಬ್ಯಾಟಿಂಗ್ ನಡೆಸಿದ ನಾಯಕ ವಿರಾಟ್ ಕೊಹ್ಲಿ 94 ರನ್ ಕಲೆ ಹಾಕಿದ್ರು. ಇನ್ನು 9 ಎಸೆತಗಳಲ್ಲಿ 18 ರನ್ ಗಳಿಸಿದ ರಿಷಬ್ ಪಂತ್ ಕಾಟ್ರೇಲ್ಗೆ ವಿಕೆಟ್ ಒಪ್ಪಿಸಿ ಪೆವಿಯನ್ ಕಡೆ ಹೆಜ್ಜೆ ಹಾಕಿದ್ರು.
-
Well played KL Rahul 👏 pic.twitter.com/tL9P1DtKeo
— ICC (@ICC) December 6, 2019 " class="align-text-top noRightClick twitterSection" data="
">Well played KL Rahul 👏 pic.twitter.com/tL9P1DtKeo
— ICC (@ICC) December 6, 2019Well played KL Rahul 👏 pic.twitter.com/tL9P1DtKeo
— ICC (@ICC) December 6, 2019
ನಂತರ ಬಂದ ಶ್ರೇಯಸ್ ಐಯ್ಯರ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ್ರು. ಅಂತಿಮವಾಗಿ ಟೀಂ ಇಂಡಿಯಾ18.4 ಓವರ್ಗಳಲ್ಲಿ 209 ರನ್ ಗಳಿಸುವ ಗೆಲುವಿನ ದಡ ಸೇರಿತು. ಟೀಂ ಇಂಡಿಯಾ ಪರ ವಿರಾಟ್ ರನ್ ಗಳಿಸಿ ಔಟ್ ಆಗದೆ ಉಳಿದರು.ವೆಸ್ಟ್ ಇಂಡೀಸ್ ಪರ ಖ್ಯಾರಿ ಪೀರೆ 2, ಕಾಟ್ರೆಲ್ 1 ವಿಕೆಟ್ ಪಡೆದ್ರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡಿಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಯ್ತು. ಎರಡನೇ ಓವರ್ನಲ್ಲಿ ದೀಪಕ್ ಚಹಾರ್ ಎಸೆತದಲ್ಲಿ ಲೆಂಡ್ಲೆ ಸಿಮನ್ಸ್ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ನಿರ್ಗಮಿಸಿದ್ರು. ಆರಂಭದಿಂದಲೂ ಅಬ್ಬರಿಸಿದ ಲೆವಿಸ್ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದರು. ಕೇವಲ 17 ಎಸೆತಗಳಲ್ಲಿ 40 ರನ್ ಸಿಡಿಸಿ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಎಲ್ಬಿಗೆ ಬಲಿಯಾದ್ರು.
ನಂತರ ಜೊತೆಯಾದ ಶಿಮ್ರಾನ್ ಹೆಟ್ಮಯರ್ ಮತ್ತು ಬ್ರಾಂಡನ್ ಕಿಂಗ್ ಕೆಲಕಾಲ ಟೀಂ ಇಂಡಿಯಾ ಬೌಲರ್ಗಳನ್ನು ಕಾಡಿದ್ರು. ಉತ್ತಮವಾಗಿ ಬ್ಯಾಟ್ ಬೀಸಿದ ಬ್ರಾಂಡನ್ ಕಿಂಗ್ 23 ಎಸೆತಗಳಲ್ಲಿ 31 ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು.
ಭರ್ಜರಿ ಬ್ಯಾಟಿಂಗ್ ನಡೆಸಿದ ಹೆಟ್ಮಯರ್ ಅರ್ಧಶತಕ ಸಿಡಿಸಿದ್ರು. 56 ರನ್ ಗಳಿಸಿರುವಾಗ ಚಹಾಲ್ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಔಟ್ ಆದ್ರು. ಪೊಲಾರ್ಡ್ ಮತ್ತು ಹೆಟ್ಮಯರ್ ಜೋಡಿ ನಾಲ್ಕನೇ ವಿಕೆಟ್ಗೆ 71 ರನ್ಗಳ ಜೊತೆಯಾಟ ನೀಡಿದ್ರು. ಇತ್ತ ಬಿರುಸಿನ ಬ್ಯಾಟಿಂಗ್ ನಡೆಸಿದ ನಾಯಕ ಪೊಲಾರ್ಡ್ 18 ಎಸೆತದಲ್ಲಿ 37 ರನ್ ಸಿಡಿಸಿ ಚಹಾಲ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದ್ರು.
ಒಂದು ಹಂತದಲ್ಲಿ ಟೀಂ ಇಂಡಿಯಾವನ್ನು ಕಾಡಿದ್ದ ಇಬ್ಬರು ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ ಸೇರಿಸುವಲ್ಲಿ ಚಹಾಲ್ ಯಶಸ್ವಿಯಾದ್ರು. ಅಂತಿಮವಾಗಿ ವಿಂಡೀಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿದೆ. ಟೀಂ ಇಂಡಿಯಾ ಪರ ಚಹಾಲ್ 2, ದೀಪಕ್ ಚಹಾರ್, ವಾಷಿಂಗ್ಟನ್ ಸುಂದರ್, ಜಡೇಜಾ ತಲಾ 1 ವಿಕೆಟ್ ಪಡೆದರು.