ಮುಂಬೈ: ಟೆಸ್ಟ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಭಾರತ ತಂಡದಕ್ಕೆ ಬ್ಯಾಟಿಂಗ್ - ಬೌಲಿಂಗ್ಗಿಂತ ಸದ್ಯ ವಿಕೆಟ್ ಕೀಪರ್ ಆಯ್ಕೆಯೆ ಬಹುದೊಡ್ಡ ತಲೆನೋವಾಗಿತ್ತು. ಆದರೆ ಕೊಹ್ಲಿ ಆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
2018ರ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಗಾಯದ ಕಾರಣ ಟೆಸ್ಟ್ ತಂಡದಿಂದ ಹೊರಬಿದ್ದಿದ್ದರು. ಆ ವೇಳೆ, ತಂಡ ಸೇರಿಕೊಂಡ ರಿಷಭ್ ಪಂತ್ ಕೆಲವು ಇನ್ನಿಂಗ್ಸ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಆದರೆ, ಕಳೆದ ಕೆಲವು ಇನ್ನಿಂಗ್ಸ್ಗಳಲ್ಲಿ ಪಂತ್ ಹೇಳಿಕೊಳ್ಳುವ ಪ್ರದರ್ಶನ ತೋರುತ್ತಿಲ್ಲ. ಜೊತೆಗೆ ಭಾರತದಲ್ಲಿ ಈ ಟೂರ್ನಿ ನಡೆಯುತ್ತಿರುವುದರಿಂದ ಸ್ಪಿನ್ ಬೌಲರ್ಗೆ ತಕ್ಕನಾದ ಕೀಪರ್ ಅಗತ್ಯವಾಗಿರುವುದರಿಂದ ಹಿರಿಯ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ತಂಡಕ್ಕೆ ಮರಳಲಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ಖಚಿತಪಡಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಲ್ಲೂ ವೃದ್ಧಿಮಾನ್ ಸಹಾ ತಂಡದಲ್ಲಿರಲಿದ್ದಾರೆ. ಸ್ಪಿನ್ನರ್ಗಳಿಗೆ ನೆರವಾಗುವ ಭಾರತದ ಪಿಚ್ಗಳಲ್ಲಿ ಕೌಶಲ್ಯವುಳ್ಳ ವಿಕೆಟ್ ಕೀಪರ್ ಅಗತ್ಯವಿರುವುದರಿಂದ ಸಹಾ ನಮ್ಮ ಮೊದಲ ಆಯ್ಕೆ ಎಂದು ಸ್ಪಷ್ಟಪಡಿಸಿದ್ದಾರೆ.
ಟೆಸ್ಟ್ ಸರಣಿಯ ಮೊದಲ ಪಂದ್ಯ ಅಕ್ಟೋಬರ್ 2 ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದೆ.