ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೆ ಹಾಗೂ ಅಂತಿಮ ಟಿ20 ಪಂದ್ಯ ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕೊಹ್ಲಿ ಬಳಗ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದ್ದರೆ ಅತ್ತ ಮಳೆಯ ಭೀತಿಯೂ ಎದುರಾಗಿದೆ.
ಪಂದ್ಯ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಇದೇ ವೇಳೆ ಮಳೆ ಬರುವ ಸಾಧ್ಯತೆ ದಟ್ಟವಾಗಿದೆ. ನಿರಂತರ ಮಳೆ ಸುರಿದರೆ ಮಾತ್ರ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಸಣ್ಣಮಟ್ಟಿನ ಮಳೆಯಾದಲ್ಲಿ ತಕ್ಷಣವೇ ಮೈದಾನದಿಂದ ನೀರನ್ನು ಹೊರಹಾಕಬಲ್ಲ ಆಧುನಿಕ ತಂತ್ರಜ್ಞಾನವನ್ನು ಈ ಮೈದಾನ ಹೊಂದಿದೆ.
-
Game Face On ✌️✌️#TeamIndia #INDvSA pic.twitter.com/MQu6yVjfM8
— BCCI (@BCCI) September 22, 2019 " class="align-text-top noRightClick twitterSection" data="
">Game Face On ✌️✌️#TeamIndia #INDvSA pic.twitter.com/MQu6yVjfM8
— BCCI (@BCCI) September 22, 2019Game Face On ✌️✌️#TeamIndia #INDvSA pic.twitter.com/MQu6yVjfM8
— BCCI (@BCCI) September 22, 2019
ವಿರಾಟ್ ನೆಚ್ಚಿನ ಮೈದಾನ:
ಆರ್ಸಿಬಿ ಕಪ್ತಾನ ವಿರಾಟ್ ಕೊಹ್ಲಿಗೆ ಇದು ಅತ್ಯಂತ ನೆಚ್ಚಿನ ಮೈದಾನವಾಗಿದ್ದು, ಇಲ್ಲಿ ಅವರು ಅತ್ಯುತ್ತಮ ರನ್ ದಾಖಲಿಸಿದ್ದಾರೆ. ಈ ಮೈದಾನದಲ್ಲಿ ಒಟ್ಟಾರೆ 88 ಟಿ-20 ಪಂದ್ಯದಲ್ಲಿ ಕೊಹ್ಲಿ 2,573 ರನ್ ಗಳಿಸಿದ್ದಾರೆ.