ETV Bharat / sports

ಪಾಕ್​ ವಿರುದ್ಧ ಪಂದ್ಯ ಆಡಿ ಎಂದು ಭಾರತವನ್ನ ನಾವು ಕೇಳಲ್ಲ:  ಪಿಸಿಬಿ ಮುಖ್ಯಸ್ಥರ ಖಡಕ್​​ ಮಾತು

author img

By

Published : Jun 14, 2019, 2:20 PM IST

ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಶ್ವಕಪ್​ ಪಂದ್ಯಕ್ಕೆ 2 ದಿನಗಳಷ್ಟೇ ಬಾಕಿ ಇರುವಾಗ ಪಿಸಿಬಿ ಮುಖ್ಯಸ್ಥ ಇಶಾನ್​ ಮಣಿ ಹೊಸದೊಂದು ಹೇಳಿಕೆ ನೀಡಿ ಚರ್ಚೆ ಹುಟ್ಟುಹಾಕಿದ್ದಾರೆ.

ಪಿಸಿಬಿ ಮುಖ್ಯಸ್ಥ

ಇಸ್ಲಮಾಬಾದ್: ಪಾಕಿಸ್ತಾನ ತಂಡದೊಂದಿಗೆ ದ್ವಿಪಕ್ಷೀಯ ಸರಣಿ ಆಡುವಂತೆ ಭಾರತವನ್ನ ಪಾಕ್​ ಬೇಡಿಕೊಳ್ಳಲ್ಲ ಎಂದು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ ಮುಖ್ಯಸ್ಥ ಇಶಾನ್​ ಮಣಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಶ್ವಕಪ್​ ಪಂದ್ಯಕ್ಕೆ 2 ದಿನಗಳಷ್ಟೇ ಬಾಕಿ ಇರುವಾಗ ಇಶಾನ್​ ಮಣಿ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಕಳೆದ ಹಲವು ವರ್ಷಗಳಿಂದ ಹೆಚ್ಚಿನ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಹೀಗಾಗಿ ಪಾಕ್​ನಲ್ಲಿ ಮತ್ತೆ ಅಂತಾರಾಷ್ಟ್ರೀಯ ಪಂದ್ಯಗಳನ್ನ ಪ್ರಾರಂಭಿಸಲು ಇಶಾನ್​ ಪ್ಲಾನ್​ ಮಾಡಿದ್ದಾರೆ.

2013 ರಿಂದ ಭಾರತ ಮತ್ತು ಪಾಕಿಸ್ತಾನ ಐಸಿಸಿ ಆಯೋಜಿಸಿದ್ದ ಪಂದ್ಯಗಳಲ್ಲಷ್ಟೇ ಮುಖಾಮುಖಿಯಾಗಿವೆ. ಎರಡು ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಹಾಗಂತ ನಾವು ಸರಣಿ ಆಡುವಂತೆ ಭಾರತವನ್ನ ಬೇಡಿಕೊಳ್ಳಲ್ಲ ಎಂದು ಇಶಾನ್​ ಮಣಿ ಹೇಳಿದ್ದಾರೆ.

ವಿಶ್ವಕಪ್​ ಟೂರ್ನಿ ಮುಗಿದ ನಂತರ ಶ್ರೀಲಂಕಾ ತಂಡ ಪಾಕ್​ ಪ್ರವಾಸ ಕೈಗೊಳ್ಳಲಿದ್ದು, 2 ಟೆಸ್ಟ್​ ಪಂದ್ಯಗಳನ್ನ ಆಡಲಿದೆ. ನಂತರ ಪಾಕ್​, ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಮತ್ತೆ ಇದೇ ವರ್ಷ ಡಿಸೆಂಬರ್​ನಲ್ಲಿ ಪಾಕ್​ ಮತ್ತು ಶ್ರೀಲಂಕಾ ನಡುವೆ ದ್ವಿಪಕ್ಷೀಯ ಸರಣಿ ನಡೆಯಲಿದೆ ಎಂದು ಇಶಾನ್​ ಮಾಹಿತಿ ನೀಡಿದ್ದಾರೆ.

Intro:Body:

sp

Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.