ETV Bharat / sports

ಭಾರತ-ಕಿವೀಸ್ ಮೊದಲ ಟೆಸ್ಟ್: ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಟೀಂ ಇಂಡಿಯಾ

ದ್ವಿತೀಯ ಇನ್ನಿಂಗ್ಸ್​ ಬ್ಯಾಟಿಂಗ್ ನಡೆಸುತ್ತಿರುವ ಟೀಂ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡು 144 ರನ್​ ಗಳಿಸಿದ್ದು, 39 ರನ್​ಗಳ ಹಿನ್ನಡೆ ಅನುಭವಿಸಿದೆ.

author img

By

Published : Feb 23, 2020, 12:58 PM IST

ndia vs New Zealand,ಸಂಕಷ್ಟದಲ್ಲಿ ಟೀಂ ಇಂಡಿಯಾ
ಸಂಕಷ್ಟದಲ್ಲಿ ಟೀಂ ಇಂಡಿಯಾ

ವೆಲ್ಲಿಂಗ್ಟನ್​: ದ್ವಿತೀಯ ಇನ್ನಿಂಗ್ಸ್​​ನಲ್ಲಿ ಕಿವೀಸ್ ದಾಳಿಗೆ ಟೀಂ ಇಂಡಿಯಾ ಟಾಪ್​ ಆರ್ಡರ್​ ಬ್ಯಾಟ್ಸ್​​ಮನ್​ಗಳು ಪೆವಿಲಿಯನ್​ ಸೇರಿದ್ದಾರೆ. ಭಾರತ ತಂಡ ಮೊದಲ ಟೆಸ್ಟ್​ನ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡು 144 ರನ್​ ಗಳಿಸಿದ್ದು, 39 ರನ್​ಗಳ ಹಿನ್ನಡೆ ಅನುಭವಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲ್ಯಾಂಡ್​ ತಂಡ 348 ರನ್​ಗಳಿಗೆ ಆಲ್‌ಔಟ್​ ಆದನ ನಂತರ ದ್ವಿತೀಯ ಇನ್ನಿಂಗ್ಸ್​ ಆರಂಭಿಸಿದ ಟೀಂ ಇಂಡಿಯಾಕ್ಕೆ ಟ್ರೆಂಟ್​ ಬೋಲ್ಟ್​​ ಆಘಾತ ನೀಡಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ ವೈಫಲ್ಯ ಅನುಭವಿಸಿದ ಪೃಥ್ವಿ ಶಾ ದ್ವಿತೀಯ ಇನ್ನಿಂಗ್ಸ್​ನಲ್ಲಿ 14 ರನ್​ಗಳಿಸಿ ಪೆವಿಲಿಯನ್​ ಸೇರಿಕೊಂಡ್ರು.

ನಂತರ ಬಂದ ಪುಜಾರ ಎಚ್ಚರಿಕೆಯ ಆಟವಾಡಿದ್ರು. 81 ಎಸೆತಗಳನ್ನ ಎದುರಿಸಿದ ಪುಜಾರ ಕೆಲಹೊತ್ತು ಟಿವೀಸ್ ಬೌಲರ್​ಗಳನ್ನ ಕಾಡಿದ್ರು. ಆದ್ರೆ ಕೇವಲ 11 ರನ್​ ಗಳಿಸಿ ಬೋಲ್ಟ್​ ಎಸೆತದಲ್ಲಿ ಬೌಲ್ಡ್​ ಆಗುವ ಮೂಲಕ ನಿರಾಸೆ ಅನುಭವಿಸಿದ್ರು. ಆರಂಭದಿಂದಲೂ ಎಚ್ಚರಿಕೆಯ ಆಟವಾಡಿದ ಕನ್ನಡಿಗ ಮಯಾಂಕ್ ಅಗರ್ವಾಲ್ ಅರ್ಧಶತಕ ಸಿಡಿಸಿ ಸೌಥಿಗೆ ವಿಕೆಟ್​ ಒಪ್ಪಿಸಿದ್ರು.

ನಾಯಕ ವಿರಾಟ್​ ಕೊಹ್ಲಿ ಕೂಡ ಹೆಚ್ಚುಹೊತ್ತು ಕ್ರೀಸ್​ ಕಚ್ಚಿ ನಿಲ್ಲಲಿಲ್ಲ, 19 ರನ್​ಗಳಿಸಿ ಬೋಲ್ಟ್​ ಎಸೆತದಲ್ಲಿ ಕ್ಯಾಚ್​ ನೀಡಿ ನಿರ್ಗಮಿಸಿದ್ರು. ಟೀಂ ಇಂಡಿಯಾ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡು 144 ರನ್ ಗಳಿಸಿದ್ದು 39 ರನ್​ಗಳ ಹಿನ್ನಡೆ ಅನುಭವಿಸಿದೆ.

ಉಪನಾಯಕ ಅಜಿಂಕ್ಯಾ ರಹಾನೆ 25 ರನ್​ ಮತ್ತು ಹನುಮ ವಿಹಾರಿ 15 ರನ್​ ಗಳಿಸಿದ್ದು, 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕಿವೀಸ್​ ಪರ ಉತ್ತಮ ಸ್ಪೆಲ್ ಮಾಡಿದ ಬೋಲ್ಟ್ 3 ಮತ್ತು ಸೌಥಿ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್ 10 ವಿಕೆಟ್ ನಷ್ಟಕ್ಕೆ​ 165, ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್​ 10 ವಿಕೆಟ್ ನಷ್ಟಕ್ಕೆ 348

ETV Bharat Logo

Copyright © 2024 Ushodaya Enterprises Pvt. Ltd., All Rights Reserved.