ETV Bharat / sports

ಅಭ್ಯಾಸ ಪಂದ್ಯದಲ್ಲೂ 0,1,0.... ಪೃಥ್ವಿ, ಮಯಾಂಕ್​, ಗಿಲ್​​ರಿಂದ ಮತ್ತೆ ಕಳಪೆ ​ ಪ್ರದರ್ಶನ! - ಇಂಡಿಯಾ ವರ್ಸಸ್​ ನ್ಯೂಜಿಲ್ಯಾಂಡ್​ XI

ಫೆ.21ರಿಂದ ನ್ಯೂಜಿಲ್ಯಾಂಡ್​ ವಿರುದ್ಧ ಟೆಸ್ಟ್​​ ಪಂದ್ಯಗಳ ಸರಣಿ ಆರಂಭಗೊಳ್ಳಲಿದ್ದು, ಅದಕ್ಕೂ ಮುಂಚಿತವಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಭಾಗಿಯಾಗಿದೆ.

new zealand XI vs India
new zealand XI vs India
author img

By

Published : Feb 14, 2020, 9:56 AM IST

Updated : Feb 14, 2020, 1:21 PM IST

ಹ್ಯಾಮಿಲ್ಟನ್​: ನ್ಯೂಜಿಲ್ಯಾಂಡ್​ ವಿರುದ್ಧ ಟಿ - 20 ಸರಣಿ ಕ್ಲೀನ್​ ಸ್ವೀಪ್​ ಮಾಡಿದ್ದ ಟೀಂ ಇಂಡಿಯಾ ತದನಂತರ ನಡೆದ ಏಕದಿನ ಕ್ರಿಕೆಟ್​​ನಲ್ಲಿ ವೈಟ್​ವಾಶ್​ ಆಗುವ ಮೂಲಕ ಮುಖಭಂಗಕ್ಕೊಳಗಾಗಿತು. ಇದರ ಮಧ್ಯೆ ಇದೀಗ ಟೆಸ್ಟ್​ ಸರಣಿಗೆ ಟೀಂ ಇಂಡಿಯಾ ಸಜ್ಜಾಗುತ್ತಿದ್ದು, ಅಭ್ಯಾಸ ಪಂದ್ಯದಲ್ಲಿ ಸ್ಟಾರ್​ ಪ್ಲೇಯರ್ಸ್​ ಕಳಪೆ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ.

new zealand XI vs India
ಪೂಜಾರಾ-ವಿಹಾರಿ ಜೋಡಿ

ನ್ಯೂಜಿಲ್ಯಾಂಡ್​​ XI ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಆರಂಭಿಕರಾದ ಪೃಥ್ವಿ ಶಾ (0), ಕನ್ನಡಿಗ ಮಯಾಂಕ್​ ಅಗರವಾಲ್​(1) ಹಾಗೂ ಶುಬ್ಮನ್​ ಗಿಲ್​​(0)ರನ್​ಗಳಿಕೆ ಮಾಡಿ ನಿರಾಸೆ ಮೂಡಿಸಿದ್ದು, ಆಯ್ಕೆಗಾರರ ಗಮನ ಸೆಳೆಯುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ.

ಉಪನಾಯಕ ರಹಾನೆ 18ರನ್​ಗಳಿಕೆ ಮಾಡಿ ಔಟಾದ್ರೆ, ಪೂಜಾರ ಹಾಗೂ ಹನುಮಾ ವಿಹಾರಿ ಎಚ್ಚರಿಕೆ ಆಟವಾಡಿ ತಂಡಕ್ಕೆ ಆಸರೆಯಾದರು. 93ರನ್​ಗಳಿಕೆ ಮಾಡಿ ಪೂಜಾರಾ ವಿಕೆಟ್​​ ಒಪ್ಪಿಸಿದ್ರೆ, ಹನುಮ ವಿಹಾರಿ 101ರನ್​ಗಳಿಕೆ ಮಾಡಿ ರಿಟೈಡ್​​ ಹರ್ಟ್​ ಆದರು. ಈ ಜೋಡಿ ಒಟ್ಟು 160ರನ್​ಗಳ ಜೊತೆಯಾಟ ನೀಡಿದ್ದರು. ಇದಾದ ಬಳಿಕ ಮೈದಾನಕ್ಕೆ ಬಂದ ರಿಷಭ್​ ಪಂತ್​ 7, ವೃದ್ಧಿಮಾನ್​ ಸಾಹಾ(0), ಆರ್​ ಅಶ್ವಿನ್​(0), ಹಾಗೂ ರವೀಂದ್ರ ಜಡೇಜಾ 8ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರೆ, 9ರನ್​​ಗಳಿಸಿರುವ ಉಮೇಶ್​ ಯಾದವ್​ ನಾಳೆಗೆ ಬ್ಯಾಟಿಂಗ್​​ ಕಾಯ್ದಿರಿಸಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್​ ಪಂದ್ಯದಲ್ಲೂ ಕಳಪೆ ಬ್ಯಾಟಿಂಗ್​​ ಪ್ರದರ್ಶನ ನೀಡಿದ್ದ ಮಯಾಂಕ್​ ಅಗರವಾಲ್​, ಪೃಥ್ವಿ ಶಾ ಇದೀಗ ಅಭ್ಯಾಸ ಪಂದ್ಯದಲ್ಲೂ ಅದೇ ಫಾರ್ಮ್​ ಮುಂದುವರಿಸಿದ್ದು, ಟೀಂ ಇಂಡಿಯಾ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

Last Updated : Feb 14, 2020, 1:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.