ಚೆನ್ನೈ: ರಿಷಭ್ ಪಂತ್ ನಮಗೆ ಬಹುದೊಡ್ಡ ಸವಾಲಾಗಿದ್ದ ಕಾರಣ ಎರಡನೇ ಇನ್ನಿಂಗ್ಸ್ನಲ್ಲಿ 400ಕ್ಕೂ ಹೆಚ್ಚು ರನ್ ಮುನ್ನಡೆ ಸಾಧಿಸಿದರೂ ಡಿಕ್ಲೇರ್ ಘೋಷಿಸಲಿಲ್ಲ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಒಪ್ಪಿಕೊಂಡಿದ್ದಾರೆ.
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 227 ರನ್ಗಳಿಂದ ಮಣಿಸಿದೆ. ಜೇಮ್ಸ್ ಆ್ಯಂಡರ್ಸನ್ ಮತ್ತು ಜ್ಯಾಕ್ ಲೀಚ್ ಅವರ ಅದ್ಭುತ ಬೌಲಿಂಗ್ ದಾಳಿಯ ನೆರವಿನಿಂದ ಭಾರತವನ್ನು 192 ರನ್ಗಳಿಗೆ ಆಲೌಟ್ ಮಾಡಿ ದಿಗ್ವಿಜಯ ಸಾಧಿಸಿದೆ.
" ನಾವು ಮೊದಲೇ ಡಿಕ್ಲೇರ್ ಘೋಷಿಸಬಹುದಿತ್ತು. ಖಚಿತವಾಗಿ ನಾವು ಅದಕ್ಕೆ ಸಾಕಷ್ಟು ರನ್ ಹೊಂದಿದ್ದೆವು. ಆದರೆ, ನಾನು ಈ ಪಂದ್ಯದಲ್ಲಿ ಸ್ಪಷ್ಟ ಫಲಿತಾಂಶವನ್ನು ಪಡೆಯಬೇಕೆಂದು ಬಯಸಿದ್ದೆ. ಜೊತೆಗೆ ನಮ್ಮ ಬೌಲರ್ಗಳಿಗೆ ಮತ್ತಷ್ಟು ಸಮಯವನ್ನು ಒದಗಿಸಿಕೊಡಲು ಬಯಸಿದ್ದೆ. ಹಾಗಾಗಿ 400ರನ್ ದಾಟುತ್ತಲೇ ಸ್ಕೋರ್ ಗತಿಯನ್ನು ಹೆಚ್ಚಿಸಲು ವೇಗವಾಗಿ ಬ್ಯಾಟಿಂಗ್ ಮಾಡಲು ನಿರ್ದರಿಸಿದ್ದೆವು" ಎಂದು ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ರೂಟ್ ತಿಳಿಸಿದ್ದಾರೆ.
ಜೊತೆಗೆ ರಿಷಭ್ ಪಂತ್ ಒಂದು ಸೆಷನ್ ಬ್ಯಾಟಿಂಗ್ ಮಾಡಿದರೆ, ಪಂದ್ಯದ ಗತಿಯನ್ನ ಆಸಕ್ತಿದಾಯಕವಾಗಿ ಬದಲಾಯಿಸಬಲ್ಲರು. ಅದಕ್ಕಾಗಿ ನಮ್ಮ ಬೌಲರ್ಗಳು ಒತ್ತಡಕ್ಕೆ ಒಳಗಾಗುವುದನ್ನು ನಾನು ಕಾಣಲು ಬಯಸಲಿಲ್ಲ. ಈ ಕಾರಣಕ್ಕೆ ನಾವು ಡಿಕ್ಲೇರ್ ಘೋಷಿಸಲಿಲ್ಲ ಎಂದು ರೂಟ್ ತಿಳಿಸಿದ್ದಾರೆ.
ಅಲ್ಲದೆ ಹೆಚ್ಚುರನ್ ಕಲೆ ಹಾಕಿದರೆ, ಬೌಲರ್ಗಳು ಸುಲಭವಾಗಿ ಬೌಲಿಂಗ್ ಮಾಡಿ ವಿಕೆಟ್ ಪಡೆಯುವ ಮಾರ್ಗಗಳತ್ತಾ ಹೆಚ್ಚು ಗಮನ ಹರಿಸುತ್ತಾರೆ ಎಂಬುವುದು ನನ್ನ ಉದ್ದೇಶವಾಗಿತ್ತು. ನಾವು ಎದುರಾಳಿಯ 10 ವಿಕೆಟ್ಗಳನ್ನು ಪಡೆಯಲು ಅವಕಾಶಗಳನ್ನು ಸೃಷ್ಟಿಸಲು ಬಯಸಬೇಕಿತ್ತು. ಇದಕ್ಕಾಗಿ ಶಿಸ್ತುಬದ್ಧ ಬೌಲಿಂಗ್ ಮಾಡುವುದು ಹಾಗೂ ಸಿಕ್ಕ ಅವಕಾಶಗಳನ್ನು ತೆಗೆದುಕೊಳ್ಳಬೇಕೆಂಬುದು ನನ್ನ ಆಲೋಚನೆಯಾಗಿತ್ತು. ಹಾಗಾಗಿ ಡಿಕ್ಲೇರ್ ಘೋಷಿಸಲಿಲ್ಲ. ಆದರೂ ಪಂದ್ಯದಲ್ಲಿ ಸುಲಭ ಜಯ ಸಾಧಿಸಿರುವುದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ನಾಯಕನಾಗಿ ಇಂಗ್ಲೆಂಡ್ ಪರ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆಗೆ ಪಾತ್ರರಾದ ಜೋ ರೂಟ್