ಚೆನ್ನೈ: ಇಲ್ಲಿನ ಎಂ. ಚಿದಂಬರಂ ಮೈದಾನದಲ್ಲಿ ಇಂದಿನಿಂದ ಭಾರತ - ಇಂಗ್ಲೆಂಡ್ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಪ್ರವಾಸಿ ಆಂಗ್ಲರ ತಂಡ ಉತ್ತಮ ಸ್ಥಿತಿಯಲ್ಲಿದೆ.
ಇಂಗ್ಲೆಂಡ್ ಪರ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ನಾಯಕ ಜೊ ರೂಟ್ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ತಾವು ಆಡುತ್ತಿರುವ 100ನೇ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ವಿಶೇಷವೆಂದರೆ ರೂಟ್ 98 ಹಾಗೂ 99ನೇ ಟೆಸ್ಟ್ ಪಂದ್ಯದಲ್ಲೂ ಶತಕ ಸಿಡಿಸಿದ್ದರು.
-
Three hundreds in three consecutive Tests for Joe Root, in 2021:
— ICC (@ICC) February 5, 2021 " class="align-text-top noRightClick twitterSection" data="
💥 228 v Sri Lanka
💥 186 v Sri Lanka
💥 100* v India (today) pic.twitter.com/pVEy0s8qSD
">Three hundreds in three consecutive Tests for Joe Root, in 2021:
— ICC (@ICC) February 5, 2021
💥 228 v Sri Lanka
💥 186 v Sri Lanka
💥 100* v India (today) pic.twitter.com/pVEy0s8qSDThree hundreds in three consecutive Tests for Joe Root, in 2021:
— ICC (@ICC) February 5, 2021
💥 228 v Sri Lanka
💥 186 v Sri Lanka
💥 100* v India (today) pic.twitter.com/pVEy0s8qSD
ಇಂಗ್ಲೆಂಡ್ ತಂಡದ ಪರ 100ನೇ ಪಂದ್ಯ ಆಡುತ್ತಿರುವ 15ನೇ ಪ್ಲೇಯರ್ ಆಗಿರುವ ರೂಟ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದು, ತಂಡಕ್ಕೆ ಮೊದಲ ದಿನವೇ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಅದ್ಭುತ ಪ್ರದರ್ಶನ ನೀಡಿದ್ದ ರೂಟ್ ಕ್ರಮವಾಗಿ 228, 186ರನ್ಗಳಿಕೆ ಮಾಡಿದ್ದರು. ಜತೆಗೆ ಸರಣಿಯನ್ನ 2-0 ಅಂತರದಿಂದ ಕೈವಶ ಮಾಡಿಕೊಂಡಿತ್ತು.
ಓದಿ: ಭಾರತ-ಇಂಗ್ಲೆಂಡ್ ಮೊದಲ ಟೆಸ್ಟ್.. ಚೈನ್ಮ್ಯಾನ್ ಸ್ಪಿನ್ನರ್ಗೆ ಕೊಕ್.. ಶಹಬಾಜ್ಗೆ ಮಣೆ ಹಾಕಿದ್ಯಾಕೆ?
2012ರಲ್ಲಿ ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲೇ ಪದಾರ್ಪಣೆ ಮಾಡಿದ್ದ ರೂಟ್, ಇಲ್ಲಿಯವರೆಗೆ 20 ಶತಕ, 49 ಅರ್ಧಶತಕ ಸೇರಿ 8,249ರನ್ಗಳಿಕೆ ಮಾಡಿದ್ದಾರೆ.
100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದವರು
- ಕಾಲಿನ್ ಕೌಡ್ರೆ
- ಜಾವೇದ್ ಮಿಯಾಂದಾದ್
- ಗಾರ್ಡನ್ ಗ್ರಿನಿಡ್ಜ್
- ಅಲೆಕ್ ಸ್ಟುವರ್ಟ್
- ಇಂಜಮಾಮ್ ಉಲ್ ಹಕ್
- ರಿಕಿ ಪಾಂಟಿಂಗ್
- ಗ್ರೇಮ್ ಸ್ಮಿತ್
- ಹಾಶಿಮ್ ಆಮ್ಲಾ
- ಜೊ ರೂಟ್
ವಿಶೇಷವೆಂದರೆ ಜೊ ರೂಟ್ ಕ್ರಮವಾಗಿ 98,99 ಹಾಗೂ 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿರುವ ಮೊದಲ ಪ್ಲೇಯರ್ ಆಗಿದ್ದಾರೆ.