ಪುಣೆ: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಮೂರು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿ ಇಂದಿನಿಂದ ಆರಂಭಗೊಳ್ಳಲಿದ್ದು, ಮಹಾರಾಷ್ಟ್ರದ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೊಂಡಿದೆ.
ಹಾಲಿ ವಿಶ್ವ ಚಾಂಪಿಯನ್ ತಂಡ ಇಂಗ್ಲೆಂಡ್ಗೆ ಈಗಾಗಲೇ ಕೊಹ್ಲಿ ಪಡೆ ಟೆಸ್ಟ್ ಹಾಗೂ ಟಿ20 ಕ್ರಿಕೆಟ್ನಲ್ಲಿ ಸೋಲಿನ ರುಚಿ ತೋರಿಸಿದ್ದು, ಏಕದಿನ ಸರಣಿಯಲ್ಲೂ ಶುಭಾರಂಭದ ನಿರೀಕ್ಷೆ ಇಟ್ಟುಕೊಂಡಿದೆ. ಯುವಕರ ಪಡೆಯಿಂದ ಕೂಡಿರುವ ಟೀಂ ಇಂಡಿಯಾ ರೋಹಿತ್ ಶರ್ಮಾ ಜತೆ ಶಿಖರ್ ಧವನ್ಗೆ ಆರಂಭಿಕರಾಗಿ ಕಣಕ್ಕಿಳಿಯುವ ಅವಕಾಶ ನೀಡುವ ಸಾಧ್ಯತೆ ಇದ್ದು, ಕೆ.ಎಲ್ ರಾಹುಲ್ಗೆ ಆಡುವ 11ರ ಬಳಗದಿಂದ ಹೊರಗೆ ಇಡುವ ಸಾಧ್ಯತೆ ಇದೆ.
-
Is it a bird? Is it a plane?
— BCCI (@BCCI) March 22, 2021 " class="align-text-top noRightClick twitterSection" data="
It's flying @mdsirajofficial #TeamIndia #INDvENG pic.twitter.com/jh6m6msAIg
">Is it a bird? Is it a plane?
— BCCI (@BCCI) March 22, 2021
It's flying @mdsirajofficial #TeamIndia #INDvENG pic.twitter.com/jh6m6msAIgIs it a bird? Is it a plane?
— BCCI (@BCCI) March 22, 2021
It's flying @mdsirajofficial #TeamIndia #INDvENG pic.twitter.com/jh6m6msAIg
ಆಡಿರುವ ಒಂದು ಟಿ-20 ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿರುವ ಶಿಖರ್ ಧವನ್ ಇಂದಿನ ಪಂದ್ಯದಲ್ಲಿ ಫಾರ್ಮ್ ಕಂಡುಕೊಂಡು ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್ ಪಡೆ ಹೊಂದಿದ್ದು, ಕ್ಯಾಪ್ಟನ್ ಕೊಹ್ಲಿ ಕೂಡ ಅದ್ಭುತ ಫಾರ್ಮ್ನಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ತಂಡಕ್ಕೆ ಬಲ ತುಂಬಲಿದ್ದು, ಸೂರ್ಯಕುಮಾರ್ ಯಾದವ್ಗೆ ಅವಕಾಶದ ಬಗ್ಗೆ ಗೊಂದಲವಿದೆ.
ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್ ಇದ್ದು, ಪ್ರಸಿದ್ಧ್ ಕೃಷ್ಣ ಅವಕಾಶ ಪಡೆದುಕೊಳ್ಳುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಇನ್ನು ಟೆಸ್ಟ್ ಜತೆಗೆ ಟಿ-20 ಕ್ರಿಕೆಟ್ನಲ್ಲಿ ಸೋತ ಸುಣ್ಣವಾಗಿರುವ ಇಂಗ್ಲೆಂಡ್ ಏಕದಿನ ಸರಣಿ ಗೆದ್ದು, ಸಮಾಧಾನಪಟ್ಟುಕೊಳ್ಳುವ ಇರಾದೆ ಹೊಂದಿದೆ. ಹೀಗಾಗಿ ಕೆಲವೊಂದು ಹೊಸ ಪ್ರತಿಭೆ ಹಾಗೂ ಇಷ್ಟುದಿನ ಅವಕಾಶ ಸಿಗದ ಪ್ಲೇಯರ್ಸ್ಗಳಿಗೆ ಇದೀಗ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
ಭಾರತ ತಂಡ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಲ್. ರಾಹುಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಟಿ ನಟರಾಜನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ, ಶಾರ್ದುಲ್ ಠಾಕೂರ್.
ಇಂಗ್ಲೆಂಡ್ ತಂಡ : ಇಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜಾನಿ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಟಾಮ್ ಕುರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಮ್ಯಾಟ್ ಪಾರ್ಕಿನ್ಸನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಮಾರ್ಕ್ ವುಡ್.