ಕೋಲ್ಕತ್ತಾ: ಭಾರತ-ಬಾಂಗ್ಲಾದೇಶ ನಡುವಿನ ಅಂತಿಮ ಟೆಸ್ಟ್ನಲ್ಲಿ ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದಾರೆ.
ಪ್ರತೀ ಪಂದ್ಯದಲ್ಲೂ ದಾಖಲೆಯನ್ನು ಬರೆಯುತ್ತಾ ಮುನ್ನುಗ್ಗುತ್ತಿರುವ ಕೊಹ್ಲಿ ಈಡನ್ ಗಾರ್ಡನ್ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ನಲ್ಲಿ ಯಾವೊಬ್ಬ ಭಾರತೀಯ ಆಟಗಾರನೂ ಬರೆಯದ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
-
Milestone Alert🚨: @imVkohli completes 5000 Test runs as #TeamIndia captain. @Paytm #PinkBallTest #INDvBAN pic.twitter.com/fu7fozfoUu
— BCCI (@BCCI) November 22, 2019 " class="align-text-top noRightClick twitterSection" data="
">Milestone Alert🚨: @imVkohli completes 5000 Test runs as #TeamIndia captain. @Paytm #PinkBallTest #INDvBAN pic.twitter.com/fu7fozfoUu
— BCCI (@BCCI) November 22, 2019Milestone Alert🚨: @imVkohli completes 5000 Test runs as #TeamIndia captain. @Paytm #PinkBallTest #INDvBAN pic.twitter.com/fu7fozfoUu
— BCCI (@BCCI) November 22, 2019
ಇಂದಿನ ಐತಿಹಾಸಿಕ ಪಂದ್ಯದಲ್ಲಿ 32ರನ್ ಗಳಿಸಿದ ವೇಳೆ ಕೊಹ್ಲಿ ನಾಯಕನಾಗಿ ಟೆಸ್ಟ್ನಲ್ಲಿ 5000 ರನ್ ಪೂರೈಸಿದ್ದಾರೆ. ವಿಶೇಷವೆಂದರೆ ಟೆಸ್ಟ್ ನಾಯಕನಾಗಿ ಈ ಹಿಂದೆ ಯಾವ ಭಾರತೀಯ ಆಟಗಾರನೂ ಇಷ್ಟೊಂದು ರನ್ ಗಳಿಸಿಲ್ಲ.
ನಾಯಕನಾಗಿ 5000 ರನ್ ಗಳಿಸುವ ಮೂಲಕ ಕೊಹ್ಲಿ ವಿಶ್ವಕ್ರಿಕೆಟ್ನಲ್ಲಿ ಆರನೇ ಆಟಗಾರನಾಗಿ ಲಿಸ್ಟ್ ಸೇರಿದ್ದಾರೆ. ಕೊಹ್ಲಿಗಿಂತ ಮುನ್ನ ಟೆಸ್ಟ್ನಲ್ಲಿ ಗ್ರೇಮ್ ಸ್ಮಿತ್, ಅಲನ್ ಬಾರ್ಡರ್, ರಿಕಿ ಪಾಂಟಿಂಗ್, ಕ್ಲೈವ್ ಲಾಯ್ಡ್ ಹಾಗೂ ಸ್ಟೀವ್ ಫ್ಲೆಮಿಂಗ್ ಈ ಗಡಿ ದಾಟಿದ್ದಾರೆ. ಆದರೆ ಇನ್ನಿಂಗ್ಸ್ ಹಾಗೂ ಪಂದ್ಯದ ಲೆಕ್ಕಾಚಾರದಲ್ಲಿ ಈ ಐದೂ ಆಟಗಾರರಿಗಿಂತ ಕೊಹ್ಲಿ ವೇಗ ಕಾಯ್ದುಕೊಂಡಿದ್ದಾರೆ.