ETV Bharat / sports

ಹದಗೆಟ್ಟ ದೆಹಲಿಯ ಗಾಳಿ... ಭಾರತ-ಬಾಂಗ್ಲಾ ಟಿ20 ಪಂದ್ಯ ನಡೆಯುತ್ತಾ..? - ಭಾರತ Vs ಬಾಂಗ್ಲಾದೇಶ ನಡುವೆ ಮೊದಲ ಟಿ20

ಪಂದ್ಯ ಅರಂಭಕ್ಕೆ ಇನ್ನು ಕೇವಲ ಆರು ದಿನಗಳು ಮಾತ್ರ ಬಾಕಿಯಿದ್ದು, ದೆಹಲಿ ಗಾಳಿಯ ಗುಣಮಟ್ಟ ಅಪಾಯದಮಟ್ಟ ದಾಟಿದೆ. ದೀಪಾವಳಿ ಹಬ್ಬದಂದು ದೆಹಲಿಯ ಹಲವೆಡೆ ಗಾಳಿಯ ಗುಣಮಟ್ಟ ತೀವ್ರ ಕಳಪೆಯಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನ
author img

By

Published : Oct 28, 2019, 11:37 AM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸಂಪೂರ್ಣ ಹದಗೆಟ್ಟಿದ್ದು, ಟೀಂ ಇಂಡಿಯಾ- ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯದ ಮೇಲೆ ಆಯೋಜನೆ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ನವೆಂಬರ್ 3ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಟೀಂ ಇಂಡಿಯಾ-ಬಾಂಗ್ಲಾದೇಶ ನಡುವೆ ಮೊದಲ ಚುಟುಕು ಪಂದ್ಯ ನಡೆಯಲಿದ್ದು ಈ ಮೂಲಕ ಬಾಂಗ್ಲಾ ತಂಡದ ಭಾರತ ಪ್ರವಾಸ ಆರಂಭವಾಗಲಿದೆ.

ಪಂದ್ಯ ಅರಂಭಕ್ಕೆ ಇನ್ನು ಕೇವಲ ಆರು ದಿನಗಳು ಮಾತ್ರ ಬಾಕಿಯಿದ್ದು, ದೆಹಲಿ ಗಾಳಿಯ ಗುಣಮಟ್ಟ ಅಪಾಯದಮಟ್ಟ ದಾಟಿದೆ. ದೀಪಾವಳಿ ಹಬ್ಬದಂದು ದೆಹಲಿಯ ಹಲವೆಡೆ ಗಾಳಿಯ ಗುಣಮಟ್ಟ ತೀವ್ರ ಕಳಪೆಯಾಗಿದೆ.

ವಿಷಗಾಳಿಗೆ ರಾಷ್ಟ್ರ ರಾಜಧಾನಿ ತತ್ತರ... ದೀಪಾವಳಿಯಲ್ಲೂ ವಾಣಿಜ್ಯ ನಗರಿ ಬೆಸ್ಟ್..!

ಸದ್ಯ ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದ್ದು ದೆಹಲಿ ಕ್ರಿಕೆಟ್ ಅಸೋಸಿಯೇಷನ್​ಗೆ ತಲೆನೋವಾಗಿ ಪರಿಣಮಿಸಿದೆ. ಆದರೂ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು ಹೀಗಾಗಿ ಪಂದ್ಯ ಖಂಡಿತಾ ನಡೆಯಲಿದೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದೆ.

ಮರುಕಳಿಸುತ್ತಾ 2017ರ ಕಹಿ ಘಟನಾವಳಿ...?

2017ರಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಭಾರಿ ಕುಸಿತ ಕಂಡಿತ್ತು. ಲಂಕಾ ಆಟಗಾರರು ಮುಖಕ್ಕೆ ಮಾಸ್ಕ್​ ಧರಿಸಿ ಮೈದಾನಕ್ಕಿಳಿದಿದ್ದರು. ಕೆಲ ಆಟಗಾರರು ಉಸಿರಾಟದ ಸಮಸ್ಯೆಯಿಂದಾಗಿ ಮೈದಾನ ತೊರೆದ ಪ್ರಸಂಗವೂ ನಡೆದಿತ್ತು.

delhi test
2017ರಲ್ಲಿ ದೆಹಲಿ ಟೆಸ್ಟ್ ಪಂದ್ಯದ ವೇಳೆ ಮಾಸ್ಕ್ ಧರಿಸಿದ ಲಂಕಾ ಆಟಗಾರರು

Intro:Body:

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸಂಪೂರ್ಣ ಹದಗೆಟ್ಟಿದ್ದು, ಟೀಂ ಇಂಡಿಯಾ- ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯದ ಮೇಲೆ ಆಯೋಜನೆ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ನವೆಂಬರ್ 3ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಟೀಂ ಇಂಡಿಯಾ-ಬಾಂಗ್ಲಾದೇಶ ನಡುವೆ ಮೊದಲ ಚುಟುಕು ಪಂದ್ಯ ನಡೆಯಲಿದ್ದು ಈ ಮೂಲಕ ಬಾಂಗ್ಲಾ ತಂಡದ ಭಾರತ ಪ್ರವಾಸ ಆರಂಭವಾಗಲಿದೆ.

ಪಂದ್ಯ ಅರಂಭಕ್ಕೆ ಇನ್ನು ಕೇವಲ ಆರು ದಿನಗಳು ಮಾತ್ರ ಬಾಕಿಯಿದ್ದು, ದೆಹಲಿ ಗಾಳಿಯ ಗುಣಮಟ್ಟ ಅಪಾಯದಮಟ್ಟ ದಾಟಿದೆ. ದೀಪಾವಳಿ ಹಬ್ಬದಂದು ದೆಹಲಿಯ ಹಲವೆಡೆ ಗಾಳಿಯ ಗುಣಮಟ್ಟ ತೀವ್ರ ಕಳಪೆಯಾಗಿದೆ.

ಸದ್ಯ ರಾಷ್ಟ್ರ ರಾಜಧಾನಿಯ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿದ್ದು ದೆಹಲಿ ಕ್ರಿಕೆಟ್ ಅಸೋಸಿಯೇಷನ್​ಗೆ ತಲೆನೋವಾಗಿ ಪರಿಣಮಿಸಿದೆ. ಆದರೂ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು ಹೀಗಾಗಿ ಪಂದ್ಯ ಖಂಡಿತಾ ನಡೆಯಲಿದೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದೆ.

ಮರುಕಳಿಸುತ್ತಾ 2017ರ ಕಹಿ ಘಟನಾವಳಿ...?

2017ರಲ್ಲಿ ಶ್ರೀಲಂಕಾ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಭಾರಿ ಕುಸಿತ ಕಂಡಿತ್ತು. ಲಂಕಾ ಆಟಗಾರರು ಮುಖಕ್ಕೆ ಮಾಸ್ಕ್​ ಧರಿಸಿ ಮೈದಾನಕ್ಕಿಳಿದಿದ್ದರು. ಕೆಲ ಆಟಗಾರರು ಉಸಿರಾಟದ ಸಮಸ್ಯೆಯಿಂದಾಗಿ ಮೈದಾನ ತೊರದ ಪ್ರಸಂಗವೂ ನಡೆದಿತ್ತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.