ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಟೀಂ ಇಂಡಿಯಾ ವಿರುದ್ಧ 7 ವಿಕೆಟ್ಗಳ ಜಯ ದಾಖಲಿಸಿದೆ.
-
That's that from Delhi. Bangladesh win the 1st T20I by 7 wickets and go 1-0 up in the 3-match series.#INDvBAN pic.twitter.com/z2ezFlifYx
— BCCI (@BCCI) November 3, 2019 " class="align-text-top noRightClick twitterSection" data="
">That's that from Delhi. Bangladesh win the 1st T20I by 7 wickets and go 1-0 up in the 3-match series.#INDvBAN pic.twitter.com/z2ezFlifYx
— BCCI (@BCCI) November 3, 2019That's that from Delhi. Bangladesh win the 1st T20I by 7 wickets and go 1-0 up in the 3-match series.#INDvBAN pic.twitter.com/z2ezFlifYx
— BCCI (@BCCI) November 3, 2019
ಭಾರತ ನೀಡಿದ್ದ 149 ರನ್ಗಳ ಗುರಿ ಬೆನ್ನತ್ತಿದ ಬಾಂಗ್ಲಾ ತಂಡ ಆರಂಭಿಕ ಆಘಾತ ಅನುಭವಿಸಿತು. ಲಿಟನ್ ದಾಸ್ ಕೇವಲ 7 ರನ್ ಗಳಿಸಿ ಔಟ್ ಆದರು. ಈ ವೇಳೆ ತಂಡಕ್ಕೆ ಆಸರೆಯಾದ ಸೌಮ್ಯ ಸರ್ಕಾರ್ ಮತ್ತು ಮೊಹಮ್ಮದ್ ನೈಮ್ ಉತ್ತಮವಾಗಿ ಬ್ಯಾಟ್ ಬೀಸಿದ್ರು. 26 ರನ್ಗಳಿಸಿದ ಮೊಹಮ್ಮದ್ ನೈಮ್, ಚಹಾಲ್ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಬ್ಯಾಟಿಂಗ್ಗೆ ಇಳಿದ ಮುಷ್ಫಿಕರ್ ರಹೀಂ ಭರ್ಜರಿ 60 ರನ್ ಸಿಡಿಸಿ ಭಾರತದ ಗೆಲುವನ್ನ ಕಸಿದುಕೊಂಡರು.
ಅಂತಿಮವಾಗಿ ಬಾಂಗ್ಲಾ ತಂಡ 19.3 ಓವರ್ಗಳಲ್ಲಿ 154 ರನ್ ಗಳಿಸುವ ಮೂಲಕ 7 ವಿಕೆಟ್ಗಳ ಗೆಲುವು ದಾಖಲಿಸಿತು. ಭಾರತದ ಪರ ದೀಪಕ್ ಚಹಾರ್, ಚಹಾಲ್ ಮತ್ತು ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದುಕೊಂಡರು
ಇದಕ್ಕೂ ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಯ್ತು ನಾಯಕ ರೋಹಿತ್ ಶರ್ಮಾ ಕೇವಲ 9 ರನ್ ಗಳಿಸಿ ಔಟಾದರು. ನಂತರ ಬಂದ ಕೆ.ಎಲ್.ರಾಹುಲ್ ಕೂಡ 14 ರನ್ ಗಳಿಸಿ ಅನಿಮುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ಶ್ರೇಯಸ್ ಐಯ್ಯರ್ ಭರ್ಜರಿ ಎರಡು ಸಿಕ್ಸರ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದರು. ಆದರೆ 22 ರನ್ ಗಳಿಸಿರುವಾಗ ಅನಿಮುಲ್ ಇಸ್ಲಾಂ ಎಸೆತದಲ್ಲಿ ಮೊಹಮ್ಮದ್ ನೈಮ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಒಂದೆಡೆ ವಿಕೆಟ್ ಬಿದ್ದರೂ ತಾಳ್ಮೆಯ ಆಟವಾಡಿದ ಶಿಖರ್ ಧವನ್ 41 ರನ್ಗಳಿಸಿ ಇಲ್ಲದ ರನ್ ಕದಿಯಲು ಹೋಗಿ ರನ್ಔಟ್ಗೆ ಬಲಿಯಾದರು. ರಿಷಭ್ ಪಂತ್ ಕೂಡ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ 27 ರನ್ ಗಳಿಸಿದರು.
-
Innings Break!
— BCCI (@BCCI) November 3, 2019 " class="align-text-top noRightClick twitterSection" data="
Sweet little cameos by the spin bowling all-rounders, Krunal Pandya and Washington Sundar propel #TeamIndia's total to 148/6.
Updates - https://t.co/7oEQDn0RdS #INDvBAN pic.twitter.com/fNNjJBmw5N
">Innings Break!
— BCCI (@BCCI) November 3, 2019
Sweet little cameos by the spin bowling all-rounders, Krunal Pandya and Washington Sundar propel #TeamIndia's total to 148/6.
Updates - https://t.co/7oEQDn0RdS #INDvBAN pic.twitter.com/fNNjJBmw5NInnings Break!
— BCCI (@BCCI) November 3, 2019
Sweet little cameos by the spin bowling all-rounders, Krunal Pandya and Washington Sundar propel #TeamIndia's total to 148/6.
Updates - https://t.co/7oEQDn0RdS #INDvBAN pic.twitter.com/fNNjJBmw5N
ಕೊನೆಯ ಓವರ್ನಲ್ಲಿ ಅಬ್ಬರಿಸಿದ ಕೃನಾಲ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಭಾರತದ ಮೊತ್ತವನ್ನ ಹೆಚ್ಚಿಸಿದರು. ಅಂತಿಮವಾಗಿ ಟೀಂ ಇಂಡಿಯಾ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತ್ತು. ಬಾಂಗ್ಲಾ ಪರ ಅನಿಮುಲ್ ಇಸ್ಲಾಂ 2 ಶೈಫುಲ್ ಇಸ್ಲಾಂ 2, ಅಫೀಫ್ ಹೊಸೈನ್ 1 ವಿಕೆಟ್ ಪಡೆದು ಮಿಂಚಿದ್ರು.
ಇದಕ್ಕೂ ಮೊದಲು ಭಾರತ ಮತ್ತು ಬಾಂಗ್ಲಾ ತಂಡಗಳು 8 ಬಾರಿ ಮುಖಾಮುಖಿಯಾಗಿದ್ದವು, ಈ ಎಂಟೂ ಪಂದ್ಯವನ್ನ ಭಾರತ ಗೆದ್ದಿತ್ತು. ಇಂದು ನಡೆದ ಪಂದ್ಯದಲ್ಲಿ ಗೆಲುವು ದಾಖಲಿಸುವ ಮೂಲಕ ಮೊದಲ ಬಾರಿಗೆ ಬಾಂಗ್ಲಾ ತಂಡ ಭಾರತದ ವಿರುದ್ಧ ಜಯ ದಾಖಲಿಸಿದೆ. ಮುಂದಿನ ಪಂದ್ಯ ನ.7ಕ್ಕೆ ರಾಜ್ಕೋಟ್ನಲ್ಲಿ ನಡೆಯಲಿದೆ.