ETV Bharat / sports

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ ಬರೆದ ರನ್ ಮಷಿನ್ ವಿರಾಟ್ ಕೊಹ್ಲಿ - ಭಾರತ vs ಆಸ್ಟ್ರೇಲಿಯಾ ಲೈವ್ ಸ್ಕೋರ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 22 ಸಾವಿರ ರನ್ ಪೂರೈಸಿದ್ದಾರೆ. ಆ ಮೂಲಕ ಈ ಮೈಲಿಗಲ್ಲು ಮುಟ್ಟಿದ 8ನೇ ಆಟಗಾರ ಎಂಬ ಕೀರ್ತಿಯೂ ಅವರಿಗೆ ಸಲ್ಲುತ್ತಿದೆ..

Virat Kohli completes 22,000 runs in international cricket
ಮತ್ತೊಂದು ದಾಖಲೆ ಬರೆದ ರನ್ ಮಷಿನ್ ವಿರಾಟ್ ಕೊಹ್ಲಿ
author img

By

Published : Nov 29, 2020, 6:06 PM IST

ಸಿಡ್ನಿ(ಆಸ್ಟ್ರೇಲಿಯಾ): ಎಸ್​ಸಿಜಿ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ದ್ವಿತೀಯ ಏಕದಿನ ಪಂದ್ಯದಲ್ಲಿ 89 ರನ್ ಗಳಿಸಿದ ವಿರಾಟ್, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 22 ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ಕೊಹ್ಲಿ 22 ಸಾವಿರ ಅಂತಾರಾಷ್ಟ್ರೀಯ ರನ್ ಗಳಿಸಿದ ವೇಗದ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ 34,357 ರನ್, ಕುಮಾರ್ ಸಂಗಕ್ಕಾರ 28,016, ರಿಕಿ ಪಾಂಟಿಂಗ್ 27,483, ಮಹೇಲಾ ಜಯವರ್ಧನೆ 25,957, ಜಾಕ್ ಕಾಲಿಸ್ 25,534, ರಾಹುಲ್ ದ್ರಾವಿಡ್ 24,208 ರನ್​ ಗಳಿಸಿದ್ದು, ಬ್ರಿಯಾನ್ ಲಾರ್ 22,358 ರನ್​ ಗಳಸಿದ್ದಾರೆ. ಈಗ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ 22 ಸಾವಿರ ರನ್ ಪೂರೈಸಿದ 8ನೇ ಆಟಗಾರನಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.