ETV Bharat / sports

'ನಿನ್ನ ನೆಚ್ಚಿನ ಕ್ರಿಕೆಟಿಗ ಯಾರು': ಲಾಬುಶೇನ್​ ಮೈಂಡ್​ಗೇಮ್​ಗೆ ಗಿಲ್ ಕೊಟ್ಟ ಉತ್ತರ ಏನು ಗೊತ್ತಾ? - ಮಾರ್ನಸ್ ಲಾಬುಶೇನ್

ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಟೀಂ ಇಂಡಿಯಾ ಯುವ ಕ್ರಿಕೆಟಿಗ ಶುಬ್ಮನ್ ಗಿಲ್​ ಅವರ ಗಮನ ಬೇರೆಡೆ ಸೆಳೆಯಲು ಲಾಬುಶೇನ್ ಯತ್ನಿಸಿದ್ದರು.

Marnus just wants to know who Gill's favourite player
ಲಾಬುಶೇನ್​ಗೆ ಮೈಂಡ್​ಗೇಮ್​ಗೆ ಗಿಲ್ ಕೊಟ್ಟ ಉತ್ತರ
author img

By

Published : Jan 8, 2021, 11:02 AM IST

ಸಿಡ್ನಿ: ಬ್ಯಾಟಿಂಗ್ ವೇಳೆ ಆಟಗಾರನ ಗಮನ ಬೇರೆಡೆ ಸೆಳೆಯಲು ಯತ್ನಿಸಿದ ಆಸೀಸ್ ಕ್ರಿಕೆಟಿಗ ಲಾಬುಶೇನ್​ಗೆ ಟೀಂ ಇಂಡಿಯಾ ಯುವ ಕ್ರಿಕೆಟಿಗ ಶುಬ್ಮನ್ ಗಿಲ್ ಸರಿಯಾದ ಪ್ರತ್ಯುತ್ತರ ನೀಡಿದ್ದಾರೆ.

ಮೈಂಡ್ ಗೇಮ್ ಮೂಲಕ ಬ್ಯಾಟ್ಸ್​ಮನ್​ಗಳ ಗಮನ ಬೇರೆಡೆ ಸೆಳೆಯುವಲ್ಲಿ ಆಸೀಸ್ ಕ್ರಿಕೆಟಿಗರು ನಿಸ್ಸೀಮರು. ಅದರಂತೆ ಇಂದು ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಟೀಂ ಇಂಡಿಯಾ ಯುವ ಕ್ರಿಕೆಟಿಗ ಶುಬ್ಮನ್ ಗಿಲ್​ ಅವರ ಗಮನ ಬೇರೆಡೆ ಸೆಳೆಯಲು ಲಾಬುಶೇನ್ ಯತ್ನಿಸಿದರು.

ಪಂದ್ಯ ಆರಂಭವಾಗಿ ಕೆಲ ಓವರ್​ಗಳಾಗಿತ್ತು. ಬ್ಯಾಟ್ಸ್​ಮನ್​ ಮುಂದೆಯೇ ಕ್ಷೇತ್ರರಕ್ಷಣೆಗೆ ನಿಂತಿದ್ದ ಲಾಬುಶೇನ್ ನಿನ್ನ ನೆಚ್ಚಿನ ಕ್ರಿಕೆಟಿಗ ಯಾರು ಎಂದು ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಗಿಲ್, ಪಂದ್ಯ ಮುಗಿದ ನಂತರ ಹೇಳುತ್ತೇನೆ ಎನ್ನುವ ಮೂಲಕ ಬಾಯಿ ಮುಚ್ಚಿಕೊಂಡು ಇರುವಂತೆ ಪರೋಕ್ಷವಾಗಿ ಟಾಂಗ್ ಕೊಟ್ರು. ಅಷ್ಟಕ್ಕೆ ಸುಮ್ಮನಾಗದ ಲಾಬುಶೇನ್ ಸಚಿನ್ ತೆಂಡೂಲ್ಕರ್ ಅಥವಾ ವಿರಾಟ್ ಕೊಹ್ಲಿನಾ? ಎಂದು ತಮ್ಮ ಪ್ರಶ್ನೆಯನ್ನು ಮುಂದುವರೆಸಿದ್ರು.

ಇಬ್ಬರು ಆಟಗಾರರ ಸಂಭಾಷಣೆ ಸ್ಟಂಪ್ ಮೈಕ್​ನಲ್ಲಿ ರೆಕಾರ್ಡ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.