ಮುಂಬೈ: ಪ್ರವಾಸಿ ಆಸ್ಟ್ರೇಲಿಯಾ-ಭಾರತ ನಡುವೆ ನಾಳೆಯಿಂದ ಮೂರು ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಮುಂಬೈನ ವಾಖೆಂಡೆ ಮೈದಾನದಲ್ಲಿ ನಡೆಯಲಿದ್ದು, ಹಣಾಹಣಿಗಾಗಿ ಉಭಯ ತಂಡಗಳು ಭರ್ಜರಿ ತಾಲೀಮು ನಡೆಸಿವೆ.
ಈ ಹಿಂದೆ ಭಾರತದಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ ಪಾರಮ್ಯ ಮರೆದಿದ್ದ ಆಸ್ಟ್ರೇಲಿಯಾ ತಂಡ ಐದು ಏಕದಿನ ಪಂದ್ಯಗಳ ಸರಣಿಯನ್ನ 3-2 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಇದೀಗ ಕೊಹ್ಲಿ ಪಡೆ ತಿರುಗೇಟು ನೀಡಲು ಸಜ್ಜಾಗಿದೆ. ಬೌಲಿಂಗ್ ವಿಭಾಗದ ಜವಾಬ್ದಾರಿ ಹೊತ್ತುಕೊಳ್ಳಲಿರುವ ಜಸ್ಪ್ರೀತ್ ಬುಮ್ರಾ ಈಗಾಗಲೇ ನೆಟ್ನಲ್ಲಿ ಅಬ್ಬರಿಸುತ್ತಿದ್ದು, ಅವರೊಂದಿಗೆ ನವದೀಪ್ ಸೈನಿ ಸಹ ತಮ್ಮ ಕೈಚಳಕ ತೋರಿಸಲು ಸಜ್ಜಾಗಿದ್ದಾರೆ.
-
These two 🔥💥☄️@Jaspritbumrah93 & @navdeepsaini96 firing on all cylinders #TeamIndia #INDvAUS @Paytm pic.twitter.com/nrvKLnpnSj
— BCCI (@BCCI) January 13, 2020 " class="align-text-top noRightClick twitterSection" data="
">These two 🔥💥☄️@Jaspritbumrah93 & @navdeepsaini96 firing on all cylinders #TeamIndia #INDvAUS @Paytm pic.twitter.com/nrvKLnpnSj
— BCCI (@BCCI) January 13, 2020These two 🔥💥☄️@Jaspritbumrah93 & @navdeepsaini96 firing on all cylinders #TeamIndia #INDvAUS @Paytm pic.twitter.com/nrvKLnpnSj
— BCCI (@BCCI) January 13, 2020
ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲು ಬಲಿಷ್ಠ ಟೀಂ ಇಂಡಿಯಾ ಈಗಾಗಲೇ ಪ್ರಕಟಗೊಂಡಿದ್ದು, ಆರಂಭಿಕರಾಗಿ ಸ್ಪೋಟಕ ಬ್ಯಾಟ್ಸಮನ್ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಮೈದಾನ ಹಂಚಿಕೊಳ್ಳುವ ಸಾಧ್ಯತೆ ದಟ್ಟವಾಗಿದ. ಮೂರನೇ ಕ್ರಮಾಂಕದಲ್ಲಿ ಕನ್ನಡಿಗ ರಾಹುಲ್ ಬ್ಯಾಟ್ ಬೀಸಿದ್ರೆ, ನಾಲ್ಕನೇ ಕ್ರಮಾಂಕದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಬ್ಬರಿಸುವುದು ಕನ್ಫರ್ಮ್. ಉಳಿದಂತೆ ಮನೀಷ್ ಪಾಂಡೆ, ಕೇದಾರ್ ಜಾಧವ್,ಶ್ರೇಯಸ್ ಅಯ್ಯರ್ ಹಾಗೂ ರಿಷಭ್ ಪಂತ್ ಸಹ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳಲು ಉತ್ತಮ ಪ್ರದರ್ಶನ ನೀಡುವ ಅನಿವಾರ್ಯತೆ ಎದುರಾಗಿದೆ.
ತಂಡ ಇಂತಿವೆ
ಟೀಂ ಇಂಡಿಯಾ: ವಿರಾಟ್ ಕೊಹ್ಲಿ(ಕ್ಯಾಪ್ಟನ್),ರೋಹಿತ್ ಶರ್ಮಾ,ಶಿಖರ್ ಧವನ್,ಕೆಎಲ್ ರಾಹುಲ್,ಶ್ರೇಯಸ್ ಅಯ್ಯರ್,ಮನೀಷ್ ಪಾಂಡೆ,ಕೇದಾರ್ ಜಾಧವ್,ರಿಷಭ್ ಪಂತ್(ವಿ.ಕೀ),ಶಿವಂ ದುಬೆ,ರವೀಂದ್ರ ಜಡೇಜಾ,ಯಜುವೇಂದ್ರ ಚಹಾಲ್,ಕುಲ್ದೀಪ್ ಯಾದವ್,ನವದೀಪ್ ಸೈನಿ,ಜಸ್ಪ್ರೀತ್ ಬುಮ್ರಾ,ಶಾರ್ದೂಲ್ ಠಾಕೂರ್,ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್(ಕ್ಯಾಪ್ಟನ್),ಅಲೆಕ್ಸ್ ಕ್ಯಾರಿ(ವಿ,ಕೀ),ಕುಮ್ಮಿನ್ಸ್,ಆಷ್ಟನ್ ಅಗರ್, ಪೀಟರ್ ಹ್ಯಾಂಡ್ಸ್‌ಕಾಂಬ್, ಜೋಶ್ ಹ್ಯಾಜಲ್‌ವುಡ್, ಮಾರ್ನಸ್ ಲ್ಯಾಬುಸ್‌ಚಾಗ್ನೆ, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಷ್ಟನ್ ಟರ್ನರ್, ಡೇವಿಡ್ ವಾರ್ನರ್, ಆಡಮ್ ಜಂಪಾ.