ETV Bharat / sports

ಪೆವಿಲಿಯನ್ ಸೇರಿದ ಆಸೀಸ್​ ಆರಂಭಿಕ ಜೋಡಿ: ಭೋಜನ ವಿರಾಮದ ವೇಳೆಗೆ ಭಾರತ ಮೇಲುಗೈ

ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೊದಲೆರಡು ವಿಕೆಟ್​ಗಳ ಪತನದ ನಂತರ ಆಸ್ಟ್ರೇಲಿಯಾ ತಂಡಕ್ಕೆ ಸ್ಟಿವ್ ಸ್ಮಿತ್ ಮತ್ತು ಲಾಬುಶೇನ್ ಆಸರೆಯಾಗಿದ್ದು ಮೂರನೇ ವಿಕೆಟ್​ಗೆ ಈ ಜೋಡಿ 48 ರನ್ ಕಲೆಹಾಕಿದೆ.

India vs Australia 4th Tes
ಪೆವಿಲಿಯನ್ ಸೇರಿದ ಆರಂಭಿಕ ಜೋಡಿ
author img

By

Published : Jan 15, 2021, 8:17 AM IST

ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದ ಮೊದಲ ಸೆಷನ್ ಮುಕ್ತಾಯಕ್ಕೆ ಆಸೀಸ್​ನ ಆರಂಭಿಕ ಆಟಗಾರರಿಬ್ಬರೂ ಪೆವಿಲಿಯನ್ ಸೇರಿಕೊಂಡಿದ್ದು, ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಯಿತು. ಕಳೆದ ಪಂದ್ಯದಲ್ಲೂ ವಿಫಲರಾಗಿದ್ದ ಸ್ಫೋಟಕ ಆಟಗಾರ ಡೇವಿಡ್ ವಾರ್ನರ್ ಕೇವಲ ಒಂದು ರನ್ ಗಳಿಸಿ ಮೊದಲ ಓವರ್​ನಲ್ಲೇ ಮೊಹಮ್ಮದ್ ಸಿರಾಜ್​ಗೆ ವಿಕೆಟ್ ಒಪ್ಪಿಸಿದ್ರು.

ಪೊಕೀವ್​ಸ್ಕಿ ಬದಲು ಆರಂಭಿಕನಾಗಿ ಕಣಕ್ಕಿಳಿದಿದ್ದ ಮರ್ಕಸ್ ಹ್ಯಾರಿಸ್ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ. ಬೌಲಿಂಗ್​ಗೆ ಇಳಿದ ಮೊದಲ ಓವರ್​ನಲ್ಲೇ ಹ್ಯಾರಿಸ್ ವಿಕೆಟ್ ಪಡೆದ ಶಾರ್ದೂಲ್ ಠಾಕೂರ್, ಭಾರತಕ್ಕೆ ಮೇಲುಗೈ ತಂದುಕೊಟ್ರು.

ಬಳಿಕ 3ನೇ ವಿಕೆಟ್​ಗೆ ಜೊತೆಯಾಗಿರುವ ಲಾಬುಶೇನ್ (19) ಮತ್ತು ಸ್ಮಿತ್ (30) ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಭೋಜನ ವಿರಾಮದ ವೇಳೆಗೆ ಆಸ್ಟ್ರೇಲಿಯಾ 2 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.