ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಬೌಲರ್ಗಳ ಶಿಸ್ತುಬದ್ಧ ದಾಳಿಗೆ ಆಸ್ಟ್ರೇಲಿಯಾ 294 ರನ್ಗಳಿಗೆ ಸರ್ವಪತನ ಕಂಡಿದ್ದು, ಭಾರತ ತಂಡಕ್ಕೆ 328 ರನ್ ಗುರಿ ನೀಡಿದೆ.
33 ರನ್ಗಳ ಲೀಡ್ ಪಡೆದು ಮೂರನೇ ದಿನದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ 6 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 21 ರನ್ ಗಳಿಸಿತ್ತು. ನಾಲ್ಕನೇ ದಿನ ಇನ್ನಿಂಗ್ಸ್ ಆರಂಭಿಸಿದ ವಾರ್ನರ್ ಮತ್ತು ಮಾರ್ಕಸ್ ಹ್ಯಾರಿಸ್ ಭರ್ಜರಿಯಾಗಿ ಬ್ಯಾಟ್ ಬೀಸಿದ್ರು.
-
Mohammed Siraj and Shardul Thakur share nine wickets between them as Australia are all out for 294.
— ICC (@ICC) January 18, 2021 " class="align-text-top noRightClick twitterSection" data="
The hosts have set India a target of 328.#AUSvIND ⏩ https://t.co/oDTm209M8z pic.twitter.com/fv0fIxL7CQ
">Mohammed Siraj and Shardul Thakur share nine wickets between them as Australia are all out for 294.
— ICC (@ICC) January 18, 2021
The hosts have set India a target of 328.#AUSvIND ⏩ https://t.co/oDTm209M8z pic.twitter.com/fv0fIxL7CQMohammed Siraj and Shardul Thakur share nine wickets between them as Australia are all out for 294.
— ICC (@ICC) January 18, 2021
The hosts have set India a target of 328.#AUSvIND ⏩ https://t.co/oDTm209M8z pic.twitter.com/fv0fIxL7CQ
ಆರಂಭದಿಂದಲೂ ಉತ್ತಮವಾಗಿ ಬ್ಯಾಟ್ ಬೀಸಿದ ಈ ಜೋಡಿ ಡೊಡ್ಡ ಮೊತ್ತ ಕಲೆಹಾಕುವ ಸೂಚನೆ ನೀಡಿತ್ತು. ಆದರೆ, ಟೀಂ ಇಂಡಿಯಾ ವೇಗಿ ಶರ್ದೂಲ್ ಠಾಕೂರ್ ಮಾರ್ಕಸ್ ಹ್ಯಾರಿಸ್(38) ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದ್ರು.
ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದ ಡೇವಿಡ್ ವಾರ್ನರ್ 48 ರನ್ ಗಳಿಸಿ ಸುಂದರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದು ಪವಿಲಿಯನ್ ಸೇರಿದ್ರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಮಾರ್ಕಸ್ ಲಾಬುಶೇನ್ ಬೌಂಡರಿಗಳ ಮೂಲಕ ಸ್ಫೋಟಕ ಆಟವಾಡಿ 25 ರನ್ಗಳಿಸಿ ಸಿರಾಜ್ ಎಸೆತದಲ್ಲಿ ರೋಹಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ಅದೇ ಓವರ್ನಲ್ಲಿ ಮ್ಯಾಥ್ಯೂ ವೇಡ್ ವಿಕೆಟ್ ಪಡೆದ ಸಿರಾಜ್ ಟೀಂ ಇಂಡಿಯಾಕ್ಕೆ ಮೇಲುಗೈ ತಂದುಕೊಟ್ರು.
-
Innings Break!
— BCCI (@BCCI) January 18, 2021 " class="align-text-top noRightClick twitterSection" data="
Australia all out for 294 in the second innings. A 5-wicket haul for Siraj and a brilliant 4-wkt haul for Shardul Thakur.
Live - https://t.co/bSiJ4wEymL #AUSvIND pic.twitter.com/RUtvFTJ8v8
">Innings Break!
— BCCI (@BCCI) January 18, 2021
Australia all out for 294 in the second innings. A 5-wicket haul for Siraj and a brilliant 4-wkt haul for Shardul Thakur.
Live - https://t.co/bSiJ4wEymL #AUSvIND pic.twitter.com/RUtvFTJ8v8Innings Break!
— BCCI (@BCCI) January 18, 2021
Australia all out for 294 in the second innings. A 5-wicket haul for Siraj and a brilliant 4-wkt haul for Shardul Thakur.
Live - https://t.co/bSiJ4wEymL #AUSvIND pic.twitter.com/RUtvFTJ8v8
ನಂತರ ಜೊತೆಯಾದ ಸ್ಟೀವ್ ಸ್ಮಿತ್ ಮತ್ತು ಗ್ರೀನ್, ಆಸೀಸ್ಗೆ ಕೊಂಚ ಚೇತರಿಕೆ ನೀಡಿದ್ರು. ಈ ಜೋಡಿ 5ನೇ ವಿಕೆಟ್ಗೆ 76 ರನ್ಗಳ ಜೊತೆಯಾಟವಾಡಿತು. ಒಂದು ವಾರಿ ಜೀವದಾನ ಪಡೆದ ಸ್ಮಿತ್ ಅರ್ಧಶತಕ ಸಿಡಿಸಿ ಮಿಂಚಿದ್ರು. 55 ರನ್ ಗಳಿಸಿರುವಾಗ ಸಿರಾಜ್ ಎಸೆತದಲ್ಲಿ ರಹಾನೆಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು.
-
A standing ovation as Mohammed Siraj picks up his maiden 5-wicket haul.#AUSvIND #TeamIndia pic.twitter.com/e0IaVJ3uA8
— BCCI (@BCCI) January 18, 2021 " class="align-text-top noRightClick twitterSection" data="
">A standing ovation as Mohammed Siraj picks up his maiden 5-wicket haul.#AUSvIND #TeamIndia pic.twitter.com/e0IaVJ3uA8
— BCCI (@BCCI) January 18, 2021A standing ovation as Mohammed Siraj picks up his maiden 5-wicket haul.#AUSvIND #TeamIndia pic.twitter.com/e0IaVJ3uA8
— BCCI (@BCCI) January 18, 2021
ನಿದಾನವಾಗಿ ರನ್ ಕಲೆಹಾಕುತ್ತಿದ್ದ ಗೀನ್ ಠಾಕೂರ್ಗೆ ವಿಕೆಟ್ ಒಪ್ಪಿಸಿದರೆ, ಸ್ಟಾರ್ಕ್ 1 ರನ್ಗಳಿಸಿ ಸಿರಾಜ್ ಬೌಲಿಂಗ್ನಲ್ಲಿ ಸೈನಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ರು. ನಂತರ ಬಂದ ಲಿಯಾನ್ ಕೂಡ 13ರನ್ ಗಳಿಸಿ ಹೊರನಡೆದ್ರು. ಕೆಲ ಬೌಂಡರಿ ಮತ್ತು ಸಿಕ್ಸರ್ಗಳಿಂದ ಗಮನಸೆಳೆದ ಕಮ್ಮಿನ್ಸ್ ಆಸೀಸ್ ಲೀಡ್ ಹೆಚ್ಚಿಸುವಲ್ಲಿ ಸಫಲರಾದ್ರು. ಅಂತಿಮವಾಗಿ ಆಸ್ಟ್ರೇಲಿಯಾ 10 ವಿಕೆಟ್ ಕಳೆದುಕೊಂಡು 294 ರನ್ ಗಳಿಸಿದ್ದು, ಭಾರತಕ್ಕ 327 ರನ್ಗಳ ಗುರಿ ನೀಡಿದೆ. ಟೀಂ ಇಂಡಿಯಾ ಪರ ಶಿಸ್ತುಬದ್ಧ ಬೌಲಿಂಗ್ ನಡೆಸಿದ ಮೊಹಮ್ಮದ್ ಸಿರಾಜ್ 5, ಶಾರ್ದೂಲ್ ಠಾಕೂರ್ 4 ಮತ್ತು ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದು ಮಿಂಚಿದ್ರು.