ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ತೋರುತ್ತಿದ್ದು, ಚಹಾ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಕ್ಕೆ ಸಿರಾಜ್ ಶಾಕ್ ನೀಡಿದ್ದು, ಡೇವಿಡ್ ವಾರ್ನರ್ ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮಳೆಯ ಕಾರಣ ಭೋಜನ ವಿರಾಮದವರೆಗೂ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು.
-
Fifty on debut!
— ICC (@ICC) January 7, 2021 " class="align-text-top noRightClick twitterSection" data="
A dream start to Test cricket for Will Pucovski 👏
He takes Australia to tea alongside Marnus Labuschagne 🍵#AUSvIND SCORECARD ▶ https://t.co/Zuk24dsH1t pic.twitter.com/FsNiIjssDC
">Fifty on debut!
— ICC (@ICC) January 7, 2021
A dream start to Test cricket for Will Pucovski 👏
He takes Australia to tea alongside Marnus Labuschagne 🍵#AUSvIND SCORECARD ▶ https://t.co/Zuk24dsH1t pic.twitter.com/FsNiIjssDCFifty on debut!
— ICC (@ICC) January 7, 2021
A dream start to Test cricket for Will Pucovski 👏
He takes Australia to tea alongside Marnus Labuschagne 🍵#AUSvIND SCORECARD ▶ https://t.co/Zuk24dsH1t pic.twitter.com/FsNiIjssDC
ಮೊದಲ ವಿಕೆಟ್ ಪತನವಾದ ನಂತರ ಜೊತೆಯಾದ ವಿಲ್ ಪುಕೋವ್ಸ್ಕಿ ಮತ್ತು ಲಾಬುಶೇನ್ ಆಸೀಸ್ ತಂಡವನ್ನು ಸುಸ್ಥಿತಿಯಲ್ಲಿರಿಸಿದ್ದಾರೆ. 2 ಬಾರಿ ಜೀವದಾನ ಪಡೆದ ವಿಲ್ ಪುಕೋವ್ಸ್ಕಿ ಪಾದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ.
ಚಹಾ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡ 1 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿದ್ದು, ವಿಲ್ ಪುಕೋವ್ಸ್ಕಿ 54 ರನ್ ಮತ್ತು ಲಾಬುಶೇನ್ 34 ರನ್ ಗಳಿಸಿದ್ದಾರೆ.