ETV Bharat / sports

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಾಖಲೆಗಳ ಶಿಖರ ಕಟ್ಟಿದ ಕೊಹ್ಲಿ - ರೋಹಿತ್​ - ಕೊಹ್ಲಿ-ರೋಹಿತ್​ ದಾಖಲೆಗಳ

ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಆಸ್ಟ್ರೇಲಿಯಾ ತಂಡ 286 ರನ್​ಗಳಿಸಿತ್ತು. ಭಾರತ ತಂಡ ರೋಹಿತ್​ ಶರ್ಮಾರ ಭರ್ಜರಿ ಶತಕದ ನೆರವಿನಿಂದ 3 ವಿಕೆಟ್​ ಕಳೆದುಕೊಂಡು ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತದ ತಂಡದ ಆಟಗಾರರು ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.

IND vs Aus
IND vs Aus
author img

By

Published : Jan 20, 2020, 5:24 PM IST

ಬೆಂಗಳೂರು: ಆಸ್ಟ್ರೇಲಿಯಾ ಮತ್ತ ಭಾರತದ ನಡುವಿನ ಕೊನೆಯ ಪಂದ್ಯದಲ್ಲಿ ಕೊಹ್ಲಿ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಕಳೆದ ವರ್ಷದ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಬೆಂಗಳೂರಿನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಆಸ್ಟ್ರೇಲಿಯಾ ತಂಡ 286 ರನ್​ಗಳಿಸಿತ್ತು. ಭಾರತ ತಂಡ ರೋಹಿತ್​ ಶರ್ಮಾರ ಭರ್ಜರಿ ಶತಕದ ನೆರವಿನಿಂದ 3 ವಿಕೆಟ್​ ಕಳೆದುಕೊಂಡು ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತದ ತಂಡದ ಆಟಗಾರರು ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.

  • ರೋಹಿತ್​ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ 29 ನೇ ಶತಕ ಪೂರೈಸಿದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ 4ನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಪಾಂಟಿಗ್​(30) ಕೊಹ್ಲಿ(44) ಸಚಿನ್​(49) ರೋಹಿತ್​ಗಿಂತ ಮುಂದಿದ್ದಾರೆ.
  • ರೋಹಿತ್​ ಶತಕ ದಾಖಲಿಸಿದ್ದಲ್ಲದೇ ಏಕದಿನ ಕ್ರಿಕೆಟ್​ನಲ್ಲಿ 217ಇನ್ನಿಂಗ್ಸ್​ಗಳಲ್ಲಿ 9000 ರನ್​ ಪೂರೈಸಿದರು. ಈ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ 3ನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಇವರಿಗಿಂತ ಮೊದಲು ಕೊಹ್ಲಿ (194) ಹಾಗೂ ಎಬಿ ಡಿ ವಿಲಿಯರ್ಸ್​(205) ವೇಗವಾಗಿ ಈ ಸಾಧನೆ ಮಾಡಿದ್ದಾರೆ.
  • ಆಲ್ಲದೆ ರೋಹಿತ್​ ವಿಂಡೀಸ್​ ದಿಗ್ಗಜ ವಿವಿ ರಿಚರ್ಡ್ಸ್​ ಹಿಂದಿಕ್ಕಿ ಆಸ್ಟ್ರೇಲಿಯಾ ವಿರುದ್ಧ ಹೆಚ್ಚುರನ್​ ಬಾರಿಸಿದ ಮೂರನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು.
  • ಕೊಹ್ಲಿ 89 ರನ್​ಗಳಿಸುವ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 5000 ರನ್​ ಬಾರಿಸಿದ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾದರು. ಈ ಸಾಧನೆಗಾಗಿ ಧೋನಿ 127 ಇನ್ನಿಂಗ್ಸ್​ಗಳಲ್ಲಿ ತೆಗದುಕೊಂಡರೆ, ಕೊಹ್ಲಿ ಕೇವಲ 82 ಇನ್ನಿಂಗ್ಸ್​ಗಳಲ್ಲಿ ತೆಗೆದುಕೊಂಡಿದ್ದಾರೆ
  • ಭಾರತ ತಂಡದ ನಾಯಕ ಚೇಸಿಂಗ್​ ವೇಳೆ 7009 ರನ್​ ಫೂರೈಸಿದ ಎರಡನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಸಚಿನ್​ 180 ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ 133 ಇನ್ನಿಂಗ್ಸ್​ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.
  • ಇನ್ನು ಆಸ್ಟ್ರೇಲಿಯ ಪರ ಶತಕ ಸಿಡಿಸಿದ ಸ್ಟಿವ್​ ಸ್ಮಿತ್​ ಏಕದಿನ ಕ್ರಿಕೆಟ್​ನಲ್ಲಿ 4000 ರನ್​ ಪೂರೈಸಿದರು. ಈ ಸಾಧನೆ ಮಾಡಿದ 18 ಆಸೀಸ್​ ಬ್ಯಾಟ್ಸ್​ಮನ್​ ಎನಿಸಿಕೊಂಡರು. ಅಲ್ಲದೇ ವೇಗವಾಗಿ 4000 ರನ್​ ತಲುಪಿದ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ ಎಂಬ ಶ್ರೇಯಕ್ಕೂ ಪಾತ್ರರಾದರು. ಸ್ಮಿತ್​ 106 ಇನ್ನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದರೆ, ವಾರ್ನರ್​ 93, ಡೀನ್​ ಜಾನ್ಸ್​ 102, ಫಿಂಚ್​ 105 ಇನ್ನಿಂಗ್ಸ್​ನಲ್ಲಿ 4000 ರನ್​ ಪೂರೈಸಿದ್ದರು.
  • ಭಾರತದ ವೇಗಿ ಮೊಹಮ್ಮದ್​ ಶಮಿ 4 ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ತಮ್ಮ ಅತ್ಯುತ್ತಮ ಬೌಲಿಂಗ್​ ಪ್ರದರ್ಶನ ತೋರಿದರು. ಶಮಿ ಈ ಪಂದ್ಯದಲ್ಲಿ 63 ರನ್​ ನೀಡಿ 4 ವಿಕೆಟ್​ ಪಡೆದಿದ್ದರು.
  • ಅಲ್ಲದೇ ಶಮಿ ಜನವರಿ 2019ರಿಂದ ಇಲ್ಲಿಯವರೆಗೆ ಡೆತ್​ ಓವರ್​ಗಳಲ್ಲಿ 19 ವಿಕೆಟ್​ ಪಡೆದಿದ್ದಾರೆ. ಈ ಮೂಲಕ ಬಾಂಗ್ಲಾದೇಶದ ಮುಸ್ಫಿಜುರ್​ ರೆಹಮಾನ್​ (22) ನಂತರ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡರು.
  • ಭಾರತ ತಂಡ 2019ರ ವಿಶ್ವಕಪ್​ನಂತರ ಆಡಿದ ಐಸಿಸಿಯ ಎಲ್ಲಾ ವಿಭಾಗ ಕ್ರಿಕೆಟ್​ ಸರಣಿಯಲ್ಲಿ ಗೆಲುವು ಸಾಧಿಸುವ ಮೂಲಕ ಅಜೇಯ ಓಟವನ್ನು ಮುಂದುವರಿಸಿತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.