ರಾಜ್ಕೋಟ್: ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಟಗಾರರು ಹುಲಿಗಳಂತೆ ಕಾದಾಡಿ ಕಾಂಗರೂ ಪಡೆ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇದೀಗ ಉಭಯ ತಂಡಗಳು 1-1 ಅಂತರದಲ್ಲಿ ಸಮಬಲ ಸಾಧಿಸಿವೆ.

ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಶಿಖರ್-ರೋಹಿತ್ ಜೋಡಿ ಮೊದಲ ವಿಕೆಟ್ ನಷ್ಟಕ್ಕೆ 81 ರನ್ಗಳ ಆಟವಾಡಿದರು. ಈ ವೇಳೆ 42 ರನ್ಗಳಿಸಿದ್ದ ರೋಹಿತ್ ಶರ್ಮಾ ಸ್ಪಿನ್ನರ್ ಜಂಪಾ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದು ವಿಕೆಟ್ ಒಪ್ಪಿಸಿದ್ರು.

ಇದಾದ ಬಳಿಕ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ 2ನೇ ವಿಕೆಟ್ಗೆ ಶಿಖರ್ ಜೊತೆ ಸೇರಿ ಶತಕದ ಜೊತೆಯಾಟವಾಡಿ ತಂಡವನ್ನು ಬೃಹತ್ ಮೊತ್ತದ ಕಡೆ ತೆಗೆದುಕೊಂಡು ಹೋಗುವ ಯತ್ನ ನಡೆಸಿದರು. ಈ ವೇಳೆ 96 ರನ್ಗಳಿಸಿದ್ದ ಶಿಖರ್ ವಿಕೆಟ್ ನೀಡಿ ಶತಕ ವಂಚಿತರಾದರು.
ಇದಾದ ಬಳಿಕ ಕೊಹ್ಲಿ 78ರನ್, ಕೆ.ಎಲ್. ರಾಹುಲ್ ಸ್ಫೋಟಕ 80 ರನ್ ಹಾಗೂ ಜಡೇಜಾ ಅಜೇಯ 20 ರನ್ ಗಳಿಕೆ ಮಾಡಿ ತಂಡ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 340 ರನ್ಗಳಿಕೆ ಮಾಡುವಂತೆ ಮಾಡಿದರು.

ಈ ಸ್ಕೋರ್ ಬೆನ್ನತ್ತಿದ್ದ ಆಸ್ಟ್ರೇಲಿಯಾ ಆರಂಭದಲ್ಲೇ ಸಂಕಷ್ಟಕ್ಕೊಳಗಾಯ್ತು. ಕಳೆದ ಪಂದ್ಯದಲ್ಲಿ ತಂಡಕ್ಕೆ ದಾಖಲೆ ಗೆಲುವು ದಾಖಲಿಸಿಕೊಟ್ಟಿದ್ದ ವಾರ್ನರ್ ಹಾಗೂ ಫಿಂಚ್ ಜೋಡಿ ಉತ್ತಮ ಆರಂಭ ಒದಗಿಸುವಲ್ಲಿ ವಿಫಲಗೊಂಡರು. ವಾರ್ನರ್ 15ರನ್ಗಳಿಸಿ ವಿಕೆಟ್ ನೀಡಿದ್ರೆ, ಫಿಂಚ್ 33ರನ್ಗಳಿಸಿ ಔಟಾದರು. ಇದಾದ ಬಳಿಕ ಒಂದಾದ ಸ್ಮಿತ್- ಮಾರ್ನಸ್ ಜೋಡಿ ಉತ್ತಮ ಆಟವಾಡಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಆದರೆ 46ರನ್ಗಳಿಸಿದ್ದ ವೇಳೆ ಮಾರ್ನಸ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಅಲೆಕ್ಸ್ ಕ್ಯಾರಿ 18ರನ್, ಟರ್ನರ್ 13ರನ್ಗಳಿಸಿ ವಿಕೆಟ್ ಒಪ್ಪಿಸಿದ್ರು. ಇಷ್ಟಾದ್ರೂ ಮತ್ತೊಂದು ಬದಿಯಲ್ಲಿ ಬ್ಯಾಟ್ ಬೀಸಿದ ಸ್ಮಿತ್ ತಂಡಕ್ಕೆ ಗೆಲುವಿನ ಆಸೆ ಜೀವಂತವಾಗಿರಿಸಿದ್ರು. ಆದರೆ 98ರನ್ಗಳಿಸಿದ್ದ ವೇಳೆ ಇವರ ವಿಕೆಟ್ ಉರುಳುತ್ತಿದ್ದಂತೆ ತಂಡ ಗೆಲುವಿನ ಆಸೆ ಕೈಬಿಡುವಂತಾಯಿತು. ಕೊನೆಯಲ್ಲಿ ಅಸ್ಗರ್ 25ರನ್ ಹಾಗೂ ರಿಚರ್ಡ್ಸನ್ ಅಜೇಯ 24ರನ್ಗಳಿಸಿದರು. ಕೊನೆಯದಾಗಿ ತಂಡ 49.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 304 ರನ್ಗಳಿಕೆ ಮಾಡಿದ್ದು, ಟೀಂ ಇಂಡಿಯಾ 36 ರನ್ಗಳ ಗೆಲುವು ದಾಖಲು ಮಾಡಿದೆ.

ಭಾರತದ ಪರ ಶಮಿ 3, ಸೈನಿ, ರವೀಂದ್ರ ಜಡೇಜಾ ಹಾಗೂ ಯಾದವ್ ತಲಾ 2ವಿಕೆಟ್, ಬುಮ್ರಾ1 ವಿಕೆಟ್ ಪಡೆದುಕೊಂಡರು. ಮುಂಬೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿತ್ತು.
ಸರಣಿಯ ಫೈನಲ್ ಪಂದ್ಯ ಭಾರಿ ರೋಚಕತೆಗೆ ವೇದಿಕೆ ಒದಗಿಸಿದ್ದು, ಬೆಂಗಳೂರಿನಲ್ಲಿ ಭಾನುವಾರ ನಡೆಯಲಿದೆ.