ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳು ಎರಡಂಕಿ ರನ್ಗಳಿಸಲು ವಿಫಲರಾಗಿದ್ದಾರೆ.
-
India's lowest team total in Tests, with a highest individual score of 9 😶https://t.co/xQXeCyYrO5 #AUSvIND pic.twitter.com/TexfTYPr1W
— ESPNcricinfo (@ESPNcricinfo) December 19, 2020 " class="align-text-top noRightClick twitterSection" data="
">India's lowest team total in Tests, with a highest individual score of 9 😶https://t.co/xQXeCyYrO5 #AUSvIND pic.twitter.com/TexfTYPr1W
— ESPNcricinfo (@ESPNcricinfo) December 19, 2020India's lowest team total in Tests, with a highest individual score of 9 😶https://t.co/xQXeCyYrO5 #AUSvIND pic.twitter.com/TexfTYPr1W
— ESPNcricinfo (@ESPNcricinfo) December 19, 2020
1924ರ ನಂತರ ಇದೇ ಮೊದಲ ಬಾರಿಗೆ ಇನ್ನಿಂಗ್ಸ್‌ವೊಂದರಲ್ಲಿ ಒಬ್ಬ ಆಟಗಾರನೂ ಸಹ 10 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವಲ್ಲಿ ಶಕ್ತನಾಗಲಿಲ್ಲ. ಅವರೆಲ್ಲಾ ಪ್ಯಾಟ್ ಕಮ್ಮಿನ್ಸ್ ಮತ್ತು ಹೆಜಲ್ವುಡ್ ಬೌಲಿಂಗ್ ದಾಳಿ ಎದುರಿಸಲಾಗದೆ ಪೆವಿಲಿಯನ್ ಪರೇಡ್ ನಡೆಸಿದ್ರು.
ಆರಂಭಿಕ ಆಟಗಾರ ಪೃಥ್ವಿ ಶಾ ಕೇವಲ 4 ರನ್ಗಳಿಗೆ ಔಟಾದರೆ, ಮಯಾಂಕ್ ಅಗರ್ವಾಲ್ 9 ರನ್ಗಳಿಸಿದ್ದಾರೆ. ಬುಮ್ರಾ 2, ಪೂಜಾರಾ 0, ಕೊಹ್ಲಿ 4, ರಹಾನೆ 0, ವಿಹಾರಿ 8, ಸಹಾ 4, ಅಶ್ವಿನ್ 0 , ಉಮೇಶ್ ಯಾದವ್ 4, ಶಮಿ 1 ರನ್ ಗಳಿಸಿದ್ದಾರೆ. ಕನ್ನಡಿಗ ಮಯಾಂಕ್ ಅಗರ್ವಾಲ್ 9 ರನ್ ಗಳಿಸಿ ಭಾರತದ ಪರ ಹೆಚ್ಚು ರನ್ ಕೆಲೆಹಾಕಿದ ಆಟಗಾರರಾಗಿದ್ದಾರೆ.
ಓದಿ: ಮಯಾಂಕ್ ನೂತನ ದಾಖಲೆ.. ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ ಸಾವಿರ ರನ್ ಪೂರೈಸಿದ ಭಾರತದ 3ನೇ ಆಟಗಾರ
ಭಾರತಕ್ಕೂ ಮೊದಲು ದಕ್ಷಿಣ ಆಫ್ರಿಕಾ 1924ರಲ್ಲಿ ಇಂಗ್ಲೆಂಡ್ ವಿರುದ್ಧ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಕೇವಲ 30 ರನ್ಗಳಿಗೆ ಹರಿಣ ಪಡೆ ಸರ್ವಪತನವಾಗಿತ್ತು. ಹರ್ಬಿ ಟೇಲರ್ 7 ರನ್ಗಳಿಸಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿದ್ರು. ಅಲ್ಲದೆ ಇತರೆ ರೂಪದಲ್ಲಿ 11 ರನ್ಗಳು ಉಡುಗೊರೆಯಾಗಿ ಬಂದಿದ್ವು.