ಸಿಡ್ನಿ(ಆಸ್ಟ್ರೇಲಿಯಾ): ನಾಯಕ ಆ್ಯರೋನ್ ಫಿಂಚ್, ಸ್ಟೀವ್ ಸ್ಮಿತ್ ಶತಕ ಮತ್ತು ಮ್ಯಾಕ್ಸ್ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸೀಸ್ ತಂಡ 374 ರನ್ಗಳ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಬಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಆ್ಯರೋನ್ ಫಿಂಚ್ ಉತ್ತಮ ಆರಂಭ ಒದಗಿಸಿದ್ರು. ಈ ಜೋಡಿ ಮೊದಲ ವಿಕೆಟ್ಗೆ 156 ರನ್ ಪೇರಿಸಿತು.
-
Australia finish on a mammoth 374/6 🔥
— ICC (@ICC) November 27, 2020 " class="align-text-top noRightClick twitterSection" data="
Aaron Finch ➜ 114
Steve Smith ➜ 105
What a performance from the hosts!
Follow #AUSvIND 👉 https://t.co/CJnCSbUTV6 pic.twitter.com/NGNLSb9r3c
">Australia finish on a mammoth 374/6 🔥
— ICC (@ICC) November 27, 2020
Aaron Finch ➜ 114
Steve Smith ➜ 105
What a performance from the hosts!
Follow #AUSvIND 👉 https://t.co/CJnCSbUTV6 pic.twitter.com/NGNLSb9r3cAustralia finish on a mammoth 374/6 🔥
— ICC (@ICC) November 27, 2020
Aaron Finch ➜ 114
Steve Smith ➜ 105
What a performance from the hosts!
Follow #AUSvIND 👉 https://t.co/CJnCSbUTV6 pic.twitter.com/NGNLSb9r3c
ಏಕದಿನ ಕ್ರಿಕೆಟ್ನಲ್ಲಿ 22ನೇ ಅರ್ಧಶತಕ ಸಿಡಿಸಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ವಾರ್ನರ್ ಮೊಹಮ್ಮದ್ ಶಮಿ ಎಸೆತದಲ್ಲಿ ರಾಹುಲ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡ್ರು. ನಂತರ ಜೊತೆಯಾದ ಸ್ಟೀವ್ ಸ್ಮಿತ್ ಮತ್ತು ಫಿಂಚ್ ಜೋಡಿ ಭಾರತೀಯ ಬೌಲರ್ಗಳ ಬೆವರಿಳಿಸಿದ್ರು. ಈ ನಡುವೆ ನಾಯಕ ಆ್ಯರೋನ್ ಫಿಂಚ್ ಏಕದಿನ ಕ್ರಿಕೆಟ್ನಲ್ಲಿ 17ನೇ ಶತಕ ಸಿಡಿಸಿ ಮಿಂಚಿದ್ರು.
ಆಸೀಸ್ ಬ್ಯಾಟ್ಸ್ಮನ್ಗಳಿಗೆ ಕಡಿವಾಣ ಹಾಕಲು ದಾಳಿಗಿಳಿದ ಬುಮ್ರಾ ಫಿಂಚ್ ವಿಕೆಟ್ ಪಡೆಯುವಲ್ಲಿ ಸಫಲರಾದರು. ನಂತರ ಬಂದ ಮಾರ್ಕಸ್ ಸ್ಟೊಯ್ನೀಸ್ ಸೊನ್ನೆ ಸುತ್ತಿದ್ರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಮ್ಯಾಕ್ಸ್ವೆಲ್ ಸ್ಫೋಟಕ ಬ್ಯಾಟಿಂಗ್ನ ಮೊರೆ ಹೋದ್ರು. ಕೇವಲ 19 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿಗಳ ನೆರವಿನಿಂದ 45 ರನ್ ಸಿಡಿಸಿ ಶಮಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ್ರು.
-
I.N.C.R.E.D.I.B.L.E.
— ICC (@ICC) November 27, 2020 " class="align-text-top noRightClick twitterSection" data="
Steve Smith smacks the third-fastest ton for Australia in men’s ODIs in his first 50-over game in eight months 🔥
Freak 🙌#AUSvIND pic.twitter.com/PFxaXu2ph8
">I.N.C.R.E.D.I.B.L.E.
— ICC (@ICC) November 27, 2020
Steve Smith smacks the third-fastest ton for Australia in men’s ODIs in his first 50-over game in eight months 🔥
Freak 🙌#AUSvIND pic.twitter.com/PFxaXu2ph8I.N.C.R.E.D.I.B.L.E.
— ICC (@ICC) November 27, 2020
Steve Smith smacks the third-fastest ton for Australia in men’s ODIs in his first 50-over game in eight months 🔥
Freak 🙌#AUSvIND pic.twitter.com/PFxaXu2ph8
ತನ್ನ ಸ್ಫೋಟಕ ಆಟ ಮುಂದುವರೆಸಿದ ಸ್ಟೀವ್ ಸ್ಮಿತ್, 62 ಎಸೆತಗಳಲ್ಲೆ ಶತಕ ಸಿಡಿಸಿ ಮಿಂಚಿದ್ರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 374 ರನ್ ಪೇರಿಸಿತು. ಭಾರತದ ಪರ ಮೊಹಮ್ಮದ್ ಶಮಿ 3, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ ಮತ್ತು ಯಜುವೇಂದ್ರ ಚಹಾಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ರು