ETV Bharat / sports

ಜೈಸ್ವಾಲ್ ಆಲ್​ರೌಂಡರ್​ ಆಟ​... ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ ಕಿರಿಯರ ತಂಡ - ದ.ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ ಕಿರಿಯರ ತಂಡ

ಭಾರತ ಕಿರಿಯರ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಸರಣಿಯ 2ನೇ ಪಂದ್ಯವನ್ನು ಗೆದ್ದು ಇನ್ನು ಒಂದು ಪಂದ್ಯ ಉಳಿದಿರುವಂತೆ ಸರಣಿ ವಶಪಡಿಸಿಕೊಂಡಿದೆ.

India U19 team beats South Africa
India U19 team beats South Africa
author img

By

Published : Dec 28, 2019, 7:25 PM IST

ಈಸ್ಟ್​ ಲಂಡನ್​: ಅಂಡರ್​ 19 ವಿಶ್ವಕಪ್​ಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಭಾರತ ಕಿರಿಯರ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದೆ.

ಟಾಸ್​ ಗೆದ್ದು ಭಾರತ ತಂಡ ಆಫ್ರಿಕನ್ನರನ್ನು ಬ್ಯಾಟಿಂಗ್ ಆಹ್ವಾನಿಸಿತು. ನಾಯಕ ಪ್ರಿಯಂ ಗರ್ಗ್​ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡ ಭಾರತದ ಯುವ ಪಡೆ ದಕ್ಷಿಣ ಆಫ್ರಿಕಾದ ಆಟಗಾರರನ್ನು ಕೇವಲ 119 ರನ್​ಗಳಿಗೆ ಗಂಟುಮೂಟೆ ಕಟ್ಟುವಂತೆ ಮಾಡಿದರು.

ದಕ್ಷಿಣ ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಆ್ಯಂಡ್ರಿವ್​ ಲೋವ್​ 24, ಜೊನಾಥನ್​ ಬರ್ಡ್​ 25 ರನ್​ಗಳಿಸಿದ್ದ ತಂಡದ ಗರಿಷ್ಠ ಮೊತ್ತವಾಯಿತು. ಉಳಿದ ಬ್ಯಾಟ್ಸ್​ಮನ್​ಗಳು ಭಾರತೀಯ ಬೌಲರ್​ಗಳ ಮುಂದೆ ನಿಲ್ಲರಾರದೇ ಬಂದಷ್ಟೇ ವೇಗವಾಗಿ ಪೆವಿಲಿಯನ್​ ಸೇರಿಕೊಂಡರು.

ಭಾರತದ ಪರ ಕರಾರುವಕ್​ ಬೌಲಿಂಗ್​ ದಾಳಿ ನಡೆಸಿದ ಯಶಸ್ವಿ ಜೈಸ್ವಾಲ್​ 14 ರನ್​ ನೀಡಿ 4 ವಿಕೆಟ್​ ಪಡೆದರೆ, ಆಕಾಶ್​ ಸಿಂಗ್​, ಅಥರ್ವ ಅಂಕೋಲೆಕರ್ ಹಾಗೂ ರವಿ ಬಿಶ್ನೋಯ್​ ತಲಾ ಎರಡು ವಿಕೆಟ್​ ಪಡೆದರು.

120 ವಿಕೆಟ್​​ಗಳ ಟಾರ್ಗೆಟ್​ ಪಡೆದ ಭಾರತ ತಂಡ ಕೇವಲ ​16.2 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು ಗಿರಿ ತಲುಪಿ ಇನ್ನೊಂದು ಪಂದ್ಯವಿರುವಂತೆ ಸರಣಿ ಗೆದ್ದುಕೊಂಡಿತು.

ಆರಂಭಿಕನಾಗಿ ಕಣಕ್ಕಿಳಿದಿದ್ದ ಯಶಸ್ವಿ ಜೈಸ್ವಾಲ್​ 56 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 14 ಬೌಂಡರಿ ಸೇರಿದಂತೆ 89 ರನ್​ಗಳಿಸಿ ಔಟಾಗದೇ ಉಳಿದರು. ಇವರಿಗೆ ಸಾಥ್​ ನೀಡಿದ ಧೃವ್​ ಜುರೆಲ್​ 26 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಮೂರನೇ ಔಪಚಾರಿಕ ಏಕದಿನ ಪಂದ್ಯ ಡಿಸೆಂಬರ್​ 30 ರಂದು ನಡೆಯಲಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.