ETV Bharat / sports

ಇಂದಿನಿಂದ ಇಂಡೋ-ವಿಂಡೀಸ್​ ಟಿ-20 ಫೈಟ್​... ಯಾರಿಗೆಲ್ಲ ಸಿಗಲಿದೆ ಚಾನ್ಸ್​​?! - indian cricket team

ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ಇಂದಿನಿಂದ ಟಿ-20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ವಿಶ್ವಚಾಂಪಿಯನ್ನರ ವಿರುದ್ಧ ಕೊಹ್ಲಿ ಪಡೆಯು ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದರ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ.

ವೆಸ್ಟ್​ ಇಂಡೀಸ್​ ಪ್ರವಾಸ
author img

By

Published : Aug 3, 2019, 8:58 AM IST

ಫ್ಲೋರಿಡಾ: ವಿಶ್ವಕಪ್​ ಬಳಿಕ ಮೊದಲ ಬಾರಿಗೆ ಟೀಂ ಇಂಡಿಯಾ ಅಂಗಳಕ್ಕಿಳಿಯುತ್ತಿದೆ. ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡ ಇಂದು ಅಮೆರಿಕದ ಫ್ಲೋರಿಡಾದಲ್ಲಿ ನಡೆಯುತ್ತಿರುವ ವೆಸ್ಟ್​​ ಇಂಡೀಸ್​ ವಿರುದ್ಧದ ಮೊದಲ ಟಿ-20 ಪಂದ್ಯದ ಮೂಲಕ ಕೆರಿಬಿಯನ್​ ಪ್ರವಾಸ ಆರಂಭಿಸಲಿದೆ.

ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್​ ಪಾರ್ಕ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು, ವಿಶ್ವಕಪ್ ಸೆಮಿಫೈನಲ್​​ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಲು ಟೀಂ ಇಂಡಿಯಾ ಹೋರಾಡಲಿದೆ. ಅಲ್ಲದೆ ಕೊಹ್ಲಿ ನಾಯಕತ್ವದ ಟೀಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಕೆರಿಬಿಯನ್​ ಪ್ರವಾಸವು ಮಹತ್ವ ಪಡೆದುಕೊಂಡಿದೆ. ಮೂರು ಪಂದ್ಯಗಳ ಟಿ-20 ಸರಣಿಯ ಬಳಿಕ ಏಕದಿನ ಹಾಗೂ ಟೆಸ್ಟ್​ ಸರಣಿ ನಡೆಯಲಿದ್ದು, ಟಿ-20 ವಿಶ್ವ ಚಾಂಪಿಯನ್ಸ್​​ ಕೆರಿಬಿಯನ್ನರನ್ನು ಮಣಿಸುವುದು ಸುಲಭವಲ್ಲ.

ಭಾರತ ತಂಡ ವೆಸ್ಟ್​ ಇಂಡೀಸ್​ ಪ್ರವಾಸಕ್ಕೆ ಹಲವು ಯುವ ಆಟಗಾರರು ಸ್ಥಾನ ಪಡೆದಿದ್ದು ಆಡುವ 11ರ ಬಳಗದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಮಾಜಿ ನಾಯಕ ಎಂ.ಎಸ್​ ಧೋನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ಯುವ ವಿಕೆಟ್​ ಕೀಪರ್​​ ರಿಷಭ್​ ಪಂತ್​ಗೆ ಅದ್ಭುತ ಅವಕಾಶವಿದೆ. ಪ್ರವಾಸಕ್ಕೂ ಮುನ್ನ ಪ್ರತಿಕ್ರಿಯಿಸಿದ್ದ ನಾಯಕ ವಿರಾಟ್​, ಯುವ ಪ್ರತಿಭೆಗಳಿಗೆ ಈ ಸರಣಿಯು ಸಾಮರ್ಥ್ಯ ತೋರ್ಪಡಿಸಲು ಉತ್ತಮ ವೇದಿಕೆಯಾಗಲಿದೆ ಎಂದಿದ್ದರು. ಯುವ ಬೌಲರ್​ಗಳಾದ ರಾಹುಲ್​ ಚಹರ್ ಹಾಗೂ ನವದೀಪ್​ ಸೈನಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಈಗಷ್ಟೇ ಪಾದಾರ್ಪಣೆ ಮಾಡಬೇಕಿದ್ದು, ಅಲ್ಲದೆ ಮನೀಶ್​ ಪಾಂಡೆ, ಖಲೀಲ್​ ಅಹಮದ್​ ಹಾಗೂ ಶ್ರೇಯಸ್​ ಅಯ್ಯರ್​ ಕೂಡ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇನ್ನು ಅತಿಥೇಯ ತಂಡ ಟಿ-20 ದೈತ್ಯರನ್ನೇ ಒಳಗೊಂಡಿದ್ದು, ಟೀಂ ಇಂಡಿಯಾಕ್ಕೆ ಕಠಿಣ ಸವಾಲು ನೀಡುವುದು ಖಂಡಿತ. ಕಾರ್ಲೋಸ್​ ಬ್ರಾಥ್‌ವೈಟ್ ನೇತೃತ್ವದ ವಿಂಡೀಸ್ ಕಿರೋನ್​ ಪೋಲಾರ್ಡ್​, ನಿಕೋಲಸ್​ ಪೂರನ್ ಹಾಗೂ ​ಎವಿನ್​ ಲೇವಿಸ್​ರಂತಹ ಅಬ್ಬರದ ಆಟಗಾರರನ್ನೊಳಗೊಂಡ ಕೆರಿಬಿಯನ್ನರನ್ನ ಕಟ್ಟಿ ಹಾಕುವುದು ಸುಲಭವಲ್ಲ. ಭುವನೇಶ್ವರ್​ ಕುಮಾರ್​ ನೇತೃತ್ವ ಭಾರತದ ಬೌಲರ್​​ಗಳು ಯಾವ ರೀತಿ ಪಡೆ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ತಂಡಗಳು ಇಂತಿವೆ:

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿ.ಕೀ), ಕೃನಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ ಕುಮಾರ್ ದೀಪಕ್ ಚಹರ್, ನವದೀಪ್ ಸೈನಿ

ವೆಸ್ಟ್ ಇಂಡೀಸ್: ಕಾರ್ಲೋಸ್ ಬ್ರಾಥ್‌ವೈಟ್ (ನಾಯಕ), ಜಾನ್ ಕ್ಯಾಂಪ್ಬೆಲ್, ಎವಿನ್ ಲೇವಿಸ್, ಶಿಮ್ರಾನ್ ಹೆಟ್ಮೇರ್, ನಿಕೋಲಸ್ ಪೂರನ್, ಕೀರನ್ ಪೊಲಾರ್ಡ್, ರೋವ್ಮನ್ ಪೊವೆಲ್, ಕೀಮೋ ಪಾಲ್, ಸುನಿಲ್ ನರೈನ್, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್, ಆಂಥೋನಿ ಬ್ರಾಂಬಲ್, ಆಂಡ್ರೆ ರಸೆಲ್, ಖಾರಿ ಪಿಯರೆ

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.