ETV Bharat / sports

ಮುಷ್ಕರ ಕೈಬಿಟ್ಟ ಬಾಂಗ್ಲಾ ಆಟಗಾರರು: ಭಾರತಕ್ಕೆ ಬರೋದು ಫಿಕ್ಸ್!

author img

By

Published : Oct 24, 2019, 5:04 PM IST

ಬಾಂಗ್ಲಾ ಕ್ರಿಕೆಟ್ ಆಟಗಾರರ ಪ್ರಮುಖ ಬೇಡಿಕೆಗಳನ್ನ ಈಡೇರಿಸೋದಾಗಿ ಕ್ರಿಕೆಟ್​ ಬೋರ್ಡ್​ ಭರವಸೆ ನೀಡಿದ್ದು, ಆಟಗಾರರು ಮುಷ್ಕರ ಕೈಬಿಡುವ ನಿರ್ಧಾರ ಮಾಡಿದ್ದಾರೆ.

ಮುಷ್ಕರ ಕೈಬಿಟ್ಟ ಬಾಂಗ್ಲಾ ಆಟಗಾರರು

ಢಾಕಾ: ಪ್ರಮುಖ ಬೇಡಿಕೆಗಳನ್ನ ಈಡೇರಿಸುವವರೆಗೆ ಕ್ರಿಕೆಟ್​ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದಿದ್ದ ಬಾಂಗ್ಲಾ ಕ್ರಿಕೆಟ್​ ಆಟಗಾರರು ಮುಷ್ಕರ ಕೈಬಿಡುವ ನಿರ್ಧಾರ ಮಾಡಿದ್ದಾರೆ.

ಬಾಂಗ್ಲಾ ಕ್ರಿಕೆಟ್ ಆಟಗಾರರ ಜೊತೆ ಕ್ರಿಕೆಟ್ ಬೋರ್ಡ್​ನ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಎಲ್ಲ ಬೇಡಿಕೆಗಳನ್ನ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಕ್ರಿಕೆಟ್ ಆಟಗಾರರು ನಾಳೆಯಿಂದ ಮುಷ್ಕರ ಕೈಬಿಟ್ಟು ಮೈದಾನಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿದೆ.

11 ಬೇಡಿಕೆ ಮುಂದಿಟ್ಟ ಬಾಂಗ್ಲಾ ಆಟಗಾರರು... ಭಾರತ ಪ್ರವಾಸ ಅನುಮಾನ..!

ಈ ಬಗ್ಗೆ ಮಾತನಾಡಿರುವ ಬಾಂಗ್ಲಾ ಕ್ರಿಕೆಟ್ ಬೋರ್ಡ್​ನ ಮುಖ್ಯಸ್ಥ ನಜ್ಮುಲ್ ಹಸನ್, ಎಲ್ಲ ವಿಚಾರಗಳ ಕುರಿತು ಮಾತುಕತೆ ನಡೆಸಲಾಗಿದ್ದು, ಸಮಸ್ಯೆ ಬಗೆಹರಿದಿದೆ. ಭಾರತ ಪ್ರವಾಸ ಹಿನ್ನೆಲೆಯಲ್ಲಿ ಆಟಗಾರರೆಲ್ಲ ನಾಳೆಯಿಂದ ಅಭ್ಯಾಸ ಪ್ರಾರಂಭ ಮಾಡಲಿದ್ದಾರೆ ಎಂದಿದ್ದಾರೆ.

3 ಪಂದ್ಯಗಳ ಟಿ-20 ಸರಣಿ ಮತ್ತು 2 ಟೆಸ್ಟ್​ ಪಂದ್ಯಗಳ ಸರಣಿಗಾಗಿ ಬಾಂಗ್ಲಾದೇಶ ಭಾರತ ಪ್ರವಾಸ ಕೈಗೊಳ್ಳಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್​ ಪಂದ್ಯವನ್ನ ವೀಕ್ಷಿಸಲು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಆಗಮಿಸಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.