ETV Bharat / sports

ಅಡಿಲೇಡ್​​​ನಲ್ಲಿ ಭಾರತ-ಆಸೀಸ್​ ನಡುವೆ ಪ್ರಥಮ ಹೊನಲು ಬೆಳಕಿನ ಟೆಸ್ಟ್​​​: ಸೌರವ್​ ಗಂಗೂಲಿ - ಭಾರತ Vs ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ

ಭಾರತ - ಆಸ್ಟ್ರೇಲಿಯಾ ನಡುವೆ ಐತಿಹಾಸಿಕ ಪ್ರಥಮ ಹೊನಲು ಬೆಳಕಿನ ಟೆಸ್ಟ್‌ ಪಂದ್ಯ ಅಡಿಲೇಡ್‌ನಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.

Sourav Ganguly
ಸೌರವ್​ ಗಂಗೂಲಿ
author img

By

Published : Oct 18, 2020, 10:19 AM IST

Updated : Oct 18, 2020, 10:30 AM IST

ದುಬೈ: ಕೊರೊನಾ ಸಂಕಷ್ಟದ ನಡುವೆಯೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ -13 ಅನ್ನು ಯಶಸ್ವಿಯಾಗಿ ಮುನ್ನಡೆಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ಆಸೀಸ್​ ವಿರುದ್ಧ ಪಿಂಕ್​ ಬಾಲ್ ಟೆಸ್ಟ್ ಕ್ರಿಕಿಟ್​ ನಡೆಯಲಿದೆ ಎಂದು ಹೇಳಿದ್ದಾರೆ.

ಭಾರತ - ಆಸ್ಟ್ರೇಲಿಯಾ ನಡುವೆ ಐತಿಹಾಸಿಕ ಪ್ರಥಮ ಹೊನಲು ಬೆಳಕಿನ ಟೆಸ್ಟ್‌ ಪಂದ್ಯ ಅಡಿಲೇಡ್‌ನಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.

ಭಾರತದ ಆಸ್ಟ್ರೇಲಿಯಾ ಪ್ರವಾಸವು ನವೆಂಬರ್ ಅಂತ್ಯದಲ್ಲಿ ಪ್ರಾರಂಭವಾಗಲಿದೆ. ಮೂರು ಟಿ- 20 ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳ ನಂತರ ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿವೆ.

ಕ್ರಿಕೆಟ್ ಆಸ್ಟ್ರೇಲಿಯಾ ನಮಗೆ ಒಂದು ವಿವರ ಕಳುಹಿಸಿದೆ. ನಾವು ಅಲ್ಲಿ ಮೂರು ಟಿ- 20, ಮೂರು ಏಕದಿನ ಮತ್ತು ನಾಲ್ಕು ಟೆಸ್ಟ್ ಪಂದ್ಯ ಆಡುತ್ತೇವೆ. ಮೊದಲ ಟೆಸ್ಟ್ ಅಡಿಲೇಡ್‌ನಲ್ಲಿ ಹೊನಲು- ಬೆಳಕಿನ ಪಂದ್ಯ ನಡೆಯುತ್ತದೆ ಎಂದು ಶನಿವಾರ ನಡೆದ ಬಿಸಿಸಿಐನ ಅಪೆಕ್ಸ್ ಮಂಡಳಿ ಸಭೆಯಲ್ಲಿ ತಿಳಿಸಿದ್ದಾರೆ. ಈ ಸಭೆಯು ವಿಡಿಯೋ ಕಾನ್ಫರೆನ್ಸ್​ ಮೂಲಕ ಸಭೆ ನಡೆದಿದ್ದು, ಬಿಸಿಸಿಐ ಅಧ್ಯಕ್ಷರು ಕೋಲ್ಕತ್ತಾದಿಂದ ಭಾಗವಹಿಸಿದ್ದರು.

ದೇಶದಲ್ಲಿ ಕೋವಿಡ್ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಈ ಋತುವಿನಲ್ಲಿ ದೇಶೀಯ ಕ್ರಿಕೆಟ್ ಆಯೋಜಿಸುವ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು

Last Updated : Oct 18, 2020, 10:30 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.