ETV Bharat / sports

ಸತತ 13ನೇ ಟೆಸ್ಟ್​ ಸರಣಿ ಗೆದ್ದು ತವರಿನ ದಾಖಲೆ ಬಲಿಷ್ಠಗೊಳಿಸಿಕೊಂಡ ಟೀಂ ಇಂಡಿಯಾ

author img

By

Published : Mar 6, 2021, 9:21 PM IST

ಭಾರತ ತಂಡ ಕೊನೆಯ ಬಾರಿ ತವರಿನಲ್ಲಿ ಸೋಲು ಕಂಡಿರುವುದೆಂದರೆ 2013ರಲ್ಲಿ. ಇಂಗ್ಲೆಂಡ್ ತಂಡ 2-1ರಲ್ಲಿ ಆತಿಥೇಯರಿಗೆ ಶಾಕ್​ ನೀಡಿತ್ತು. ಆದರೆ 2016-17ರ ಪ್ರವಾಸದಲ್ಲಿ 4-0ಯಲ್ಲಿ ಮಣಿಸುವ ಮೂಲಕ ಭಾರತ ಸೇಡು ತೀರಿಸಿಕೊಂಡಿತ್ತು.

ಸತತ 13ನೇ ಟೆಸ್ಟ್​ ಸರಣಿ
ಸತತ 13ನೇ ಟೆಸ್ಟ್​ ಸರಣಿ

ಅಹ್ಮದಾಬಾದ್​: ಶನಿವಾರ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್​ ಮತ್ತು 25 ರನ್​ಗಳಿಂದ ಮಣಿಸಿದ ಭಾರತ ತಂಡ ತವರಿನಲ್ಲಿ ಸತತ 13 ಟೆಸ್ಟ್​ ಸರಣಿ ಗೆಲ್ಲುವ ಮೂಲಕ ವಿಶ್ವದಾಖಲೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

2013ರಲ್ಲಿ ಆಸ್ಟ್ರೇಲಿಯ ತಂಡವನ್ನು 4-0 ಯಲ್ಲಿ ಮಣಿಸುವ ಮೂಲಕ ಭಾರತ ತಂಡ ತವರಿನಲ್ಲಿ ಸರಣಿ ಗೆಲುವಿನ ಅಭಿಯಾನ ಆರಂಭಿಸಿತ್ತು. ಇದೀಗ 8 ವರ್ಷಗಳ ಅವಧಿಯಲ್ಲಿ ಪಾಕಿಸ್ತಾನವನ್ನು ಹೊರತುಪಡಿಸಿ (ಪಾಕ್​ ವಿರುದ್ಧ ಆಡಿಲ್ಲ) 8 ದೇಶಗಳ ವಿರುದ್ಧ ಭಾರತ ಸತತ 13 ಟೆಸ್ಟ್​ ಸರಣಿಗಳನ್ನು ಗೆದ್ದ ದಾಖಲೆಗೆ ಪಾತ್ರವಾಗಿದೆ. ಈಗಾಗಲೆ ತವರಿನಲ್ಲಿ ಹೆಚ್ಚು ಟೆಸ್ಟ್​ ಸರಣಿಯನ್ನು ಗೆದ್ದಿರುವ ವಿಶ್ವದಾಖಲೆಯನ್ನು ಹೊಂದಿರುವ ಭಾರತ ವರ್ಷದಿಂದ ವರ್ಷಕ್ಕೆ ತನ್ನ ದಾಖಲೆಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತಿದೆ.

ಭಾರತ ತಂಡ ಕೊನೆಯ ಬಾರಿ ತವರಿನಲ್ಲಿ ಸೋಲು ಕಂಡಿರುವುದೆಂದರೆ 2013ರಲ್ಲಿ. ಇಂಗ್ಲೆಂಡ್ ತಂಡ 2-1ರಲ್ಲಿ ಆತಿಥೇಯರಿಗೆ ಶಾಕ್​ ನೀಡಿತ್ತು. ಆದರೆ 2016-17ರ ಪ್ರವಾಸದಲ್ಲಿ 4-0ಯಲ್ಲಿ ಮಣಿಸುವ ಮೂಲಕ ಭಾರತ ಸೇಡು ತೀರಿಸಿಕೊಂಡಿತ್ತು.

ಭಾರತವನ್ನು ಹೊರತುಪಡಿಸಿದರೆ ತವರಿನಲ್ಲಿ ಸತತ ಟೆಸ್ಟ್​ ಸರಣಿಗಳನ್ನು ಗೆದ್ದ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. ಆಸ್ಟ್ರೇಲಿಯಾ 2 ಬಾರಿ (1994ರಿಂದ 2001, 2004 ರಿಂದ 2008) ಸತತ 10 ಟೆಸ್ಟ್​ ಸರಣಿಗಳನ್ನು ಗೆದ್ದ ದಾಖಲೆಯನ್ನು ಹೊಂದಿದೆ. ಇನ್ನು ನ್ಯೂಜಿಲ್ಯಾಂಡ್​ 2017 ರಿಂದ ತವರಿನಲ್ಲಿ ಸತತ 8 ಟೆಸ್ಟ್​ ಸರಣಿಯನ್ನು ಗೆದ್ದಿದೆ.

ಇದನ್ನು ಓದಿ:ಇಂಗ್ಲೆಂಡ್​ ವಿರುದ್ಧ ಪಂತ್​ ಸಿಡಿಸಿದ ಶತಕ 6ನೇ ಕ್ರಮಾಂಕದಲ್ಲೇ ಅತ್ಯುತ್ತಮವಾದದ್ದು: ಕೋಚ್ ಶಾಸ್ತ್ರಿ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.