ಹೈದರಾಬಾದ್: ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಬಹುನಿರೀಕ್ಷಿತ ಟಿ-20 ವಿಶ್ವಕಪ್ ಮುಂದೂಡಿಕೆಯಾಗಿದ್ದು, ಭಾರತದಲ್ಲಿ ನಡೆಯುವುದು ಖಚಿತವಾಗಿದೆ.
ಮುಂದಿನ ವರ್ಷ ಅಂದರೆ 2021ರ ಟಿ-20 ವಿಶ್ವಕಪ್ ಭಾರತದಲ್ಲಿ ಹಾಗೂ 2020 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಆಯೋಜನೆಗೊಂಡಿತ್ತು. ಕೊರೊನಾ ವೈರಸ್ ಕಾರಣ ಕಾಂಗರೂ ನಾಡಿನಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಬೇಕಾಗಿದ್ದ ಟೂರ್ನಿ ಮುಂದೂಡಿಕೆಯಾಗಿತ್ತು. ಹೀಗಾಗಿ ಅದು ಮುಂದಿನ ವರ್ಷ ಭಾರತದಲ್ಲಿ ನಡೆಯಲಿದ್ದು, 2022ರಲ್ಲಿ ನಡೆಯುವ ಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಆಯೋಜನೆ ಮಾಡಲು ಐಸಿಸಿ ಮುಂದಾಗಿವೆ.
-
India: 2021 🇮🇳
— T20 World Cup (@T20WorldCup) August 7, 2020 " class="align-text-top noRightClick twitterSection" data="
Australia: 2022 🇦🇺
CONFIRMED: The next edition of the ICC Men's T20 World Cup will be held in India, while Australia will stage the tournament in 2022! pic.twitter.com/lcFzo4HK7N
">India: 2021 🇮🇳
— T20 World Cup (@T20WorldCup) August 7, 2020
Australia: 2022 🇦🇺
CONFIRMED: The next edition of the ICC Men's T20 World Cup will be held in India, while Australia will stage the tournament in 2022! pic.twitter.com/lcFzo4HK7NIndia: 2021 🇮🇳
— T20 World Cup (@T20WorldCup) August 7, 2020
Australia: 2022 🇦🇺
CONFIRMED: The next edition of the ICC Men's T20 World Cup will be held in India, while Australia will stage the tournament in 2022! pic.twitter.com/lcFzo4HK7N
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂದು ಸಭೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಪ್ರಕಾರ, 2021ರ ಟಿ-20 ವಿಶ್ವಕಪ್ ಭಾರತದಲ್ಲೇ ನಡೆಯಲಿದ್ದು, 2022ರಲ್ಲಿ ಕಾಂಗಾರೂ ನಾಡು ಈ ಟೂರ್ನಿಗೆ ಆತಿಥ್ಯ ಸಿಗಲಿದೆ.
ಅದೇ ರೀತಿ 2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಇನ್ನು, ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಆಯೋಜನೆಗೊಂಡಿದೆ.
ಮಹಿಳೆಯರ ವಿಶ್ವಕಪ್ ಮುಂದಕ್ಕೆ:
ಇನ್ನು ಮಹಿಳೆಯರ ವಿಶ್ವಕಪ್ ಟೂರ್ನಿ 2021ರಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ನಡೆಯಬೇಕಿತ್ತು. ಆದ್ರೆ ಪಂದ್ಯಾವಳಿ 2022ಕ್ಕೆ ಮುಂದೂಡಿಕೆಯಾಗಿದೆ.