ಸಿಡ್ನಿ: ಐಸಿಸಿ ಮಹಿಳಾ ಟಿ-20ಯ ಇಂಗ್ಲೆಂಡ್-ಇಂಡಿಯಾ ನಡುವಿನ ಪಂದ್ಯ ಮಳೆಯಿಂದ ರದ್ದುಗೊಂಡಿರುವ ಕಾರಣ, ನಂಬರ್ 1 ಸ್ಥಾನದಲ್ಲಿದ್ದ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮಹಿಳಾ ತಂಡ ಫೈನಲ್ಗೆ ಲಗ್ಗೆ ಹಾಕಿದೆ.
-
☔ MATCH ABANDONED ☔
— T20 World Cup (@T20WorldCup) March 5, 2020 " class="align-text-top noRightClick twitterSection" data="
For the first time in their history, India have qualified for the Women's #T20WorldCup final 🇮🇳 pic.twitter.com/88DHzqTbnK
">☔ MATCH ABANDONED ☔
— T20 World Cup (@T20WorldCup) March 5, 2020
For the first time in their history, India have qualified for the Women's #T20WorldCup final 🇮🇳 pic.twitter.com/88DHzqTbnK☔ MATCH ABANDONED ☔
— T20 World Cup (@T20WorldCup) March 5, 2020
For the first time in their history, India have qualified for the Women's #T20WorldCup final 🇮🇳 pic.twitter.com/88DHzqTbnK
ಇಂದು ಭಾರತ-ಇಂಗ್ಲೆಂಡ್ ನಡುವೆ ಸೆಮಿಫೈನಲ್ ಪಂದ್ಯ ನಡೆಬೇಕಾಗಿತ್ತು. ಆದರೆ, ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿದ ಕಾರಣ ಪಂದ್ಯ ರದ್ದುಗೊಳಿಸಲಾಯಿತು. ಲೀಗ್ ಪಂದ್ಯದಲ್ಲಿ ತಾನಾಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಮಹಿಳಾ ಪಡೆ ಅಂಕಪಟ್ಟಿಯಲ್ಲಿ ನಂಬರ್ 1ಸ್ಥಾನದಲ್ಲಿದ್ದ ಕಾರಣ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ.
ಐಸಿಸಿ ಟಿ-20 ಕ್ರಿಕೆಟ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಫೈನಲ್ ಪ್ರವೇಶ ಪಡೆದುಕೊಂಡು ದಾಖಲೆ ನಿರ್ಮಾಣ ಮಾಡಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್, ಲೀಗ್ನಲ್ಲಿ ನಾವು ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರಿಂದ ಇವತ್ತು ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದೇವೆ ಎಂದಿದ್ದಾರೆ.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಗೆಲುವ ತಂಡ ಭಾರತದೊಂದಿಗೆ ಸೆಣಸಾಟ ನಡೆಸಲಿದೆ.