ಚೆನ್ನೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ 317ರನ್ಗಳ ಗೆಲುವು ದಾಖಲು ಮಾಡಿದ್ದು, ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ.
-
Thank you, Chennai 🙏🙏#TeamIndia #INDvENG pic.twitter.com/3AOPyyD7h2
— BCCI (@BCCI) February 16, 2021 " class="align-text-top noRightClick twitterSection" data="
">Thank you, Chennai 🙏🙏#TeamIndia #INDvENG pic.twitter.com/3AOPyyD7h2
— BCCI (@BCCI) February 16, 2021Thank you, Chennai 🙏🙏#TeamIndia #INDvENG pic.twitter.com/3AOPyyD7h2
— BCCI (@BCCI) February 16, 2021
ಪಂದ್ಯ ಮುಕ್ತಾಯಗೊಂಡ ಬಳಿಕ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಜೊ ರೂಟ್ ಮಾತನಾಡಿದ್ದು, ಪಂದ್ಯದಲ್ಲಿ ಟೀಂ ಇಂಡಿಯಾ ಎಲ್ಲ ವಿಭಾಗಗಳಲ್ಲೂ ಅದ್ಭುತವಾಗಿ ಪ್ರದರ್ಶನ ನೀಡಿದೆ. ಎಲ್ಲ ಕ್ರೆಡಿಟ್ ಅವರಿಗೆ ಸಲ್ಲಬೇಕು. ಈ ಸೋಲಿನಿಂದ ನಾವು ಪಾಠ ಕಲಿಯಬೇಕಾಗಿದೆ ಎಂದಿರುವ ರೂಟ್, ಸೋಲಿಗೆ ಪಿಚ್ ಕಾರಣವಲ್ಲ ಎಂದು ತಿಳಿಸಿದ್ದಾರೆ.
ಓದಿ: ಇಂಗ್ಲೆಂಡ್ ವಿರುದ್ಧ ಗೆಲುವು.. ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದ ಭಾರತ
ಪಂದ್ಯ ಗೆಲ್ಲುವಲ್ಲಿ ಟಾಸ್ ಕೂಡ ಮಹತ್ವದ ಪಾತ್ರ ನಿರ್ವಹಿಸಿದೆ ಎಂದಿರುವ ರೂಟ್, ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಉತ್ತಮ ರನ್ ಕಲೆ ಹಾಕಿತ್ತು. ಇದಕ್ಕೆ ಪ್ರತ್ಯುತ್ತರ ನೀಡುವಲ್ಲಿ ನಾವು ವಿಫಲವಾದೆವು. ಇಂತಹ ಪಿಚ್ಗಳಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹಾಕುವುದನ್ನ ನಾವು ಕಲಿಯಬೇಕಾಗಿದೆ ಎಂದಿದ್ದಾರೆ.
ಸದ್ಯ ಸರಣಿ 1-1 ಅಂತರದೊಂದಿಗೆ ಸಮಬಲಗೊಂಡಿದ್ದು, ಮುಂದಿನ ಎರಡು ಪಂದ್ಯಗಳಿಂದ ಉತ್ತಮ ಫಲಿತಾಂಶ ಹೊರಹಾಕುವ ವಿಶ್ವಾಸವಿದೆ ಎಂದಿದ್ದಾರೆ. ಮುಂದಿನ ಎರಡು ಪಂದ್ಯ ಅಹ್ಮದಾಬಾದ್ನಲ್ಲಿ ನಡೆಯಲಿದ್ದು, ಫೆ. 24ರಿಂದ ಮೂರನೇ ಟೆಸ್ಟ್ ಆರಂಭಗೊಳ್ಳಲಿದೆ.