ದುಬೈ: ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿ ಗೆದ್ದಿರುವ ಕೊಹ್ಲಿ ಪಡೆ ಟಿ-20ಯಲ್ಲಿ 2 ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ತಂಡ 3-0 ಯಿಂದ ಸರಣಿ ಗೆಲ್ಲುವ ಮೂಲಕ ಅಗ್ರಸ್ಥಾನಕ್ಕೆ ತೆರಳಿದೆ.
ಈ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನೂತನವಾಗಿ ಬಿಡುಗಡೆ ಮಾಡಿರುವ ಟಿ20 ಕ್ರಿಕೆಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ತನ್ನ ಸ್ಥಾನ ಹೆಚ್ಚಿಸಿಕೊಳ್ಳುವಲ್ಲಿ ಸಫಲವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಗೆದ್ದ ಹಿನ್ನೆಲೆಯಲ್ಲಿ ಭಾರತ ಈ ಸಾಧನೆ ಮಾಡಿದೆ.
-
⬆️ Aaron Finch climbs to No.2
— ICC (@ICC) March 10, 2021 " class="align-text-top noRightClick twitterSection" data="
⬆️ Martin Guptill breaks into top 10
Gains for batsmen in the latest @MRFWorldwide ICC T20I Player Rankings after the #NZvAUS T20 series 👀
Full list: https://t.co/2ImN92Rkvr pic.twitter.com/k578Z47wzM
">⬆️ Aaron Finch climbs to No.2
— ICC (@ICC) March 10, 2021
⬆️ Martin Guptill breaks into top 10
Gains for batsmen in the latest @MRFWorldwide ICC T20I Player Rankings after the #NZvAUS T20 series 👀
Full list: https://t.co/2ImN92Rkvr pic.twitter.com/k578Z47wzM⬆️ Aaron Finch climbs to No.2
— ICC (@ICC) March 10, 2021
⬆️ Martin Guptill breaks into top 10
Gains for batsmen in the latest @MRFWorldwide ICC T20I Player Rankings after the #NZvAUS T20 series 👀
Full list: https://t.co/2ImN92Rkvr pic.twitter.com/k578Z47wzM
ಟಿ-20 ಕ್ರಿಕೆಟ್ನಲ್ಲಿ ಉತ್ತಮ ಫಾರ್ಮ್ನಲ್ಲಿರುವ ಕರ್ನಾಟಕದ ಆಟಗಾರ ಕೆ.ಎಲ್ ರಾಹುಲ್ ಎರಡನೇ ಸ್ಥಾನ ಉಳಿಸಿಕೊಂಡಿದ್ದರೆ, ನಾಯಕ ವಿರಾಟ್ ಕೊಹ್ಲಿ ಒಂದು ಸ್ಥಾನ ಕುಸಿದು ಆರನೇ ಸ್ಥಾನಕ್ಕೆ ಭಾಜನರಾಗಿದ್ದಾರೆ. ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಡೇವಿಡ್ ಮಲಾನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು 915 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ 816 ಅಂಕ ಗಳಿಸಿ 2 ಸ್ಥಾನದಲ್ಲೇ ಮುಂದುವರಿದಿದ್ದಾರೆ.
ಕಳೆದ ಸರಣಿಯಲ್ಲಿ ಉತ್ತಮವಾಗಿ ಆಡಿದ್ದ ಆರೋನ್ ಫಿಂಚ್ 808 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನದ ಬಾಬರ್ ಅಜಾಂ 801 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ಲೀಡರ್ ವಿರಾಟ್ ಕೊಹ್ಲಿ 697 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ.