ETV Bharat / sports

ಇಂಗ್ಲೆಂಡ್​ 205ಕ್ಕೆ ಆಲೌಟ್​: ಮೊದಲ ದಿನ ಗಿಲ್ ವಿಕೆಟ್ ಕಳೆದುಕೊಂಡು 24 ರನ್​ಗಳಿಸಿದ ಭಾರತ

ಇನ್ನು 206 ರನ್​ಗಳನ್ನು ಬೆನ್ನತ್ತಿರುವ ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ 24 ರನ್​ಗಳಿಸಿದೆ. ಶುಬ್ಮನ್​ ಗಿಲ್​ ಖಾತೆ ತೆರೆಯದೆ ಜೇಮ್ಸ್​ ಆ್ಯಂಡರ್ಸನ್​ ಎಸೆದ ಮೊದಲ ಓವರ್​​ನ 3ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ 8 ಮತ್ತು ಚೇತೇಶ್ವರ್ ಪೂಜಾರ 15 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

author img

By

Published : Mar 4, 2021, 5:41 PM IST

ಭಾರತ vs  ಇಂಗ್ಲೆಂಡ್ ಟೆಸ್ಟ್​
ಭಾರತ vs ಇಂಗ್ಲೆಂಡ್ ಟೆಸ್ಟ್​

ಅಹ್ಮದಾಬಾದ್​: ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡವನ್ನು 205ಕ್ಕೆ ಆಲೌಟ್​ ಮಾಡಿರುವ ಭಾರತ ತಂಡ, ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಆರಂಭಿಸಿ ಮೊದಲ ಆಘಾತ ಎದುರಿಸಿದೆ. ಯುವ ಆಟಗಾರ ಶುಬ್ಮನ್ ಗಿಲ್​ ಖಾತೆ ತೆರೆಯದೆ ನಿರ್ಗಮಿಸಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ ತಂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಬಾರಿಗೆ 200ರ ಗಡಿ ದಾಟಿತು. ಆಲ್​ರೌಂಡರ್​ ಬೆನ್​ ಸ್ಟೋಕ್ಸ್​ (55) ಅರ್ಧಶತಕ ಸಿಡಿಸಿದರೆ, ಡೇನಿಯಲ್ ಲಾರೆನ್ಸ್​​ 46 ರನ್​ ಗಳಿಸಿದರು.

ಇನ್ನು 206 ರನ್​ಗಳನ್ನು ಬೆನ್ನತ್ತಿರುವ ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ 24 ರನ್​ಗಳಿಸಿದೆ. ಶುಬ್ಮನ್​ ಗಿಲ್​ ಖಾತೆ ತೆರೆಯದೆ ಜೇಮ್ಸ್​ ಆ್ಯಂಡರ್ಸನ್​ ಎಸೆದ ಮೊದಲ ಓವರ್​​ನ 3ನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ರೋಹಿತ್ ಶರ್ಮಾ 8 ಮತ್ತು ಚೇತೇಶ್ವರ್ ಪೂಜಾರ 15 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಇನ್ನು ಮೊದಲ ಇನ್ನಿಂಗ್ಸ್​ನಲ್ಲಿ ಅದ್ಭುತ ಬೌಲಿಂಗ್ ನಡೆಸಿದ ಅಕ್ಷರ ಪಟೇಲ್ 68 ರನ್​ ನೀಡಿ 4 ವಿಕೆಟ್​ ಪಡೆದು ಆಂಗ್ಲರ ಪತನಕ್ಕೆ ಕಾರಣರಾದರು. ರವಿಚಂದ್ರನ್ ಅಶ್ವಿನ್ 47ಕ್ಕೆ 3, ಮೊಹಮ್ಮದ್ ಸಿರಾಜ್​ 45ಕ್ಕೆ 2 ಮತ್ತು ಸುಂದರ್​ 14ಕ್ಕೆ 1 ವಿಕೆಟ್​ ಪಡೆದರು.

ಇದನ್ನು ಓದಿ:ಸಿರಾಜ್​ ಕೆಣಕಿದ ಸ್ಟೋಕ್ಸ್ ಜೊತೆ ವಾದಕ್ಕಿಳಿದ ಕೊಹ್ಲಿ: ವಿಡಿಯೋ ವೈರಲ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.