ಚೆನ್ನೈ: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 317 ರನ್ಗಳ ಅಂತರದಿಂದ ಗೆದ್ದ ಭಾರತ ತಂಡ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 4ರಿಂದ 2ನೇ ಸ್ಥಾನಕ್ಕೆ ಜಿಗಿದಿದೆ.
ಚೆಪಾಕ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಭಾರತ ಗೆಲುವಿನ ಸರಾಸರಿ ಅಂಕ 69.7ಕ್ಕೆ ಏರಿಕೆಯಾಗಿದ್ದು, 2ನೇ ಸ್ಥಾನಕ್ಕೇರಿದೆ. ಈಗಾಗಲೆ ಫೈನಲ್ಗೆ ಅರ್ಹತೆಗಿಟ್ಟಿಸಿಕೊಂಡಿರುವ ನ್ಯೂಜಿಲ್ಯಾಂಡ್ ತಂಡ(70) ಮೊದಲ ಸ್ಥಾನದಲ್ಲಿದೆ. ಭಾರತ ಒಟ್ಟು 460 ಚಾಂಪಿಯನ್ಶಿಪ್ ಅಂಕಗಳನ್ನು ಹೊಂದಿದ್ದರೆ, ಕಿವೀಸ್ 420 ಅಂಕಗಳನ್ನು ಹೊಂದಿದೆ. ಕೋವಿಡ್ 19 ಕಾರಣದಿಂದ ಕೆಲವು ಸರಣಿ ರದ್ದಾಗಿರುವುದರಿಂದ ಒಟ್ಟು ಅಂಕಗಳಿಗೆ ಬದಲಾಗಿ ಗೆಲುವಿನ ಸರಾಸರಿ ಅಂಕದಲ್ಲಿ ಗರಿಷ್ಠ ಅಂಕ ಪಡೆದ ತಂಡಗಳು ಫೈನಲ್ನಲ್ಲಿ ಸೆಣಸಾಡಲಿವೆ.
-
England will have to win the remaining two #INDvENG Tests to make it to the #WTC21 final 👀 pic.twitter.com/YW3OTwQKo6
— ICC (@ICC) February 16, 2021 " class="align-text-top noRightClick twitterSection" data="
">England will have to win the remaining two #INDvENG Tests to make it to the #WTC21 final 👀 pic.twitter.com/YW3OTwQKo6
— ICC (@ICC) February 16, 2021England will have to win the remaining two #INDvENG Tests to make it to the #WTC21 final 👀 pic.twitter.com/YW3OTwQKo6
— ICC (@ICC) February 16, 2021
ಇನ್ನು ಭಾರತ ತಂಡ ತನ್ನ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆಗಿಟ್ಟಿಸಿಕೊಳ್ಳಬೇಕಾದರೆ, ಇನ್ನುಳಿದ 2 ಪಂದ್ಯಗಳಲ್ಲಿ ಕನಿಷ್ಠ ಒಂದನ್ನು ಗೆದ್ದು, ಮತ್ತೊಂದನ್ನು ಡ್ರಾ ಸಾಧಿಸಬೇಕಿದೆ.
-
⬆️ India move to the No.2 position
— ICC (@ICC) February 16, 2021 " class="align-text-top noRightClick twitterSection" data="
⬇️ England slip to No.4
Here's the latest #WTC21 standings table after the conclusion of the second #INDvENG Test! pic.twitter.com/bLNCVyDg4z
">⬆️ India move to the No.2 position
— ICC (@ICC) February 16, 2021
⬇️ England slip to No.4
Here's the latest #WTC21 standings table after the conclusion of the second #INDvENG Test! pic.twitter.com/bLNCVyDg4z⬆️ India move to the No.2 position
— ICC (@ICC) February 16, 2021
⬇️ England slip to No.4
Here's the latest #WTC21 standings table after the conclusion of the second #INDvENG Test! pic.twitter.com/bLNCVyDg4z
ಇನ್ನು ಇಂಗ್ಲೆಂಡ್ ಫೈನಲ್ ಪ್ರವೇಶಿಸಬೇಕಾದರೆ ಮುಂದಿನ 2 ಟೆಸ್ಟ್ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಒಂದು ವೇಳೆ ಇಂಗ್ಲೆಂಡ್ ಒಂದು ಪಂದ್ಯವನ್ನು ಗೆದ್ದರೆ , ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಲಿದೆ. ಪ್ರಸ್ತುತ ಆಸ್ಟ್ರೇಲಿಯಾ 67 ಸರಾಸರಿ ಅಂಕವನ್ನು ಹೊಂದಿದೆ.
ಇದನ್ನು ಓದಿ:ಸರಣಿ ಸಮಬಲ: ಮೊದಲ ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಂಡ ಟೀಂ ಇಂಡಿಯಾ