ETV Bharat / sports

ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಎದುರಿಸಲಿರುವ ಸಮಸ್ಯೆಗಳನ್ನು ವಿವರಿಸಿದ ರಿಕಿ ಪಾಂಟಿಂಗ್ - ಭಾರತ vs ಆಸ್ಟ್ರೇಲಿಯಾ

ಪ್ರಸ್ತುತ ಬಾರ್ಡರ್​ ಗವಾಸ್ಕರ್​ ಟ್ರೋಫಿಯನ್ನು ತನ್ನ ವಶದಲ್ಲಿಟ್ಟುಕೊಂಡಿರುವ ಭಾರತ ತಂಡ ಕೊನೆಯ 3 ಟೆಸ್ಟ್​ ಪಂದ್ಯಗಳನ್ನು ಕೊಹ್ಲಿ ಅನುಪಸ್ಥಿತಿಯಲ್ಲಿ ಹೇಗೆ ಎದುರಿಸಲಿದೆ. ಇದು ಖಂಡಿತಾ ಟೀಮ್​ ಇಂಡಿಯಾಗೆ ಸುಲಭದ ಮಾತಲ್ಲ ಎಂದು ಪಾಂಟಿಂಗ್ ಹೇಳಿದ್ದಾರೆ.

ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್
author img

By

Published : Nov 19, 2020, 7:08 PM IST

ಸಿಡ್ನಿ: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ನಂತರ ಸಾಕಷ್ಟು ಸವಾಲುಗಳನ್ನು ಎದುರಿದಲಿದೆ. ಕೊಹ್ಲಿ ಮೊದಲ ಟೆಸ್ಟ್​ನ ನಂತರ ಹೊರಗುಳಿಯಲಿದ್ದಾರೆ. ಅವರ ನಂತರ ತಂಡದ ಸಂಯೋಜನೆಯಲ್ಲಿ ಸಾಕಷ್ಟು ಅನಿಶ್ಚಿತತೆ ಕಾಣುತ್ತದೆ ಎಂದು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಬಾರ್ಡರ್​ ಗವಾಸ್ಕರ್​ ಟ್ರೋಫಿಯನ್ನು ತನ್ನ ವಶದಲ್ಲಿಟ್ಟುಕೊಂಡಿರುವ ಭಾರತ ತಂಡ ಕೊನೆಯ 3 ಟೆಸ್ಟ್​ ಪಂದ್ಯಗಳನ್ನು ಕೊಹ್ಲಿ ಅನುಪಸ್ಥಿತಿಯಲ್ಲಿ ಹೇಗೆ ಎದುರಿಸಲಿದೆ. ಇದು ಖಂಡಿತಾ ಟೀಮ್​ ಇಂಡಿಯಾಗೆ ಸುಲಭದ ಮಾತಲ್ಲ ಎಂದು ಪಾಂಟಿಂಗ್ ಹೇಳಿದ್ದಾರೆ.

ಭಾರತ ತಂಡ ಕಳೆದ ಬಾರಿ ಇಲ್ಲಿಗೆ ಬಂದಿದ್ದ ವೇಳೆ ಅತ್ಯುತ್ತಮ ಪ್ರದರ್ಶನ ತೋರಿತ್ತು. ಆದರೆ ತಂಡ ಕೆಲವು ಆಟಗಾರರನ್ನು(ಸ್ಮಿತ್ ಮತ್ತು ವಾರ್ನರ್​) ಟಾಪ್​ ಆರ್ಡರ್​ನಲ್ಲಿ ಮಿಸ್ ಮಾಡಿಕೊಂಡಿತ್ತು. ಅದು ತಂಡಕ್ಕೆ ದೊಡ್ಡ ಅಂತರ ಉಂಟು ಮಾಡಿತ್ತು ಎಂದು cricket.com.au.ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಸರಣಿಯಲ್ಲಿ ಭಾರತ ತಂಡ ಕೆಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಕಂಡುಕೊಂಡಿಲ್ಲ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ ಆಡದಿರುವ ಆ ಮೂರು ಟೆಸ್ಟ್​ಗಳಲ್ಲಿ ಅವರ ಬ್ಯಾಟಿಂಗ್ ಕ್ರಮಾಂಕ ಮತ್ತು ನಾಯಕತ್ವ ಭಾರತ ತಂಡವನ್ನು ಸಂಪೂರ್ಣ ಬದಲಿಸಲಿದೆ. ರಹಾನೆ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳಬಹುದು ಎಂದು ನೀವು ನಿರೀಕ್ಷಿಸಬಹುದು. ಆದರೆ ಅದು ಅವರ ಮೇಲೆ ಹೆಚ್ಚು ಒತ್ತಡವನ್ನುಂಟು ಮಾಡುತ್ತದೆ. ಇನ್ನು 4ನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎಂಬುದು ಕೂಡ ತುಂಬಾ ದೊಡ್ಡ ಸವಾಲಾಗಲಿದೆ ಎಂದಿದ್ದಾರೆ.

"ಈಗಲೂ ಸಹ ಟೆಸ್ಟ್​ ಸರಣಿಯ ಬಗ್ಗೆ ಅವರ(ಭಾರತ ತಂಡ) ಮನಸ್ಸಿನಲ್ಲಿ ಸ್ಪಷ್ಟವಾದ ನಿಲುವಿದೆ ಎಂದು ನಾನು ಭಾವಿಸುವುದಿಲ್ಲ. ಮೊದಲ ಟೆಸ್ಟ್ ಪಂದ್ಯಕ್ಕೆ ಆರಂಭಿಕರಾಗಿ ಯಾರು ಕಣಕ್ಕಿಳಿಯುತ್ತಾರೆ, ಕೊಹ್ಲಿ ಹೋದ ನಂತರ ಯಾರು ನಾಲ್ಕರಲ್ಲಿ ಬ್ಯಾಟ್ ಮಾಡುತ್ತಾರೆ? ಇಂತಹ ಪ್ರಶ್ನೆಗಳು ಭಾರತದ ಮುಂದಿವೆ.

ಇನ್ನು ಬೌಲಿಂಗ್ ವಿಭಾಗದಲ್ಲೂ ಶಮಿ-ಬುಮ್ರಾ ಜೊತೆ ಇಶಾಂತ್ ಅಥವಾ ಉಮೇಶ್ ಯಾದವ್​ ಅಥವಾ ಯುವ ಬೌಲರ್​ಗಳಾದ ಸೈನಿ ಅಥವಾ ಸಿರಾಜ್​ ಇರಬೇಕಾ? ಎನ್ನುವ ಪ್ರಶ್ನೆ ಅವರಲ್ಲಿದೆ. ಆದರೆ ಆಸ್ಟ್ರೇಲಿಯಾ ಮುಂದೆ ಪುಕೋವ್​ಸ್ಕಿ ಅಥವಾ ಜೋ ಬರ್ನ್ಸ್​ರಲ್ಲಿ ಯಾರು ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ ಎನ್ನುವುದೊಂದೇ ಪ್ರಶ್ನೆ ಇದೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಕಳೆದ ಬೇಸಿಗೆಯಲ್ಲಿ ಉತ್ತಮ ಪ್ರದರ್ಶನ ತೋರಿರುವ ಜೋ ಬರ್ನ್ಸ್​ ತಮ್ಮ ಸ್ಥಾನ ಕಳೆದುಕೊಳ್ಳುವ ತಪ್ಪನ್ನು ಮಾಡಿಲ್ಲ ಎಂದು ಪಾಂಟಿಂಗ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.