ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.
ಟಿ-20 ಸರಣಿಯಲ್ಲಿ ಸೋಲು ಕಂಡಿರುವ ಭಾರತ ತಂಡ ಆಸ್ಟ್ರೇಲಿಯಾ ತಂಡಕ್ಕೆ ತಿರುಗೇಟು ನೀಡಲು ಕಾಯುತ್ತಿದೆ. ಇಂದಿನ ಪಂದ್ಯದಲ್ಲಿ ಆಸೀಸ್ ತಂಡವನ್ನ ಸೋಲಿಸಿ ಕೊಹ್ಲಿ ಬಾಯ್ಸ್ ಸೇಡು ತೀರಿಸಿಕೊಳ್ಳುತ್ತಾರ ಕಾದು ನೋಡಬೇಕು.
ವಿಶ್ವಕಪ್ ಟೂರ್ನ್ಮೆಂಟ್ಗೂ ಮುನ್ನ ನಡೆಯುತ್ತಿರುವ ಈ ಸರಣಿ ಭಾರತ ತಂಡದ ನಾಲ್ವರು ಆಟಗಾರರಿಗೆ ಮಹತ್ವದ್ದೆನಿಸಿದೆ. ವಿಶ್ವಕಪ್ ಸರಣಿಗೆ ಆಯ್ಕೆಯಾಗುವ 15 ಜನರ ತಂಡದಲ್ಲಿ 2 ಸ್ಥಾನಕ್ಕಾಗಿ ನಾಲ್ವರು ಆಟಗಾರರು ಪೈಪೋಟಿ ನಡೆಸುತ್ತಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್, ರಿಷಭ್ ಪಂತ್, ವಿಜಯ್ ಶಂಕರ್ ಮತ್ತು ಸಿದ್ದಾರ್ಥ್ ಕೌಲ್ ಅಂತಿಮ 15 ಜನರ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಆಸೀಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವ ಅವಶ್ಯಕತೆ ಇದೆ.
ಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಕನ್ನಡಿಗ ಕೆ.ಎಲ್. ರಾಹುಲ್ ಇಂದಿನ ಏಕದಿನ ಪಂದ್ಯದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ಇತ್ತ ಯುವ ಆಟಗಾರ ರಿಷಬ್ ಪಂತ್ ಕೂಡ ಇಂದಿನ ಪಂದ್ಯದಲ್ಲಿ ಸ್ಥಾನ ಪಡೆದುಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ತವರು ನೆಲದಲ್ಲಿ ಟೆಸ್ಟ್ ಸರಣಿ ಸೋತ ನಂತರ ಭಾರತಕ್ಕೆ ಬಂದು ಟಿ-20 ಸರಣಿ ಗೆದ್ದುಕೊಂಡಿರುವ ಫಿಂಚ್ ಪಡೆ. ಇಂದಿನ ಪಂದ್ಯದಲ್ಲೂ ಟೀಂ ಇಂಡಿಯಾಗೆ ಟಕ್ಕರ್ ಕೊಡಲು ಕಸರತ್ತು ನಡೆಸುತ್ತಿದ್ದಾರೆ.