ಪುಣೆ : ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ 7 ರನ್ಗಳ ರೋಚಕ ಗೆಲುವು ಸಾಧಿಸಿದ ಭಾರತ ತಂಡ 3 ಪಂದ್ಯಗಳ ಸರಣಿಯನ್ನ 2-1ರಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ಆಂಗ್ಲರ ವಿರುದ್ಧ ಟೆಸ್ಟ್, ಟಿ20 ಮತ್ತು ಏಕದಿನ ಹೀಗೆ ಮೂರು ಸರಣಿಗಳನ್ನೂ ಕೊಹ್ಲಿ ಬಳಗ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಭಾರತ ನೀಡಿದ 330 ರನ್ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 322 ರನ್ಗಳಿಸಲಷ್ಟೇ ಶಕ್ತವಾಗಿ 7 ರನ್ಗಳಿಂದ ಸೋಲುಂಡಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಲ್ಲೇ ಜೇಸನ್ ರಾಯ್(14) ಮತ್ತು ಜಾನಿ ಬೈರ್ಸ್ಟೋವ್(1) ವಿಕೆಟ್ ಕಳೆದುಕೊಂಡಿತು. ಈ ಇಬ್ಬರು ಆರಂಭಿಕರು ಭುವನೇಶ್ವರ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು.
ನಂತರ 3ನೇ ವಿಕೆಟ್ಗೆ ಒಂದಾದ ಬೆನ್ ಸ್ಟೋಕ್ಸ್ ಮತ್ತು ಡೇವಿಡ್ ಮಲನ್ 3ನೇ ವಿಕೆಟ್ ಜೊತೆಯಾಟದಲ್ಲಿ 40 ರನ್ ಸೇರಿಸಿ ಚೇತರಿಕೆ ನೀಡಿದರು. ಈ ಹಂತದಲ್ಲಿ ಕಣಕ್ಕಿಳಿದ ನಟರಾಜನ್ 35 ರನ್ಗಳಿಸಿದ್ದ ಸ್ಟೋಕ್ಸ್ ವಿಕೆಟ್ ಪಡೆದು ಬ್ರೇಕ್ ನೀಡಿದರು. ನಂತರ ಬಂದ ನಾಯಕ ಜೋಸ್ ಬಟ್ಲರ್ 15 ರನ್ಗಳಿಸಿ ಠಾಕೂರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
-
That Winning Feeling 👏👏#TeamIndia beat England by 7 runs in the third & final @Paytm #INDvENG ODI and complete a 2-1 series win. 👍👍
— BCCI (@BCCI) March 28, 2021 " class="align-text-top noRightClick twitterSection" data="
Scorecard 👉 https://t.co/wIhEfE5PDR pic.twitter.com/mqfIrwJKQb
">That Winning Feeling 👏👏#TeamIndia beat England by 7 runs in the third & final @Paytm #INDvENG ODI and complete a 2-1 series win. 👍👍
— BCCI (@BCCI) March 28, 2021
Scorecard 👉 https://t.co/wIhEfE5PDR pic.twitter.com/mqfIrwJKQbThat Winning Feeling 👏👏#TeamIndia beat England by 7 runs in the third & final @Paytm #INDvENG ODI and complete a 2-1 series win. 👍👍
— BCCI (@BCCI) March 28, 2021
Scorecard 👉 https://t.co/wIhEfE5PDR pic.twitter.com/mqfIrwJKQb
95ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ಜೊತೆಯಾದ ಲಿವಿಂಗ್ಸ್ಟೋನ್ ಮತ್ತು ಮಲನ್ 5ನೇ ವಿಕೆಟ್ಗೆ 60 ರನ್ ಸೇರಿಸಿ ಚೇತರಿಕೆ ನೀಡಿದರು. ಮಲನ್ 50 ಎಸೆತಗಳಲ್ಲಿ 6 ಬೌಂಡರಿ ಸಹಿತ 50 ರನ್ ಸಿಡಿಸಿದರೆ, ಲಿವಿಂಗ್ಸ್ಟೋನ್ 37 ರನ್ಗಳಿಸಿದರು.
ಈ ಇಬ್ಬರು ಠಾಕೂರ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮೋಯಿನ್ ಅಲಿ 25 ಎಸೆತಗಳಲ್ಲಿ ತಲಾ 2 ಸಿಕ್ಸರ್ ಮತ್ತು ಬೌಂಡರಿ ಸಹಿತ 29 ರನ್ಗಳಿಸಿ ಭುವಿಗೆ 3ನೇ ಬಲಿಯಾದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ತೋರಿದ ಸ್ಯಾಮ್ ಕರ್ರನ್ 9ನೇ ವಿಕೆಟ್ ಜೊತೆಯಾಟದಲ್ಲಿ ಮಾರ್ಕ್ವುಡ್(14) ಜೊತೆ ಸೇರಿ 60 ರನ್ ಸೇರಿಸಿ ಭಾರತದ ಪಾಳೆಯದಲ್ಲಿ ಸೋಲಿನ ಚಾಯೆ ಮೂಡುವಂತೆ ಮಾಡಿದ್ದರು.
50ನೇ ಓವರ್ನಲ್ಲಿ ಇಂಗ್ಲೆಂಡ್ ಗೆಲುವಿಗೆ 14 ರನ್ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲಿ 2 ರನ್ ಕದಿಯುವ ಪ್ರಯತ್ನದಲ್ಲಿ ಮಾರ್ಕ್ವುಡ್ ರನ್ಔಟ್ ಆದರು. 2ನೇ ಎಸೆತದಲ್ಲಿ ಸಿಂಗಲ್ಸ್ ಬಂದರೆ, 3 ಮತ್ತು 4ನೇ ಎಸೆತವನ್ನು ನಟರಾಜನ್ ಡಾಟ್ ಮಾಡುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು. ಕೊನೆಯ ಎರಡು ಎಸೆತಗಳಲ್ಲಿ 4 ರನ್ ಬಿಟ್ಟುಕೊಡುವ ಮೂಲಕ ಭಾರತಕ್ಕೆ 7 ರನ್ಗಳ ರೋಚಕ ಜಯ ತಂದುಕೊಟ್ಟರು.
-
India win!
— ICC (@ICC) March 28, 2021 " class="align-text-top noRightClick twitterSection" data="
Natarajan gives away just six runs in the final over, giving his team a seven-run victory.
It means India take the ODI series 2-1! 🏆 pic.twitter.com/Au4lyUs2EM
">India win!
— ICC (@ICC) March 28, 2021
Natarajan gives away just six runs in the final over, giving his team a seven-run victory.
It means India take the ODI series 2-1! 🏆 pic.twitter.com/Au4lyUs2EMIndia win!
— ICC (@ICC) March 28, 2021
Natarajan gives away just six runs in the final over, giving his team a seven-run victory.
It means India take the ODI series 2-1! 🏆 pic.twitter.com/Au4lyUs2EM
ಉತ್ತಮ ಬೌಲಿಂಗ್ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ 42 ರನ್ನೀಡಿ 3 ವಿಕೆಟ್ ಪಡೆದರೆ, ಶಾರ್ದುಲ್ ಠಾಕೂರ್ 67ರನ್ ನೀಡಿ 4 ವಿಕೆಟ್ ಪಡೆದರು. ನಟರಾಜನ್ ಒಂದು ವಿಕೆಟ್ ಪಡೆದಿದ್ದಲ್ಲದೆ ಅದ್ಭುತವಾದ ಕೊನೆಯ ಓವರ್ ಎಸೆದು ಭಾರತಕ್ಕೆ 7ರನ್ಗಳ ವಿರೋಚಿತ ಗೆಲುವು ತಂದುಕೊಟ್ಟರು. ಕೊನೆಯವರೆಗೂ ಅಜೇಯರಾಗುಳಿದ ಸ್ಯಾಮ್ ಕರ್ರನ್ 83 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ಗಳ ನೆರವಿನಿಂದ 95 ರನ್ಗಳಿಸಿದರು.
ಇದಕ್ಕು ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡ ಶಿಖರ್ ಧವನ್, ರಿಷಭ್ ಪಂತ್ , ಹಾರ್ದಿಕ್ ಪಾಂಡ್ಯ ಅರ್ಧಶತಕದ ನೆರವಿನಿಂದ ನೆರವಿನಿಂದ 48.2 ಓವರ್ಗಳಲ್ಲಿ 329 ರನ್ಗಳಿಸಿತ್ತು.
ಶಿಖರ್ ಧವನ್(67) ಮತ್ತು ರೋಹಿತ್(37)ರ 103 ರನ್ಗಳ ಆರಂಭಿಕ ಜೊತೆಯಾಟದ ನಡುವೆಯೂ ಭಾರತ 157 ರನ್ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಒಂದಾದ ಪಂತ್ ಮತ್ತು ಪಾಂಡ್ಯ ಜೋಡಿ 11.4 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿ 5ನೇ ವಿಕೆಟ್ ಜೊತೆಯಾಟದಲ್ಲಿ 99ರನ್ಗಳ ಸೂರೆಗೈದರು. ಶತಕದತ್ತ ಮುನ್ನುಗ್ಗುತ್ತಿದ್ದ ರಿಷಭ್ ಪಂತ್ 78(62 ಎಸೆತ) ರನ್ಗಳಿಸಿದ್ದ ವೇಳೆ ಸ್ಯಾಮ್ ಕರ್ರನ್ ಬೌಲಿಂಗ್ ವಿಕೆಟ್ ಕೀಪರ್ ಬಟ್ಲರ್ಗೆ ಕ್ಯಾಚ್ ನೀಡಿ ಔಟಾದರು. ಅವರ ಇನ್ನಿಂಗ್ಸ್ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 78ರನ್ಗಳಿಸಿದ್ದರು. ಇವರ ಬೆನ್ನಲ್ಲೇ 44 ಎಸೆತಗಳಲ್ಲಿ 64 ರನ್ಗಳಿಸಿದ್ದ ಹಾರ್ದಿಕ್ ಕೂಡ ಔಟಾದರು. ಕೊನೆಯಲ್ಲಿ ಶಾರ್ದುಲ್ 30 ಮತ್ತು ಕೃನಾಲ್ 25 ರನ್ಗಳಿಸಿ ತಂಡದ ಮೊತ್ತವನ್ನು 300ಗಡಿ ದಾಟಿಸಿದರು.
ಇಂಗ್ಲೆಂಡ್ ಪರ ಮಾರ್ಕ್ವುಡ್ 3, ಆದಿಲ್ ರಶೀದ್ 2, ಮೊಯೀನ್ ಅಲಿ, ಬೆನ್ ಸ್ಟೋಕ್ಸ್ ಟಾಪ್ಲೆ ಮತ್ತು ಕರ್ರನ್ ತಲಾ ಒಂದು ವಿಕೆಟ್ ಪಡೆದರು.
ಈಗಾಗಲೇ ಟೆಸ್ಟ್ ಸರಣಿನ್ನು 3-1ರಲ್ಲಿ, ಟಿ20 ಸರಣಿಯನ್ನ 3-2ರಲ್ಲಿ ಜಯಸಿದ್ದ ಭಾರತ ಇದೀಗ ಏಕದಿನ ಸರಣಿಯನ್ನು 2-1ರಲ್ಲಿ ಗೆಲ್ಲುವ ಮೂಲಕ ಆಂಗ್ಲರ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸುವ ಮೂಲಕ ತವರಿನಲ್ಲಿ ತಾವೆಂದು ಬಲಿಷ್ಠವೆಂಬುದನ್ನು ಸಾಬೀತು ಪಡಿಸಿದೆ.
ಸೋಲಿನ ಪಂದ್ಯವನ್ನು ಏಕಾಂಗಿ ಹೋರಾಟದ ಮೂಲಕ ಕೊನೆಯ ಓವರ್ವರೆಗೆ ತೆಗೆದುಕೊಂಡು ಹೋದ ಸ್ಯಾಮ್ ಕರ್ರನ್(95) ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 3 ಪಂದ್ಯಗಳಿಂದ 219 ರನ್ಗಳಿಸಿದ್ದ ಜಾನಿ ಬೇರ್ ಸ್ಟೋವ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.