ETV Bharat / sports

ನಾಳೆ ನಡೆಯುವ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲಿದ್ದಾರೆ ಭಾರತ-ಆಸೀಸ್ ಆಟಗಾರರು

ಡೀನ್ ಜೋನ್ಸ್ ಅವರ ಗೌರವಾರ್ಥವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯ ಆರಂಭಕ್ಕೂ ಮೊದಲು ಒಂದು ನಿಮಿಷ ಮೌನಾಚರಣೆ ನಡೆಸಿ ಅಗಲಿದ ಕ್ರಿಕೆಟರ್​ಗೆ ಆಟಗಾರರು ಗೌರವ ಸಲ್ಲಿಸಲಿದ್ದಾರೆ.

India, Australia players to wear armbands during 1st ODI
ಭಾರತ vs ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ
author img

By

Published : Nov 26, 2020, 7:03 PM IST

ಸಿಡ್ನಿ(ಆಸ್ಟ್ರೇಲಿಯಾ): ಐಪಿಎಲ್ ಸಮಯದಲ್ಲಿ ನಿಧನರಾದ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಡೀನ್ ಜೋನ್ಸ್ ಅವರಿಗೆ ಗೌರವ ಸೂಚಿಲು ಭಾರತೀಯ ಮತ್ತು ಆಸ್ಟ್ರೇಲಿಯಾದ ಕ್ರಿಕೆಟಿಗರು ನಾಳೆ ನಡೆಯಲಿರುವ ಏಕದಿನ ಪಂದ್ಯದ ವೇಳೆ ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿಯಲಿದ್ದಾರೆ.

ಡೀನ್ ಜೋನ್ಸ್ ಅವರ ಗೌರವಾರ್ಥವಾಗಿ ಕಪ್ಪು ಪಟ್ಟಿ ಧರಿಸಲಿದ್ದು, ಪಂದ್ಯ ಆರಂಭಕ್ಕೂ ಮೊದಲು ಒಂದು ನಿಮಿಷ ಮೌನಾಚರಣೆ ನಡೆಸಿ ಅಗಲಿದ ಕ್ರಿಕೆಟರ್​ಗೆ ಗೌರವ ಸಲ್ಲಿಸಲಿದ್ದಾರೆ.

ಹೃದಯಾಘಾತ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​​ ಡೀನ್​ ಜೋನ್ಸ್​ ನಿಧನ

ಆಸ್ಟ್ರೇಲಿಯಾ ಪರ 52 ಟೆಸ್ಟ್ ಮತ್ತು 164 ಏಕದಿನ ಪಂದ್ಯಗಳನ್ನು ಆಡಿರುವ ಡೀನ್ ಜೋನ್ಸ್, ಐಪಿಎಲ್ ಅಧಿಕೃತ ಪ್ರಸಾರಕರ ವೀಕ್ಷಕ ವಿವರಣೆಕಾರರ ಭಾಗವಾಗಿದ್ದರು. ಸೆ. 24ರಂದು ಹೃದಯಾಘಾತದಿಂದ ಮುಂಬೈನಲ್ಲಿ ನಿಧನರಾಗಿದ್ದರು.

"ಎಸ್‌ಸಿಜಿಯಲ್ಲಿ ಭಾರತ ವಿರುದ್ಧ ಶುಕ್ರವಾರ ಆರಂಭವಾಗಲಿರುವ ಏಕದಿನ ಪಂದ್ಯದಕ್ಕೂ ಮೊದಲು ಒಂದು ನಿಮಿಷದ ಮೌನಾಚರಣೆ ನಡೆಸಲಿದ್ದಾರೆ. ಅಲ್ಲದೆ ಎರಡೂ ರಾಷ್ಟ್ರದ ಆಟಗಾರರು ತೋಳಿಗೆ ಕಪ್ಪು ಪಟ್ಟಿ ಧರಿಸಲಿದ್ದಾರೆ. ದೊಡ್ಡ ಪರದೆಯಲ್ಲಿ ಅವರ ಭವ್ಯ ವೃತ್ತಿಜೀವನದ ಪ್ಯಾಕೇಜ್ ಸಹ ಇರುತ್ತದೆ" ಎಂದು ಪ್ರಮುಖ ಮಾಧ್ಯಮವೊಂದು ವರದಿ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.