ETV Bharat / sports

U-19 ವಿಶ್ವಕಪ್​ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ.. ತಂಡದಲ್ಲಿ ಇಬ್ಬರು ಕನ್ನಡಿಗರು..! - U19 ವಿಶ್ವಕಪ್​ ಟೂರ್ನಿಗೆ ಭಾರತ ತಂಡ ರಿಲೀಸ್​

ಟೀಂ ಇಂಡಿಯಾ ತಂಡ ಜ.18ರಂದು ಶ್ರೀಲಂಕಾವನ್ನು ಎದುರಿಸುವ ಮೂಲಕ U-19 ವಿಶ್ವಕಪ್ ಟೂರ್ನಿಯ ಅಭಿಯಾನ ಆರಂಭಿಸಲಿದೆ.

India announce U19 Cricket World Cup squad
U-19 ವಿಶ್ವಕಪ್​ ಟೂರ್ನಿಗೆ ಟೀಂ ಇಂಡಿಯಾ ಪ್ರಕಟ
author img

By

Published : Dec 2, 2019, 10:05 AM IST

ಮುಂಬೈ: ಮುಂದಿನ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ U-19 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ.

13ನೇ ಆವೃತ್ತಿಯ U-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರಿಯಂ ಗರ್ಗ್​ ಮುನ್ನಡೆಸಲಿದ್ದು, ಧ್ರುವ ಚಾಂದ್ ಜುರೆಲ್​ಗೆ ಉಪನಾಯಕ ಜವಾಬ್ದಾರಿ ವಹಿಸಲಾಗಿದೆ. ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಶುಭಾಂಗ್ ಹೆಗ್ಡೆ ಹಾಗೂ ವಿಧ್ಯಾಧರ್ ಪಾಟೀಲ್ ಸ್ಥಾನ ಪಡೆದ ಕರ್ನಾಟಕ ಮೂಲದ ಆಟಗಾರರು.

U-19 ವಿಶ್ವಕಪ್ 2020ರ ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಜರುಗಲಿದೆ. ಈ ಬಾರಿ ಹದಿನಾರು ತಂಡಗಳು ಸೆಣಸಾಡಲಿದ್ದು, ನಾಲ್ಕು ತಂಡಗಳ ನಾಲ್ಕು ಗುಂಪುಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ ಲೀಗ್ ಹಂತಕ್ಕೇರಲಿವೆ. ಗುಂಪಿನ ಕೊನೆಯ ಎರಡು ತಂಡಗಳು ಪ್ಲೇಟ್ ಲೀಗ್ ಆಡಲಿವೆ.

ಹಾಲಿ ಚಾಂಪಿಯನ್ ಭಾರತ 'ಎ' ಗುಂಪಿನಲ್ಲಿದೆ. ಜಪಾನ್, ನ್ಯೂಜಿಲ್ಯಾಂಡ್, ಶ್ರೀಲಂಕಾ ಇದೇ ಗುಂಪಿನ ಇತರೇ ತಂಡಗಳು. ಭಾರತ ತಂಡ ಜ.18ರಂದು ಶ್ರೀಲಂಕಾವನ್ನು ಎದುರಿಸುವ ಮೂಲಕ U-19 ವಿಶ್ವಕಪ್ ಟೂರ್ನಿಯ ಅಭಿಯಾನ ಆರಂಭಿಸಲಿದೆ.

U-19 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ:

ಪ್ರಿಯಂ ಗರ್ಗ್(ನಾಯಕ), ಧ್ರುವ ಚಾಂದ್ ಜುರೆಲ್(ಉ.ನಾಯಕ,ವಿ.ಕೀ)​​, ಯಶಸ್ವಿ ಜೈಸ್ವಾಲ್​​, ತಿಲಕ್​ ವರ್ಮ, ದಿವ್ಯಾಂಶ್​ ಸಕ್ಸೇನಾ, ಶಾಶ್ವತ್ ರಾವತ್, ದಿವ್ಯಾಂಶ್ ಜೋಶಿ, ಶುಭಾಂಗ್​​ ಹೆಗ್ಡೆ, ಶವಿ ಬಿಶ್ನೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೆಕರ್​​, ಕುಮಾರ್ ಕುಶಾಗ್ರ(ವಿ.ಕೀ), ಸುಶಾಂತ್ ಮಿಶ್ರಾ, ವಿಧ್ಯಾದರ್ ಪಾಟೀಲ್

Intro:Body:

13ನೇ ಆವೃತ್ತಿ U-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರಿಯಂ ಗರ್ಗ್​ ಮುನ್ನಡೆಸಲಿದ್ದು, ಧ್ರುವ ಚಾಂದ್ ಜುರೆಲ್​ಗೆ ಉಪನಾಯಕ ಜವಾಬ್ದಾರಿ ವಹಿಸಲಾಗಿದೆ.

U-19 ವಿಶ್ವಕಪ್ 2020ರ ಜನವರಿ 17ರಿಂದ ಫೆಬ್ರವರಿ 9ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಜರುಗಲಿದೆ. ಈ ಬಾರಿ ಹದಿನಾರು ತಂಡಗಳು ಸೆಣಸಾಡಲಿದ್ದು, ನಾಲ್ಕು ತಂಡಗಳ ನಾಲ್ಕು ಗುಂಪುಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೂಪರ್ ಲೀಗ್ ಹಂತಕ್ಕೇರಲಿವೆ. ಗುಂಪಿನ ಕೊನೆಯ ಎರಡು ತಂಡಗಳು ಪ್ಲೇಟ್ ಲೀಗ್ ಆಡಲಿವೆ.

ಹಾಲಿ ಚಾಂಪಿಯನ್ ಭಾರತ 'ಎ' ಗುಂಪಿನಲ್ಲಿದೆ. ಜಪಾನ್, ನ್ಯೂಜಿಲ್ಯಾಂಡ್, ಶ್ರೀಲಂಕಾ ಇದೇ ಗುಂಪಿನ ಇತರೇ ತಂಡಗಳು. ಭಾರತ ತಂಡ ಜ.18ರಂದು ಶ್ರೀಲಂಕಾವನ್ನು ಎದುರಿಸುವ ಮೂಲಕ U-19 ವಿಶ್ವಕಪ್ ಟೂರ್ನಿಯ ಅಭಿಯಾನ ಆರಂಭಿಸಲಿದೆ.

U-19 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ:

ಪ್ರಿಯಂ ಗರ್ಗ್(ನಾಯಕ), ಧ್ರುವ ಚಾಂದ್ ಜುರೆಲ್(ಉ.ನಾಯಕ,ವಿ.ಕೀ)​​, ಯಶಸ್ವಿ ಜೈಸ್ವಾಲ್​​, ತಿಲಕ್​ ವರ್ಮ, ದಿವ್ಯಾಂಶ್​ ಸಕ್ಸೇನಾ, ಶಾಶ್ವತ್ ರಾವತ್, ದಿವ್ಯಾಂಶ್ ಜೋಶಿ, ಶುಭಾಂಗ್​​ ಹೆಗ್ಡೆ, ಶವಿ ಬಿಶ್ನೋಯ್, ಆಕಾಶ್ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೆಕರ್​​, ಕುಮಾರ್ ಕುಶಾಗ್ರ(ವಿ.ಕೀ), ಸುಶಾಂತ್ ಮಿಶ್ರಾ, ವಿಧ್ಯಾದರ್ ಪಾಟೀಲ್

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.