ಪುಣೆ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಮತ್ತು ಅಂತಿಮ ಟಿ-20 ಪಂದ್ಯ ದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಟೀಂ ಇಂಡಿಯಾಗೆ ಬ್ಯಾಟಿಂಗ್ಗೆ ಆಹ್ವಾನಿಸಿದೆ.
-
Sri Lanka have won the toss and will bowl first in the 3rd and final T20I against #TeamIndia.#INDvSL pic.twitter.com/BjihdFfxPB
— BCCI (@BCCI) January 10, 2020 " class="align-text-top noRightClick twitterSection" data="
">Sri Lanka have won the toss and will bowl first in the 3rd and final T20I against #TeamIndia.#INDvSL pic.twitter.com/BjihdFfxPB
— BCCI (@BCCI) January 10, 2020Sri Lanka have won the toss and will bowl first in the 3rd and final T20I against #TeamIndia.#INDvSL pic.twitter.com/BjihdFfxPB
— BCCI (@BCCI) January 10, 2020
ಇಂದೋರ್ನಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿ 1-0 ಅಂಕಗಳ ಅಂತರದಲ್ಲಿ ಸರಣಿ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಇಂದಿನ ಪಂದ್ಯವನ್ನೂ ಗೆದ್ದು ಟಿ-20 ಸರಣಿ ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ.
ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೊಹ್ಲಿ ಹುಡುಗರು ಯಾವುದೇ ಕ್ಷಣದಲ್ಲಿ ಪ್ರವಾಸಿ ತಂಡ ಮೇಲುಗೈ ಸಾಧಿಸಲು ಬಿಡಲಿಲ್ಲ. ಬೌಲಿಂಗ್‌ನಲ್ಲಿ ಕಂಬ್ಯಾಕ್ ಮಾಡಿರುವ ಜಸ್ಪ್ರಿತ್ ಬುಮ್ರಾ ಉತ್ತಮವಾಗಿ ಬೌಲ್ ಮಾಡಿದ್ದು, ಅಭ್ಯಾಸದ ಕೊರತೆ ಇದ್ದಂತೆ ಕಾಣಲಿಲ್ಲ. ಇತ್ತ ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಶ್ರೇಯಸ್ ಐಯ್ಯರ್, ವಿರಾಟ್ ಕೊಹ್ಲಿ ಕೂಡ ಕಳೆದ ಪಂದ್ಯದಲ್ಲಿ ಮಿಂಚಿದ್ದು ಬ್ಯಾಟಿಂಗ್ ವಿಭಾಗದಲ್ಲಿ ಭಾರತ ಬಲಿಷ್ಠವಾಗಿದೆ.
ಸಂಭಾವ್ಯ ತಂಡ
ಭಾರತ: ವಿರಾಟ್ ಕೊಹ್ಲಿ (ನಾಯಕ) ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಶಿಖರ್ ಧವನ್, ಶಿವಂ ದುಬೆ, ಶ್ರೇಯಸ್ ಅಯ್ಯರ್, ಕುಲದೀಪ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ನವೀಪ್ ಸೈನಿ, ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್
ಶ್ರೀಲಂಕಾ: ಲಸಿತ್ ಮಾಲಿಂಗ (ಕ್ಯಾಪ್ಟನ್), ಧನಂಜಯ್ ಡಿ ಸಿಲ್ವಾ, ಹಸರಂಗ, ಓಷಾಡ ಫರ್ನಾಂಡೊ, ಅವಿಷ್ಕಾ ಫರ್ನಾಂಡೊ, ದನುಷ್ಕಾ ಗುಣತಿಲಕ, ಲಹಿರು ಕುಮಾರ, ದಾಸುನ್ ಶನಕ, ಇಸುರು ಉದಾನ, ಭಾನುಕ ರಾಜಪಕ್ಸ, ಕುಸಲ್ ಪಿರೇರಾ