ETV Bharat / sports

ಕಿವೀಸ್​ ವೇಗದ ದಾಳಿಗೆ ನಡುಗಿದ ಭಾರತ : 165ಕ್ಕೆ ಕೊಹ್ಲಿ ಪಡೆ ಸರ್ವಪತನ - ಕಿವೀಸ್​ vs ಭಾರತ ಟೆಸ್ಟ್​ ಕ್ರಿಕೇಟ್​

ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 122 ರನ್​ ಗಳಿಸಿದ್ದ ಭಾರತ ತಂಡ, ಎರಡನೇ ದಿನದ ಮೊದಲ ಸೆಷನ್​ನಲ್ಲೇ ತನ್ನೆಲ್ಲಾ ವಿಕೇಟ್​ ಕಳೆದುಕೊಂಡಿದೆ.

India All Out For 165
165 ಕ್ಕೆ ಭಾರತ ಆಲೌಟ್​
author img

By

Published : Feb 22, 2020, 5:52 AM IST

ವೆಲ್ಲಿಂಗ್ಟನ್​: ಕಿವಿಸ್​ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 122 ರನ್​ ಗಳಿಸಿದ್ದ ಭಾರತ ತಂಡ, ಎರಡನೇ ದಿನದ ಮೊದಲ ಸೆಷನ್​ನಲ್ಲೇ ತನ್ನೆಲ್ಲಾ ವಿಕೇಟ್​ ಕಳೆದುಕೊಂಡಿದೆ.

ಎರಡನೇ ದಿನ ಬ್ಯಾಟಿಂಗ್​ ಆರಂಭಿಸಿದ ಉಪನಾಯಕ ರಹಾನೆ ಮತ್ತು ಕೀಪರ್​ ರಿಶಬ್​ ಪಂತ್​ ಜೋಡಿ ಮೊದಲ ಸೆಷನ್​ನ 3ನೇ ಓವರ್​ನಲ್ಲೇ ಬೇರ್ಪಟ್ಟಿತು. ನಂತರ ಬಂದ ಆರ್​. ಅಶ್ವಿನ್​ ಕೂಡ ಮೊದಲ ಎಸೆತದಲ್ಲೇ ಔಟ್​ ಆಗುವ ಮೂಲಕ ನಿರಾಸೆ ಅನುಭವಿಸಿದರು. ರಹಾನೆ 46 ರನ್​ ಗಳಿಸಿ ಪೆವಿಲಿಯನ್​ ದಾರಿ ಹಿಡಿದರು.

ಅಂತಿಮವಾಗಿ 165 ರನ್​ಗಳ ಅಲ್ಪ ಮೊತ್ತಕ್ಕೆ ಕುಸಿದ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ. ನ್ಯೂಜಿಲ್ಯಾಂಡ್​ ಪರ ಬಿಗು ದಾಳಿ ನಡೆಸಿದ ಟಿಮ್​ ಸೌತಿ​ ಮತ್ತು ಕೈಲ್​ ಜಾಮಿಸನ್​ ತಲಾ 4 ವಿಕೇಟ್​ ಪಡೆದರೆ, ಬೋಲ್ಟ್​ 1 ವಿಕೇಟ್​ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್​ :

ಓವರ್​ 68.1, 165/10

ರಹಾನೆ 46

ರಿಶಬ್​ ಪಂತ್​ 19

ಆರ್​ ಅಶ್ವಿನ್​ 0

ಮೊಹಮ್ಮದ್​ ಶಮಿ 21

ಇಶಾಂತ್​ ಶರ್ಮಾ 05

ETV Bharat Logo

Copyright © 2025 Ushodaya Enterprises Pvt. Ltd., All Rights Reserved.