ಅಹ್ಮದಾಬಾದ್ : ಇಂಗ್ಲೆಂಡ್ ವಿರುದ್ಧದ ಮೊಟೆರಾದಲ್ಲಿ ನಡೆಯಲಿರುವ 3ನೇ ಟೆಸ್ಟ್ಗೂ ಮುನ್ನ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನೆಟ್ಸ್ನಲ್ಲಿ ಬೆವರು ಹರಿಸುತ್ತಿದ್ದಾರೆ.
4 ಪಂದ್ಯಗಳ ಟೆಸ್ಟ್ ಸರಣಿ ಈಗಾಗಲೆ 1-1ರಲ್ಲಿ ಸಮಬಲವಾಗಿದೆ. ಫೆಬ್ರವರಿ 24 ರಿಂದ ಡೇ ಅಂಡ್ ನೈಟ್ ಟೆಸ್ಟ್ ಆರಂಭವಾಗಲಿದೆ. ವಿಶ್ವದ ಅತಿದೊಡ್ಡ ಸ್ಟೇಡಿಯಂ ಆಗಿರುವ ಮೊಟೆರಾದಲ್ಲಿ ನಡೆಯುವ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಕೂಡ ಇದೇ ಆಗಲಿದೆ.
-
Consistency is the 🔑 pic.twitter.com/GybCwqFgCl
— Virat Kohli (@imVkohli) February 19, 2021 " class="align-text-top noRightClick twitterSection" data="
">Consistency is the 🔑 pic.twitter.com/GybCwqFgCl
— Virat Kohli (@imVkohli) February 19, 2021Consistency is the 🔑 pic.twitter.com/GybCwqFgCl
— Virat Kohli (@imVkohli) February 19, 2021
ಫಿಟ್ನೆಸ್ನಲ್ಲಿ ವಿಶ್ವದಲ್ಲಿಯೇ ಅತ್ಯುತ್ತಮ ಹೆಸರನ್ನು ಹೊಂದಿರುವ ವಿರಾಟ್ ಕೊಹ್ಲಿ ಮೈದಾನದಲ್ಲಿ ಅಭ್ಯಾಸಕ್ಕೆ ಹೇಗೆ ಹೊತ್ತು ನೀಡುತ್ತಾರೋ ಹಾಗೆ ದೇಹವನ್ನು ಫಿಟ್ ಆಗಿರಿಸಲು ಮೊದಲ ಆದ್ಯತೆ ನೀಡುತ್ತಾರೆ. ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ಗೂ ಮುನ್ನ ಜಿಮ್ನಲ್ಲಿ ಬೆವರು ಹರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕೊಹ್ಲಿ ಶುಕ್ರವಾರ ವೇಯ್ಟ್ ಲಿಫ್ಟಿಂಗ್ ಮಾಡುತ್ತಿರುವ ಫೋಟೋಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಸ್ಥಿರತೆ ಆಟಗಾರರಿಗೆ ಪ್ರಮುಖವಾದ ಅಂಶ ಎಂದು ಬರೆದುಕೊಂಡಿದ್ದಾರೆ.
ಕೊಹ್ಲಿ ಕಳೆದು 2 ಪಂದ್ಯಗಳಿಂದ ದೊಡ್ಡ ಮೊತ್ತವನ್ನು ಗಳಿಸಲು ವಿಫಲರಾಗಿದ್ದಾರೆ. ಆದರೆ ಕೊನೆಯ ಬಾರಿಗೆ ಶತಕ ಸಿಡಿಸಿ ಸುಮಾರು 20 ತಿಂಗಳೇ ಕಳೆದಿವೆ. ಇದೀಗ ನೂತನ ಕ್ರೀಡಾಂಗಣದಲ್ಲಿ ಹೊಸ ತಮ್ಮ ಶತಕದ ಬರವನ್ನು ನೀಗಿಸಿಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.