ಚೆನ್ನೈ: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 227 ರನ್ಗಳ ಹೀನಾಯ ಸೋಲು ಕಂಡಿದೆ. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 420 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 192 ರನ್ಗಳಿಗೆ ಆಲೌಟ್ ಆಗುವ ಮೂಲಕ 227ರನ್ಗಳ ಬೃಹತ್ ಸೋಲುಕಂಡಿದೆ.
ಸೋಮವಾರ 39ಕ್ಕೆ 1 ವಿಕೆಟ್ ಕಳೆದುಕೊಂಡು ಕೊನೆಯ ದಿನ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಮೊದಲ ಸೆಷನ್ನಲ್ಲೇ 5 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
-
ENGLAND WIN 🎉
— ICC (@ICC) February 9, 2021 " class="align-text-top noRightClick twitterSection" data="
An all-round performance by the visitors has given them a 227-run victory over India.
The lead the four-test series 1-0!#INDvENG ➡️ https://t.co/gnj5x4GOos pic.twitter.com/luS7HAcWIm
">ENGLAND WIN 🎉
— ICC (@ICC) February 9, 2021
An all-round performance by the visitors has given them a 227-run victory over India.
The lead the four-test series 1-0!#INDvENG ➡️ https://t.co/gnj5x4GOos pic.twitter.com/luS7HAcWImENGLAND WIN 🎉
— ICC (@ICC) February 9, 2021
An all-round performance by the visitors has given them a 227-run victory over India.
The lead the four-test series 1-0!#INDvENG ➡️ https://t.co/gnj5x4GOos pic.twitter.com/luS7HAcWIm
ನಿನ್ನೆ 12 ರನ್ಗಳಿಸಿದ್ದ ಪೂಜಾರ ಸ್ಪಿನ್ನರ್ ಜ್ಯಾಕ್ ಲೀಚ್ಗೆ ವಿಕೆಟ್ ಒಪ್ಪಿಸಿದರೆ, ಶುಬ್ಮನ್ ಗಿಲ್(50), ಅಜಿಂಕ್ಯ ರಹಾನೆ(0) ಹಾಗೂ ರಿಷಭ್ ಪಂತ್(11) ಅನುಭವಿ ವೇಗಿ ಜೇಮ್ಸ್ ಆ್ಯಂಡರ್ಸನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಾಷಿಂಗ್ಟನ್ ಸುಂದರ್ ಶೂನ್ಯಕ್ಕೆ ಡಾಮ್ ಬೆಸ್ ಬೌಲಿಂಗ್ನಲ್ಲಿ ಜೋಸ್ ಬಟ್ಲರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಈ ಸಂದರ್ಭದಲ್ಲಿ ಕೊಹ್ಲಿ ಜೊತೆಗೂಡಿದ ಅಶ್ವಿನ್ 7ನೇ ವಿಕೆಟ್ಗೆ 53 ರನ್ಗಳ ಜೊತೆಯಾಟ ನಡೆಸಿದರು. ಈ ಜೋಡಿ 19 ಓವರ್ಗಳ ಕಾಲ ಕ್ರೀಸ್ನಲ್ಲಿದ್ದು, ಪಂದ್ಯವನ್ನು ಡ್ರಾಗೊಳಿಸಲು ಪ್ರಯತ್ನಿಸಿದರಾದರೂ ಅಶ್ವಿನ್(9) ಔಟಾಗುವುದರೊಂದಿಗೆ ಭಾರತದ ಸೋಲು ಖಚಿತವಾಯಿತು.
ಅಶ್ವಿನ್ ಬೆನ್ನಲ್ಲೇ 104 ಎಸೆತಗಳಲ್ಲಿ 9 ಬೌಂಡರಿ ಸಹಿತ 72 ರನ್ಗಳಿಸಿದ್ದ ನಾಯಕ ಕೊಹ್ಲಿ ವೇಗಿ ಬೆನ್ಸ್ಟೋಕ್ಸ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನದೀಮ್(0) ಜ್ಯಾಕ್ ಲೀಚ್ಗೆ ಹಾಗೂ ಜಸ್ಪ್ರೀತ್ ಬುಮ್ರಾ(4) ಜೋಫ್ರಾ ಆರ್ಚರ್ಗೆ ವಿಕೆಟ್ ಒಪ್ಪಿಸುವ ಮೂಲಕ ಭಾರತ ತಂಡ 58.1 ಓವರ್ಗಳಲ್ಲಿ 192 ರನ್ಗಳಿಗೆ ಸರ್ವಪತನಗೊಂಡು 227 ರನ್ಗಳ ಸೋಲು ಕಂಡಿತು.
ಇಂಗ್ಲೆಂಡ್ ಪರ ಜ್ಯಾಕ್ ಲೀಚ್ 4, ಜೇಮ್ಸ್ ಆ್ಯಂಡರ್ಸನ್ 3 ಡಾಮ್ ಬೆಸ್, ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.