ಪುಣೆ: ಇಂಗ್ಲೆಂಡ್ ವಿರುದ್ಧ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡೆಯುವ ಮೂಲಕ ಪದಾರ್ಪಣೆ ಪಂದ್ಯದಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿರುವ ಕನ್ನಡಿಗ ಪ್ರಸಿಧ್ ಕೃಷ್ಣ, ತಮಗೆ ಈ ದಿನ ರೋಲರ್ ಕಾಸ್ಟರ್ನಲ್ಲಿ ರೈಡ್ ಮಾಡಿದಂತಿತ್ತು ಎಂದು ಹೇಳಿದ್ದಾರೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 317 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 251ಕ್ಕೆ ಆಲೌಟ್ ಮಾಡಿ 66 ರನ್ಗಳ ಜಯ ಸಾಧಿಸಿತ್ತು. ಪ್ರಸಿಧ್ ಕೃಷ್ಣ 8.1 ಓವರ್ಗಳಲ್ಲಿ 54 ರನ್ ನೀಡಿ 4 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ಜೇಸನ್ ರಾಯ್, ಬೆನ್ ಸ್ಟೋಕ್ಸ್, ಸ್ಯಾಮ್ ಬಿಲ್ಲಿಂಗ್ಸ್ ಮತ್ತು ಟಾಮ್ ಕರ್ರನ್ ವಿಕೆಟ್ ಪಡೆದರು.
-
My first day at work was a roller coaster ride. Never over until it’s over. All’s well that ends well.🤞🏻
— Prasidh Krishna (@prasidh43) March 24, 2021 " class="align-text-top noRightClick twitterSection" data="
Cheers to this special match and many more to come. #TeamIndia #234 pic.twitter.com/UeRj3beDaT
">My first day at work was a roller coaster ride. Never over until it’s over. All’s well that ends well.🤞🏻
— Prasidh Krishna (@prasidh43) March 24, 2021
Cheers to this special match and many more to come. #TeamIndia #234 pic.twitter.com/UeRj3beDaTMy first day at work was a roller coaster ride. Never over until it’s over. All’s well that ends well.🤞🏻
— Prasidh Krishna (@prasidh43) March 24, 2021
Cheers to this special match and many more to come. #TeamIndia #234 pic.twitter.com/UeRj3beDaT
"ನನ್ನ ಮೊದಲ ದಿನದ ಕಾರ್ಯ ರೋಲರ್ ಕಾಸ್ಟರ್ ರೈಡ್ನಂತಿತ್ತು. ಅದು ಸಂಪೂರ್ಣ ಮುಗಿಯುವವರೆಗೂ ಮುಗಿಯುವುದಿಲ್ಲ. ಆದರೆ ಎಲ್ಲವೂ ಉತ್ತಮವಾಗಿಯೇ ಕೊನೆಗೊಳ್ಳುತ್ತದೆ" ಎಂದು ಪಂದ್ಯ ಮುಗಿದ ಬಳಿಕ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಮೊದಲ ಮೂರು ಓವರ್ಗಳಲ್ಲಿ 37ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದ ಕೃಷ್ಣ ನಂತರದ 5.1 ಓವರ್ಗಳಲ್ಲಿ 17 ರನ್ ನೀಡಿ 4 ವಿಕೆಟ್ ಪಡೆದು ಅದ್ಭುತ ಕಮ್ಬ್ಯಾಕ್ ಮಾಡಿದರು.
ಇದನ್ನು ಓದಿ:ಐಸಿಸಿ ಟಿ-20 ರ‍್ಯಾಂಕಿಂಗ್: ಕುಸಿದ ರಾಹುಲ್, 4ನೇ ಸ್ಥಾನಕ್ಕೆ ಬಡ್ತಿ ಪಡೆದ ಕೊಹ್ಲಿ