ಅಹಮದಾಬಾದ್: ಫೆಬ್ರವರಿ ಕೊನೆಯಲ್ಲಿ ಮತ್ತು ಮಾರ್ಚ್ ಆರಂಭದಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಿಗೆ ಹೊಸದಾಗಿ ನಿರ್ಮಿಸಲಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬಹಳ ಕಡಿಮೆ ಪ್ರೇಕ್ಷಕರು ಕಂಡುಬಂದಿತ್ತು. ಆದರೆ, ಶುಕ್ರವಾರದಿಂದ ಆರಂಭವಾಗುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ-20 ಅಂತಾರಾಷ್ಟ್ರೀಯ ಸರಣಿ ಈಗಾಗಲೇ 40,000 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1,10,000 ಆಸನ ಸಾಮರ್ಥ್ಯದ ಈ ಕ್ರೀಡಾಂಗಣ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಪಡೆದಿದೆ. ಇತ್ತೀಚೆಗೆ ಉದ್ಘಾಟನೆಗೊಂಡ ಕ್ರೀಡಾಂಗಣದಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಯೋಜಿಸಲಾಗಿತ್ತು.
ಇದನ್ನು ಓದಿ: ಕತಾರ್ ಓಪನ್: ಇವಾನ್ಸ್ ವಿರುದ್ಧ ಗೆಲುವು ಸಾಧಿಸಿದ ಫೆಡರರ್
"ನಾವು ಟೆಸ್ಟ್ ಪಂದ್ಯಗಳಲ್ಲಿ ನೋಡಿದ್ದಕ್ಕಿಂತ ಹೆಚ್ಚಿನ ಜನಸಂದಣಿಯನ್ನು ನಿರೀಕ್ಷಿಸುತ್ತಿದ್ದೇವೆ. ಈಗಿನಂತೆ, ನಾವು 40,000 ಟಿಕೆಟ್‌ಗಳನ್ನು ಮಾರಾಟ ಮಾಡಲು ಸಮರ್ಥರಾಗಿದ್ದೇವೆ. ಮೊದಲ ಟಿ- 20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸೀಟುಗಳು ತುಂಬಲ್ಪಡುತ್ತವೆ ಎಂದು ನಾವು ನಿರೀಕ್ಷಿಸುತ್ತಿದ್ದೇವೆ" ಎಂದು ಗುಜರಾತ್ ಕ್ರಿಕೆಟ್ ಸಂಘದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಿಕೆಟ್‌ಗಳನ್ನು ಆನ್‌ಲೈನ್ ಜೊತೆಗೆ ಆಫ್‌ಲೈನ್‌ನಲ್ಲಿ ಮೊಟೆರಾದ ಹೋಸ್ಟಿಂಗ್ ಸ್ಥಳದಲ್ಲಿ ಮತ್ತು ನವರಂಗ್‌ಪುರದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಟಿ 20 ಅಂತಾರಾಷ್ಟ್ರೀಯ ಪಂದ್ಯವು ಮಾರ್ಚ್ 12 ರಂದು (ಶುಕ್ರವಾರ) ನಡೆಯಲಿದ್ದು, ಮಾರ್ಚ್ 14, 16, 18 ಮತ್ತು 20 ರಂದು ಉಳಿದ ಪಂದ್ಯಗಳು ನಡೆಯಲಿದೆ.