ETV Bharat / sports

ಅಕ್ಸರ್​ ಪಟೇಲ್​, ಅಶ್ವಿನ್ ಸ್ಪಿನ್​ ಮೋಡಿಗೆ ಇಂಗ್ಲೆಂಡ್ ಧೂಳಿಪಟ: 112ಕ್ಕೆ ಮುಗಿದ ಆಂಗ್ಲರ ಆಟ - Axar Patel 6 wicket haul

ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೇವಲ 3ನೇ ಓವರ್​ನಲ್ಲಿ 100ನೇ ಟೆಸ್ಟ್​ ಪಂದ್ಯವನ್ನಾಡುತ್ತಿರುವ ಇಶಾಂತ್​ ಶರ್ಮಾ ಡೊಮೆನಿಕ್​ ಸಿಬ್ಲೀ(0) ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಭಾರತ ಮತ್ತು ಇಂಗ್ಲೆಂಡ್ ಅಹರ್ನಿಶಿ ಟೆಸ್ಟ್​
112 ಕ್ಕೆ ಇಂಗ್ಲೆಂಡ್ ಆಲೌಟ್​
author img

By

Published : Feb 24, 2021, 6:35 PM IST

ಅಹ್ಮದಾಬಾದ್​: ಸ್ಪಿನ್ನರ್​ಗಳಾದ ಅಶ್ವಿನ್ ಮತ್ತು ಅಕ್ಸರ್​ ಪಟೇಲ್ ದಾಳಿಗೆ ತತ್ತರಿಸಿದ ಇಂಗ್ಲೆಡ್ ತಂಡ ಮೂರನೇ ಟೆಸ್ಟ್​ ಪಂದ್ಯದಲ್ಲಿ ಕೇವಲ 112 ರನ್​ಗಳಿಗೆ ಸರ್ವಪತನ ಕಂಡಿದೆ.

ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೇವಲ 3ನೇ ಓವರ್​ನಲ್ಲಿ 100ನೇ ಟೆಸ್ಟ್​ ಪಂದ್ಯವನ್ನಾಡುತ್ತಿರುವ ಇಶಾಂತ್​ ಶರ್ಮಾ ಡೊಮೆನಿಕ್​ ಸಿಬ್ಲೀ(0) ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಆದರೆ ನಂತರ ದಾಳಿಗಿಳಿದ ಸ್ಪಿನ್ನರ್​ಗಳಾದ ಅಕ್ಸರ್​ ಪಟೇಲ್ ಹಾಗೂ ಅಶ್ವಿನ್ ಇಂಗ್ಲೆಂಡ್​​ ಬ್ಯಾಟ್ಸ್​ಮನ್​ಗಳನ್ನು ಕ್ರೀಸ್​ನಲ್ಲಿ ನೆಲೆಯೂರದಂತೆ ಮಾಡಿದರು. ಅಕ್ಸರ್​ ಪಟೇಲ್​ 38 ರನ್​ ನೀಡಿ 6 ವಿಕೆಟ್ ಪಡೆದರೆ, ಆರ್​.ಅಶ್ವಿನ್​ 26 ರನ್​ ನೀಡಿ 3 ವಿಕೆಟ್ ಪಡೆದು ಅಲ್ಪ ಮೊತ್ತಕ್ಕೆ ಆಂಗ್ಲರ ಪತನಕ್ಕೆ ಕಾರಣರಾದರು.

ಒಟ್ಟಾರೆ ಇಂಗ್ಲೆಂಡ್​ 48.4 ಓವರ್​ಗಳಲ್ಲಿ 112 ರನ್​ಗಳಿಗೆ ಆಲೌಟ್ ಆಯಿತು. ಜ್ಯಾಕ್ ಕ್ರಾಲೆ 84 ಎಸೆತಗಳಲ್ಲಿ 10 ಬೌಂಡರಿ ಸಹಿತ 53 ರನ್​ ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. 17 ರನ್​ ಗಳಿಸಿದ ನಾಯಕ ರೂಟ್​ 2ನೇ ಗರಿಷ್ಠ ಸ್ಕೋರರ್​ ಆದರು. ಸಿಬ್ಲೀ ಮತ್ತು ಬೈರ್ಸ್ಟೋವ್​ ಸೊನ್ನೆ ಸುತ್ತಿದರೆ, ಸ್ಟೋಕ್ಸ್​ 6, ಪೋಪ್​ 1, ಫೋಕ್ಸ್​ 12, ಆರ್ಚರ್​ 11, ಲೀಚ್​ 2, ಬ್ರಾಡ್​ 3 ರನ್​ ಗಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.