ಪುಣೆ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಶೆ ಮೂಡಿಸದ ಆಲ್ರೌಂಡರ್ ಅರ್ಧಶತಕ ಸಿಡಿಸಿ ಮಿಂಚಿದ್ದಲ್ಲದೆ, ವಿಶ್ವ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
ಕೃನಾಲ್ ಪಾಂಡ್ಯ ಕೇವಲ 26 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ವಿಶ್ವ ದಾಖಲೆಗೆ ಪಾತ್ರರಾದರು. ಅವರು ಒಟ್ಟಾರೆ 31 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 58 ರನ್ ಗಳಿಸಿದರು.
-
Century stand ✅
— BCCI (@BCCI) March 23, 2021 " class="align-text-top noRightClick twitterSection" data="
Half centuries for @klrahul11 & @krunalpandya24 ✅
300+ on the board ✅
Brilliant batting display from #TeamIndia as they post 317/5 in 50 overs. @Paytm #INDvENG pic.twitter.com/9iU3lmZQBz
">Century stand ✅
— BCCI (@BCCI) March 23, 2021
Half centuries for @klrahul11 & @krunalpandya24 ✅
300+ on the board ✅
Brilliant batting display from #TeamIndia as they post 317/5 in 50 overs. @Paytm #INDvENG pic.twitter.com/9iU3lmZQBzCentury stand ✅
— BCCI (@BCCI) March 23, 2021
Half centuries for @klrahul11 & @krunalpandya24 ✅
300+ on the board ✅
Brilliant batting display from #TeamIndia as they post 317/5 in 50 overs. @Paytm #INDvENG pic.twitter.com/9iU3lmZQBz
ಇದನ್ನು ಓದಿ:ಅರ್ಧಶತಕವನ್ನು ದಿವಂಗತ ತಂದೆಗೆ ಅರ್ಪಿಸಿ ಕಣ್ಣೀರಿಟ್ಟ ಕೃನಾಲ್ ಪಾಂಡ್ಯ
ಪಾಂಡ್ಯಗೂ ಮುನ್ನ ಜಾನ್ ಮೋರಿಸ್ 35 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು ಪದಾರ್ಪಣೆ ಆಟಗಾರನೊಬ್ಬನ ವೇಗದ ಅರ್ಧಶತಕವಾಗಿತ್ತು.
ಪದಾರ್ಪಣೆ ಪಂದ್ಯದಲ್ಲಿ ಗರಿಷ್ಠ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ 2ನೇ ಬ್ಯಾಟ್ಸ್ಮನ್ ಎಂಬ ದಾಖಲೆಗೂ ಕೃನಾಲ್ ಪಾತ್ರರಾಗಿದ್ದಾರೆ. ಕೃನಾಲ್ 187.10ರ ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದರೆ, ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹೀದ್ ಅಫ್ರಿದಿ 40 ಎಸೆತಗಳಲ್ಲಿ 102 ರನ್ ಗಳಿಸುವ ಮೂಲಕ 255ರ ಸ್ಟ್ರೈಕ್ ರೇಟ್ ಹೊಂದಿರುವುದು ಪದಾರ್ಪಣೆ ಪಂದ್ಯದಲ್ಲಿನ ದಾಖಲೆಯಾಗಿದೆ.