ETV Bharat / sports

4ನೇ ಟೆಸ್ಟ್ ಪಂದ್ಯದಿಂದ ಪುಕೋವ್​ಸ್ಕಿ ಔಟ್: ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಮಾರ್ಕಸ್ ಹ್ಯಾರಿಸ್ - ಟೆಸ್ಟ್ ಪಂದ್ಯದಿಂದ ಪುಕೋವ್​ಸ್ಕಿ ಔಟ್

ಮೂರನೇ ಟೆಸ್ಟ್ ಪಂದ್ಯದ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದ ಆರಂಭಿಕ ಆಟಗಾರ ಪುಕೋವ್​ಸ್ಕಿ ಬದಲು ಮಾರ್ಕಸ್ ಹ್ಯಾರಿಸ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್​​​ ಹೇಳಿದ್ದಾರೆ.

Will Pucovski ruled out of Gabba Test
ಪುಕೋವ್​ಸ್ಕಿ
author img

By

Published : Jan 14, 2021, 9:23 AM IST

ಬ್ರಿಸ್ಬೇನ್: ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಪುಕೋವ್​ಸ್ಕಿ ಭಾರತ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಆಸ್ಟ್ರೇಲಿಯಾ ಟೆಸ್ಟ್ ನಾಯಕ ಟಿಮ್ ಪೇನ್​​​ ಖಚಿತಪಡಿಸಿದ್ದಾರೆ.

ಪುಕೋವ್​ಸ್ಕಿ ಬದಲಿಗೆ, ಮಾರ್ಕಸ್ ಹ್ಯಾರಿಸ್ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಯಲಿದ್ದಾರೆ. ಮೂರನೇ ಟೆಸ್ಟ್ ಪಂದ್ಯದ ವೇಳೆ ಭುಜದ ನೋವಿನಿಂದ ಕ್ಷೇತ್ರರಕ್ಷಣೆ ತರಬೇತಿಗೆ ಇಳಿಯದ ಪುಕೋವ್​ಸ್ಕಿ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ನೆಟ್ಟಿನಲ್ಲೂ ಅಭ್ಯಾಸಕ್ಕೆ​ ಆಗಮಿಸಿರಲಿಲ್ಲ.

"ವಿಲ್ ಪುಕೋವ್​ಸ್ಕಿ ನಾಳೆ ಆಡುವುದಿಲ್ಲ, ಅವರು ಇಂದು ಬೆಳಗ್ಗೆ ಅಭ್ಯಾಸ ನಡೆಸಲು ಯತ್ನಿಸಿದ್ರು, ಆದರೆ ಅವರಿಗೆ ಸಾಧ್ಯವಾಗಲಿಲ್ಲ. ಅವರು ಈ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದು, ಮಾರ್ಕಸ್ ಹ್ಯಾರಿಸ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಮಾರ್ಕಸ್ ಏನು ಮಾಡುತ್ತಾರೆಂದು ನಾವು ಎದುರು ನೋಡುತ್ತಿದ್ದೇವೆ "ಎಂದು ಪೇನ್​​ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

"ಹ್ಯಾರಿಸ್ ಯಾವುದೇ ಗಡಿಬಿಡಿಯಿಲ್ಲದ ಉತ್ತಮ ಆಟಗಾರ, ಅವನು ಈಗ ಬಹಳ ಸಮಯದಿಂದ ಉತ್ತಮವಾಗಿ ಆಡಿದ್ದಾರೆ. ಅವನು ತನ್ನ ಅವಕಾಶಕ್ಕೆ ಅರ್ಹನಾಗಿದ್ದಾನೆ "ಎಂದು ಪೇನ್​​​​ ಹೇಳಿದ್ದಾರೆ.

ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಬಗ್ಗೆ ಮಾತನಾಡುತ್ತಾ,"ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಕಾರಣದಿಂದ ಪ್ರತಿ ಟೆಸ್ಟ್ ಮುಖ್ಯವಾಗಿದೆ. ಆಸ್ಟ್ರೇಲಿಯಾ ಪರವಾಗಿ ನೀವು ಆಡುವ ಪ್ರತಿಯೊಂದು ಟೆಸ್ಟ್ ಪಂದ್ಯವೂ ದೊಡ್ಡದಾಗಿದೆ, ಈ ಟೆಸ್ಟ್ ಬಲವಾದವರ ವಿರುದ್ಧ ಎಂಬುದನ್ನೂ ತಿಳಿದಿದ್ದೇವೆ, ಆದರೆ ನಾವು ಅದರ ಮಾರ್ಗವನ್ನು ಬದಲಾಯಿಸುವುದಿಲ್ಲ. ಕೌಶಲ್ಯದ ಮೇಲೆ ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು" ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.